ಕುಮದ್ವತಿ ಸೇತುವೆ ಬಳಿ ಕಾರುಗಳ ಡಿಕ್ಕಿ: ಮಹಿಳೆ ಸಾವು

| Published : Apr 17 2025, 12:06 AM IST

ಸಾರಾಂಶ

Car collision near Kumdvati Bridge: Woman dies

ಶಿಕಾರಿಪುರ: ಪರಸ್ಪರ ಮುಖಾಮುಖಿಯಾಗಿ ಎರಡು ಕಾರು ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ಸಂಭವಿಸಿದೆ.

ಶಿಕಾರಿಪುರದಿಂದ ಶಿರಾಳಕೊಪ್ಪ ಮಾರ್ಗವಾಗಿ ಸೊರಬ ತಾಲೂಕಿನ ಆನವಟ್ಟಿಗೆ ತೆರಳುತ್ತಿದ್ದ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದ ಕಾಂತರಾಜ್ ಅವರು ಹೊರವಲಯ ಕುಮದ್ವತಿ ನದಿ ಸೇತುವೆ ಬಳಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾಂತರಾಜು ಅವರ ಪತ್ನಿ ರೂಪ [40] ಸ್ಥಳದಲ್ಲಿಯೇ ಮೃತಪಟ್ಟಿದ್ದು ಜತೆಯಲ್ಲಿದ್ದ ಪತಿ ಕಾಂತರಾಜು ಹಾಗೂ ಮೃತ ರೂಪ ಸಹೋದರಿ ರೇಖಾ ಅವರಿಗೆ ತೀವ್ರ ಸ್ವರೂಪದ ಗಾಯವಾಗಿ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಇನ್ನೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾಳಿಯಪ್ಪನ್, ಸೋಮಶೇಖರ್, ಸುರೇಶ್ ಕುಮಾರ್ ಹಾಗೂ ಯಮುನಪ್ಪ ಅವರಿಗೆ ಗಾಯಗಳಾಗಿದ್ದು ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

--

ಶಿಕಾರಿಪುರ ಹೊರವಲಯ ಕುಮದ್ವತಿ ಸೇತುವೆ ಬಳಿ ಮುಖಾಮುಖಿ ಡಿಕ್ಕಿಯಾದ ಕಾರುಗಳು

[ಫೋಟೋ ಫೈಲ್ ನಂ.16 ಕೆ.ಎಸ್.ಕೆ.ಪಿ 1]