ಬಸವ ಜಯಂತಿ ನಿಮಿತ್ತ ಗಿರಿಕಿ ಬಂಡಿ ಎಳೆಯುವ ಸ್ಪರ್ಧೆ

| Published : May 12 2024, 01:16 AM IST

ಸಾರಾಂಶ

ಮಾನ್ವಿಯಲ್ಲಿ ಸ್ಪರ್ಧೆಗೆ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಚಾಲನೆ ನೀಡಿದರು. ತಾಲೂಕಿನ ವಿವಿಧ ಗ್ರಾಮಗಳ ಅಂದಾಜು 26 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಮಾನ್ವಿ: ಬಸವ ಜಯಂತಿ ಅಂಗವಾಗಿ ಗ್ರಾಮೀಣ ಭಾಗದ ರೈತರಿಗಾಗಿ ಗಿರಿಕಿ ಬಂಡಿ ಎಳೆಯುವ ಸ್ಪರ್ಧೆಗೆ ತಾಲೂಕಿನ ಬೆಟ್ಟದೂರು ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸ್ಪರ್ಧೆಗೆ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಚಾಲನೆ ನೀಡಿ ಮಾತನಾಡಿದ ಅವರು, ಮುಂಗಾರು ಪ್ರಾರಂಭದಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ರೈತರಿಗೆ ಕೃಷಿಯಲ್ಲಿ ಉತ್ತೇಜನ ನೀಡುವ ಸಲುವಾಗಿ ಇಂದಿಗೂ ಕೂಡ ಗ್ರಾಮೀಣ ಭಾಗದಲ್ಲಿ ವಿವಿಧ ಜನಪದ ಕ್ರೀಡೆಗಳನ್ನು ಅಯೋಜಿಸಿ ವಿಜೇತರಾದವರಿಗೆ ಬಹುಮಾನಗಳನ್ನು ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ರಂಗದಾಳ ಗ್ರಾಮದ ಎತ್ತುಗಳು 1711 ಅಡಿ ದೂರವನ್ನು ಕ್ರಮಿಸಿದ್ದು ಪ್ರಥಮ ಬಹುಮಾನ 21 ತೊಲೆ ಬೆಳ್ಳಿ ಕಡಗವನ್ನು ಡಾ. ಬಸವಪ್ರಭು ಪಾಟೀಲ್ ಬೆಟ್ಟದೂರು ರವರು ಎತ್ತುಗಳ ಮಾಲಿಕ ರೈತ ನಬಿಸಾಬ್ ರವರಿಗೆ ವಿತರಿಸಿದರು.ದ್ವಿತೀಯ ಬಹುಮಾನ 15 ತೊಲೆ ಬೆಳ್ಳಿಯನ್ನು ಬೆಟ್ಟದೂರಿನ ಸಾಹುಕಾರ ರಮೇಶನ ಎತ್ತುಗಳು ಪಡೆದಿದ್ದು ಚಾಮರಸ ಮಾಲಿ ಪಾಟೀಲ್ ವಿತರಿಸಿದರು. ತೃತಿಯ ಬಹುಮಾನ ಪಡೆದ ದದ್ದಲ್ ನರಸಪ್ಪ ಎತ್ತುಗಳಿಗೆ ಬಸವ ಪ್ರಭು, ಶರಣಬಸವ ಪಾಟೀಲ್ ಬೆಟ್ಟದೂರು ಅವರು 11 ತೊಲೆ ಬೆಳ್ಳಿ ಕಡಗವನ್ನು ವಿತರಿಸಿದರು.

ನಾಲ್ಕನೇ ಬಹುಮಾನವನ್ನು ಮುಸ್ಟೂರ್ ಶಿವರಾಜ್ ಎತ್ತುಗಳು ಪಡೆದುಕೊಂಡವು 6 ತೊಲೆ ಬೆಳ್ಳಿ ಕಡಗವನ್ನು ಚನ್ನಬಸವ ಮುನ್ನುಟಿಗಿ ವಿತರಿಸಿದರು. ಐದನೇ ಬಹುಮಾನವನ್ನು ರೇಸ್ ರಮೇಶ್ ಮಾಡಿಗಿರಿಯವರ ಎತ್ತುಗಳು ಪಡೆದುಕೊಂಡವು 4 ತೊಲೆ ಬೆಳ್ಳಿ ಕಡಗವನ್ನು ಎಂ .ಅಮರೇಶ್ ವಿತರಿಸಿದರು.

ತಾಲೂಕಿನ ವಿವಿಧ ಗ್ರಾಮಗಳ ಅಂದಾಜು 26 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನರು ಸ್ಪರ್ಧೆ ವೀಕ್ಷಿಸಿದರು.