ಬೈಲಹೊಂಗಲ: ಬೈಲಹೊಂಗಲ-ಧಾರವಾಡ ಮುಖ್ಯರಸ್ತೆಯ ನಯಾನಗರ ಗ್ರಾಮದ ಬಳಿ ಕಾರೊಂದು ಹೊತ್ತಿ ಉರಿದಿದೆ. ಅದೃಷ್ಟವಶಾತ್‌ ಅದರಲ್ಲಿ ಪ್ರಯಾಣಿಸುತ್ತಿದ್ದ ಐವರು ಚಾಲಕನ ಮುಂಜಾಗ್ರತೆ ಹಾಗೂ ಸಮಯ ಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾಗಿದ್ದಾರೆ.

ಬೈಲಹೊಂಗಲ: ಬೈಲಹೊಂಗಲ-ಧಾರವಾಡ ಮುಖ್ಯರಸ್ತೆಯ ನಯಾನಗರ ಗ್ರಾಮದ ಬಳಿ ಕಾರೊಂದು ಹೊತ್ತಿ ಉರಿದಿದೆ. ಅದೃಷ್ಟವಶಾತ್‌ ಅದರಲ್ಲಿ ಪ್ರಯಾಣಿಸುತ್ತಿದ್ದ ಐವರು ಚಾಲಕನ ಮುಂಜಾಗ್ರತೆ ಹಾಗೂ ಸಮಯ ಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾಗಿದ್ದಾರೆ. ನಯಾನಗರ ಗ್ರಾಮದಿಂದ ಖನಗಾಂವ ಗ್ರಾಮಕ್ಕೆ ತೆರಳುತ್ತಿದ್ದಾಗ ವಾಹನದ ಬ್ಯಾಟರಿ ಆಫ್ ಆಗಿ ಹೊಗೆ ಬರಲು ಪ್ರಾರಂಭಿಸಿದ್ದು, ಚಾಲಕ ಖನಗಾಂವ ಗ್ರಾಮದ ಸಂಜೀವ್ ಗೌಡಪ್ಪ ಮರಲಿಂಗಣ್ಣವರ, ಅನ್ನಪೂರ್ಣ ಸಂಜೀವ ಮರಲಿಂಗಣ್ಣವರ, ಶೋಭಾ ಪಟ್ಟಣಶೆಟ್ಟಿ, ರೂಪಾ ವನಕಿ, ಸುನಂದಾ ಮರೀಹಾಳ ಎಲ್ಲರೂ ಕಾರಿನಿಂದ ಇಳಿದು ಹೊರಬಂದಿದ್ದಾರೆ. ಬಳಿಕ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಷ್ಟರೊಳಗೆ ಕಾರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬಳಿಕ, ಸ್ಥಳಕ್ಕೆ ಪಿಎಸ್ಐ ಗುರುರಾಜ ಕಲಬುರ್ಗಿ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು. ಈ ಬಗ್ಗೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.