ಸಾರಾಂಶ
ಸಂಚಾರಿ ಪೊಲೀಸರು ಕಾರನ್ನು ಠಾಣೆ ವಶಕ್ಕೆ ಪಡೆದುಕೊಂಡಿದ್ದು. ಮಾಲಕನಿಗೆ ದಂಡ ವಿಧಿಸಿದ್ದಾರೆ. ಮಹಿಳೆ ಕ್ಲಾಸ್ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,
ಬೆಳ್ತಂಗಡಿ: ಖಾಸಗಿ ರಸ್ತೆಗೆ ಅಡ್ಡಲಾಗಿ ಎರಡು ಗಂಟೆಗೂ ಅಧಿಕ ಸಮಯ ಕಾರು ನಿಲ್ಲಿಸಿ ಹೋಗಿದ್ದ ಮಾಲಕ, ರಾಜಕಾರಣಿಯೊಬ್ಬರಿಗೆ ಸಂಚಾರಿ ಪೊಲೀಸರ ಮುಂದೆಯೇ ಮಹಿಳೆ ಹಾಗೂ ಸಾರ್ವಜನಿಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ಭಾನುವಾರ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ಶ್ರೀ ಗುರುದೇವ ಬ್ಯಾಂಕ್ ಪ್ರಧಾನ ಕಚೇರಿಗೆ ಹಾಗೂ ಖಾಸಗಿ ಮನೆಗೆ ಹೋಗುವ ರಸ್ತೆಗೆ ಭಾನುವಾರ ಅಪರಾಹ್ನ ಕಾರನ್ನು ಮಾಲಕ ಪಾರ್ಕ್ ಮಾಡಿ ಬೇರೆಡೆ ಹೋಗಿದ್ದರು. ಕಾರು ತೆಗೆಯಲು ಎಷ್ಟೇ ಕರೆ ಮಾಡಿ ತಿಳಿಸಿದರೂ ಅವರು ಕ್ಯಾರೇ ಮಾಡಿರಲ್ಲಿಲ್ಲ. ಬ್ಯಾಂಕ್ ಸಭೆಗೆ ಬರಬೇಕಾದ ಸದಸ್ಯರ ಕಾರುಗಳ ಒಳಪ್ರವೇಶ ಮಾಡಲು ಸಾಧ್ಯವಾಗಿರಲ್ಲಿಲ್ಲ, ಪಕ್ಕದ ಖಾಸಗಿ ಮನೆಯ ಮಹಳೆಯೊಬ್ಬರು ವಯಸ್ಸಾದ ತಾಯಿ ಜೊತೆ ಬೆಂಗಳೂರಿಗೆ ಹೋಗಲು ರಸ್ತೆ ಕಡೆ ಬರುವಾಗ ಕಾರು ಅಡ್ಡಲಾಗಿತ್ತು. ಕೊನೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರನ್ನು ಕರೆಸಲಾಯಿತು.ಖಾಸಗಿ ಮನೆಯ ಮಹಿಳೆ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಕಾರು ಮಾಲಕರಿಗೆ ಕರೆ ಮಾಡಿ ತಕ್ಷಣ ಬರಲು ತಿಳಿಸಿದರೂ ತಡವಾಗಿ 2.30ಕ್ಕೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರ ಮುಂದೆಯೇ ಮಹಿಳೆ ಹಾಗೂ ಸಾರ್ವಜನಿಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು, ಕಾರು ಮಾಲಕ ಮಹಿಳೆಗೆ ಸಾರ್ವಜನಿಕರ ಮುಂದೆ ಕ್ಷಮೆ ಕೇಳಿದ್ದಾನೆ. ಬಳಿಕ ಸಂಚಾರಿ ಪೊಲೀಸರು ಕಾರನ್ನು ಠಾಣೆ ವಶಕ್ಕೆ ಪಡೆದುಕೊಂಡಿದ್ದು. ಮಾಲಕನಿಗೆ ದಂಡ ವಿಧಿಸಿದ್ದಾರೆ. ಮಹಿಳೆ ಕ್ಲಾಸ್ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,