ಸಾರಾಂಶ
ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಸಕ್ಲೇನ್ ಪಾಷ (28) ಮೃತರು. ಗಾಯಾಳು ಚನ್ನಪಟ್ಟಣ ತಾಲೂಕು ಮಳೂರು ಗ್ರಾಮದ ಹೊಂಬಾಳಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಮನಗರ:
ರಸ್ತೆ ವಿಭಜಕ ದಾಟಿದ ಇನ್ನೋವಾ ಕಾರು ಎದುರಿಗೆ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಂಬಾಪುರ ಗೇಟ್ ಬಳಿ ಬುಧವಾರ ನಡೆದಿದೆ.ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಸಕ್ಲೇನ್ ಪಾಷ (28) ಮೃತರು. ಗಾಯಾಳು ಚನ್ನಪಟ್ಟಣ ತಾಲೂಕು ಮಳೂರು ಗ್ರಾಮದ ಹೊಂಬಾಳಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿ ಬೆಂಗಳೂರು - ಮೈಸೂರು ರಸ್ತೆಗೆ ಬಂದಿದೆ. ಈ ವೇಳೆ ಮೈಸೂರು ಕಡೆಗೆ ತೆರಳುತ್ತಿದ್ದ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡಿದಿದೆ.
ಡಿಕ್ಕಿಯ ರಭಸಕ್ಕೆ ಎನ್ ಫೀಲ್ಡ್ ಬೈಕ್ ಸವಾರ ಮದ್ದೂರು ಮೂಲದ ಸಕ್ಲೇನ್ ಪಾಷ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 3ಕೆಆರ್ ಎಂಎನ್ 5.ಜೆಪಿಜಿರಾಮನಗರ ತಾಲೂಕಿನ ಕುಂಬಾಪುರ ಕಾಲೋನಿಯಲ್ಲಿ ಇನೋವಾ ಕಾರು ಬೈಕಿಗೆ ಡಿಕ್ಕಿ ಹೊಡೆದಿರುವುದು.