ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜೀವನದಲ್ಲಿ ಮಹತ್ತರ ತಿರುವ ಪಡೆದುಕೊಳ್ಳುವ ಕಾಲಘಟ್ಟ ವಯಸ್ಸು ನಲವತ್ತು. ಆರೋಗ್ಯದ ಬಗ್ಗೆ ಹೆಚ್ಚು ಮಹತ್ವ ವಹಿಸಬೇಕಾದ ಸಮಯ ಇದಾಗಿದೆ ಎಂದು ಶಿಕ್ಷಕಿ ದೀಪಾ ಕುಬಸದ್ ಹೇಳಿದರು.ಇಲ್ಲಿನ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ನಗರದ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೈಫ್ 40+ ಕುರಿತು ಉಪನ್ಯಾಸ ನೀಡಿದ ಅವರು, ನಲವತ್ತು ವಯಸ್ಸು ದಾಟಿದ ಸಂದರ್ಭದಲ್ಲಿ ಜೀವನದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ತಿಳಿಸಿದರು.
ಪರಿಶುದ್ಧ ಹಾಗೂ ಸಾತ್ವಿಕ ಆರೋಗ್ಯ ಪದ್ಧತಿ ಅಳವಡಿಸಿಕೊಳ್ಳಬೇಕು. ದೈಹಿಕ ವ್ಯಾಯಾಮ, ನಡಿಗೆ, ಯೋಗ ಹಾಗೂ ಪ್ರಾಣಾಯಾಮ ಅಭ್ಯಾಸ ದಿನನಿತ್ಯ ಮಾಡ ಬೇಕು. ಸಮಾಧಾನ, ತಾಳ್ಮೆಯಿಂದ ವರ್ತಿಸುವುದು ತುಂಬಾ ಅಗತ್ಯ. ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳಬೇಕು ಎಂದರು.ಬಿಡುವಿನ ಅವಧಿಯನ್ನು ಅರ್ಥಪೂರ್ಣವಾಗಿ ವಿನಿಯೋಗಿಸಬೇಕು. ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಜೀವನದ ಪ್ರಮುಖ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ಎಂದು ಹೇಳಿದರು. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ನಿರಂತರವಾಗಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಆರೋಗ್ಯ ಜಾಗೃತಿ ಬಗ್ಗೆಯೂ ವಿಶೇಷ ಶಿಬಿರ ಹಾಗೂ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಸುಮತಿ ಕುಮಾರ ಸ್ವಾಮಿ, ಡಾ. ಪರಮೇಶ್ವರ್ ಶಿಗ್ಗಾವ್, ಕಿಶೋರ್ ಕುಮಾರ್, ಡಾ. ಧನಂಜಯ, ನಾಗವೇಣಿ, ಗೀತಾ ಚಿಕ್‌ಮಠ್, ಕೇಶವಪ್ಪ, ಚಂದ್ರಶೇಖರಯ್ಯ ಸೇರಿದಂತೆ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.