ಎಲ್ಲೇಮಾಳ ರಸ್ತೆಯಲ್ಲಿ ಕಾರು ಪಲ್ಟಿ: ಇಬ್ಬರಿಗೆ ಗಾಯ

| Published : Jun 08 2025, 01:31 AM IST

ಸಾರಾಂಶ

ಹನೂರು: ಪಟ್ಟಣದ ಹೊರವಲಯದ ಎಲ್ಲೇಮಾಳ ರಸ್ತೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಇಬ್ಬರಿಗೆ ಗಾಯಳಾಗಿದೆ.

ಹನೂರು: ಪಟ್ಟಣದ ಹೊರವಲಯದ ಎಲ್ಲೇಮಾಳ ರಸ್ತೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಇಬ್ಬರಿಗೆ ಗಾಯಳಾಗಿದೆ. ಈ ಘಟನೆಯಲ್ಲಿ ಬೆಂಗಳೂರು ಮೂಲದ ಕಗ್ಗಲಿಪುರದ ನಿವಾಸಿ ಪವಿತ್ರ(24) ಹಾಗೂ ಲಕ್ಷ್ಮಮ್ಮ(55) ಗಾಯಾಳುಗಳು. ಬೆಂಗಳೂರಿನಿಂದ ಮಹದೇಶ್ವರ ಬೆಟ್ಟದತ್ತ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಎಲ್ಲೇಮಾಳ ರಸ್ತೆಯಲ್ಲಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಕೂಡಲೇ ಸ್ಥಳೀಯರು ಗಾಯಗೊಂಡಿರುವ ಇಬ್ಬರನ್ನು ಆಂಬ್ಯುಲೆನ್ಸ್‌ ಮೂಲಕ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಿದ್ದಾರೆ. ಹನೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.