ಸಾರಾಂಶ
ಕಾರುಗಳ ಮಧ್ಯ ಮುಖಾಮುಖಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡು ದಾರುಣ ಘಟನೆ ಸಮೀಪದ ಇಂಚಲ ಗ್ರಾಮದ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮನೆಯ ವಾಸ್ತುಶಾಂತಿ ನಿಮಿತ್ತ ಬಟ್ಟೆ ಖರೀದಿಸಿ ತೆರಳಿದ್ದ ವೇಳೆ ಕಾರುಗಳ ಮಧ್ಯ ಮುಖಾಮುಖಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡು ದಾರುಣ ಘಟನೆ ಸಮೀಪದ ಇಂಚಲ ಗ್ರಾಮದ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ.ಪಟ್ಟಣದ ಲದ್ದಿಗಟ್ಟಿ ನಿವಾಸಿಯಾದ ಮಂಗಲಾ ಮಹಾಂತೇಶ ಭರಮನಾಯ್ಕರ (50), ಚಾಲಕ ಸಂಪಗಾಂವ ಗ್ರಾಮದ ಶ್ರೀಶೈಲ ಸಿದ್ದನಗೌಡ ನಾಗನಗೌಡರ(40) ಮೃತಪಟ್ಟಿದ್ದಾರೆ. ರಾಯನಾಯ್ಕ ಭರಮನಾಯ್ಕರ, ಗಂಗವ್ವ ರಾಯನಾಯ್ಕ ಭರಮನಾಯ್ಕರ, ಮಂಜುಳಾ ಶ್ರೀಶೈಲ ನಾಗನಗೌಡರ, ಇಂಚಲ ಗ್ರಾಮದ ಚಾಲಕ ಸುಭಾನಿ ಲಾಲಸಾಬ ವಕ್ಕುಂದ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ಬೈಲಹೊಂಗಲದ ಭರಮನಾಯ್ಕರ ಕುಟುಂಬದವರು ಜ.18 ರಂದು ಜರುಗಲಿರುವ ಮನೆಯ ವಾಸ್ತುಶಾಂತಿ ನಿಮಿತ್ತ ಕೊಣ್ಣೂರ ಗ್ರಾಮಕ್ಕೆ ಬಟ್ಟೆ ಖರೀದಿ ತೆರಳಿದ್ದರು. ಮರಳಿ ವಾಪಸ್ ಬರುವಾಗ ಎದುರಿಗೆ ಬರುತ್ತಿರುವ ಕಾರ ಇಂಚಲದಿಂದ ರಾಜ್ಯ ಹೆದ್ದಾರಿ ತೆರಳುವಾಗ ಇಂಚಲ ಗ್ರಾಮದ ಸಮೀಪ ಅಪಘಾತ ಸಂಭವಿಸಿದೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಎಸ್ಪಿ ವೇಣುಗೋಪಾಲ ಎಂ, ಡಿವೈಎಸ್‌ಪಿ ರವಿ ನಾಯ್ಕ, ಮುರಗೋಡ ಪಿಐ ಈರಯ್ಯ ಮಠಪತಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.