ಸಾರಾಂಶ
ಕಾಲೇಜಿನ ಫೋಟೋಗ್ರಾಫಿ ಆ್ಯಂಡ್ ಡಿಜಿಟಲ್ ಕ್ಲಬ್‌ನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿದ ಕಂದೇಶ್ವರ್, ತಮ್ಮ 25 ವರ್ಷದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು ಮತ್ತು ಫೋಟೋಗ್ರಾಫಿ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಫೋಟೋಗ್ರಫಿ ಮತ್ತು ಡಿಜಿಟಲ್ ಕ್ಲಬ್ ಆಶ್ರಯದಲ್ಲಿ ಫೋಟೋಗ್ರಫಿ ಕುರಿತು ವಿಚಾರ ಸಂಕಿರಣ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಛಾಯಾಚಿತ್ರಗ್ರಾಹಕ ಸಂತೋಷ್ ಕುಂದೇಶ್ವರ್ ಅವರ ಛಾಯಾಚಿತ್ರ ಪ್ರದರ್ಶನ ನಡೆಯಿತು.ಕಾಲೇಜಿನ ಫೋಟೋಗ್ರಾಫಿ ಆ್ಯಂಡ್ ಡಿಜಿಟಲ್ ಕ್ಲಬ್‌ನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿದ ಕಂದೇಶ್ವರ್, ತಮ್ಮ 25 ವರ್ಷದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು ಮತ್ತು ಫೋಟೋಗ್ರಾಫಿ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ಪ್ರಕೃತಿಯ ಸೊಬಗನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯುವುದೇ ರೋಮಾಂಚನ ಅನುಭವ ಎಂದ ಅವರು ತಮ್ಮ 30ಕ್ಕೂ ಹೆಚ್ಚಿನ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಚಿತ್ರಗಳನ್ನು ಪ್ರದರ್ಶಿಸಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ಜಾನ್ ಡಿಸೋಜ ಮಾತನಾಡಿ, ಫೋಟೋಗ್ರಫಿ ಕುರಿತ ಆಸಕ್ತಿ ಮತ್ತು ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ವಿಭಿನ್ನ ವೇದಿಕೆಯನ್ನು ಒದಗಿಸಿ ಪ್ರತಿಭೆಯನ್ನ ಪೋಷಿಸುತ್ತಿರುವದರ ಕುರಿತು ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಕುಂದಾಪುರ ಪ್ರೆಸ್‌ಕ್ಲಬ್ ಅಧ್ಯಕ್ಷ ನಾಗರಾಜ್ ರಾಯಪ್ಪನ ಮಠ, ಡಾ. ರಜತ ಕುಂದೇಶ್ವರ್, ಕ್ಲಬ್ ಸಂಯೋಜಕರಾದ ಜಯಶೀಲ್ ಕುಮಾರ್ ಮತ್ತು ಜಿತೇಶ್ ಕುಮಾರ್ ಎ.ಎಚ್., ಕಾಲೇಜಿನ ಪ್ರಶಸ್ತಿ ವಿಜೇತ ಛಾಯಾಚಿತ್ರಗ್ರಾಹಕರಾದ ಅಮೃತ್ ಬೀಜಾಡಿ, ದಿನೇಶ್ ಅಮೀನ್, ನಾಗೇಶ್, ಜಾವೇದ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿಸಿಎ ವಿದ್ಯಾರ್ಥಿನಿ ನವ್ಯ ಕಾರ್ಯಕ್ರಮ ನಿರ್ವಹಿಸಿದರು.