ಸೆರೆಹಿಡಿದ ಕಾಡಾನೆ ದೊಡ್ಡಹರಾವೆಗೆ ಸ್ಥಳಾಂತರ

| Published : Nov 04 2025, 01:02 AM IST

ಸಾರಾಂಶ

ಶೃಂಗೇರಿ: ಭಗವತಿ ಅರಣ್ಯದ ಸಮೀಪ ಸೆರೆಹಿಡಿದ ಕಾಡಾನೆಯನ್ನು ನಾಗರ ಹೊಳೆ ಸಮೀಪದ ದೊಡ್ಡ ಹರಾವೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.

ಶೃಂಗೇರಿ: ಭಗವತಿ ಅರಣ್ಯದ ಸಮೀಪ ಸೆರೆಹಿಡಿದ ಕಾಡಾನೆಯನ್ನು ನಾಗರ ಹೊಳೆ ಸಮೀಪದ ದೊಡ್ಡ ಹರಾವೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.

ಕಾಡಾನೆ ಸೆರೆಹಿಡಿಯಲು ದುಬಾರೆ, ಹಾರಂಗಿ ಆನೆ ಶಿಬಿರದಿಂದ ಭಾನುವಾರ ಐದು ಆನೆಗಳ ತಂಡ ಕೆರೆ ಕಟ್ಟೆಗೆ ಕರೆತರಲಾಗಿತ್ತು. ಸಂಜೆ ವೇಳೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಭಗವತಿ ಅರಣ್ಯದ ಸಮೀಪ ದುಬಾರೆ ಕ್ಯಾಂಪ್ ನ 3 ಆನೆಗಳು ಭಾನುವಾರ ರಾತ್ರಿ ಸೆರೆಹಿಡಿಯುವಲ್ಲಿ ಯಶಸ್ವಿ ಯಾಯಿತು.

ರಾತ್ರಿಯೇ ಆನೆಗಳನ್ನು ಲಾರಿಯಲ್ಲಿ ಕೆರೆಕಟ್ಟೆ ಎಸ್ ಕೆ. ಬಾರ್ಡರ್ ಮಾರ್ಗವಾಗಿ ನಾಗರಹೊಳೆ ಸಮೀಪದ ಹಾರವೆ ಆನೆ ಶಿಬಿರಕ್ಕೆ ಕಳುಹಿಸಲಾಯಿತು. ದುಬಾರೆ, ಹಾರಂಗಿ ಶಿಬಿರದಿಂದ ಬಂದಿದ್ದ ಆನೆಗಳು ಕೆರೆಕಟ್ಟೆ ಯಲ್ಲಿ ಸೆರೆಹಿಡಿದ ಆನೆಯೊಂದಿಗೆ ಮರಳಿತು.

ಕಾರ್ಯಾಚರಣೆ ತಂಡದಲ್ಲಿ ಬೆಂಗಳೂರು ಎಪಿಪಿಸಿಇಎಫ್ ಮನೋಜ್ ರಾಜನ್, ಮಂಗಳೂರು ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ಡಿಸಿಎಫ್ ಶಿವರಾಮ್ ಬಾಬು,ಎಸಿಎಫ್ ಗಳಾದ ದಿನೇಶ್, ಸತೀಶ್, ಕೆರೆಕಟ್ಟೆ ವನ್ಯ ಜೀವಿ ವಲಯದ ಆರ್ ಎಫ್ ಒ ಅನಿಲ್,ಶೃಂಗೇರಿ ವಲಯಾರಣ್ಯಧಿಕಾರಿ ಮಧುಕರ್,ಅರ‍ವಳಿಕೆ ತಂಡದ ಮುಜಿಬರ್,ಶಾರ್ಪ್ ಶೂಟರ್ ಅಕ್ರಮ್ ಸ್ಥಳೀಯ ಅಧಿಕಾರಿ, ಸಿಬ್ಬಂದಿ ಇದ್ದರು.

3 ಶ್ರೀ ಚಿತ್ರ 3-

ಶೃಂಗೇರಿ ಕೆರೆಕಟ್ಟೆ ಬಳಿ ನರಹಂತಕ ಕಾಡಾನೆಯನ್ನು ಸೆರೆಹಿಡಿದು ನಾಗರಹೊಳೆ ಸಮೀಪದ ದೊಡ್ಡ ಹಾರವೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.