ಸಾರಾಂಶ
ಎಲ್ಲ ತನಿಖೆಯನ್ನು ಹರಿದೇವಪುರ ಠಾಣೆ ಪೊಲೀಸರಿಂದ ನಡೆಯುತ್ತಿದೆ. ನಾವು ಅವರಿಗೆ ಅವಶ್ಯವಿರುವ ಸಹಕಾರ ಮಾತ್ರ ನೀಡುತ್ತೇವೆ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿದ್ಯಾರ್ಥಿ ಪರಮಾನಂದ ಜೈನ್ ಮೇಲೆ ಕೊಲ್ಕತ್ತಾದ ಹರಿದೇವಪುರ ಠಾಣೆಯಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣ ದಾಖಲಾಗಿದೆ ಎಂದು ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯಲ್ ಹೇಳಿದರು.ಐಐಎಂ ಕ್ಯಾಂಪಸ್ ಗ್ಯಾಂಗ್ ರೇಪ್ ಪ್ರಕರಣ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲ್ಕತಾ ಐಐಎಂ ಕ್ಯಾಂಪಸ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಾಗಲಕೋಟೆಯ ಲೋಕಾಪುರದ ವಿದ್ಯಾರ್ಥಿ ಬಂಧನದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.ಹಾಸ್ಟೆಲ್‌ನಲ್ಲಿ ಕರೆದು ಮತ್ತು ಬರುವ ಪಾನೀಯ ಕುಡಿಸಿ ಪ್ರಜ್ಞೆ ತಪ್ಪಿಸಲಾಗಿತ್ತು. ನಂತರ ರೇಪ್ ಹಾಗೂ ಲೈಂಗಿಕ ದೌರ್ಜನ್ಯ ಅಂತ ದೂರು ದಾಖಲಾಗಿದೆ. ಈ ಕುರಿತು ಹರಿದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಮಾನಂದ ಬಗ್ಗೆ ಹರಿದೇವಪುರ ಠಾಣೆ ಪೊಲೀಸರು ನಮಗೆ ಆಫಿಸಿಯಲ್ ಆಗಿ ಮಾಹಿತಿ ನೀಡಿದ್ದರು. ಆ ಪ್ರಕಾರ ನಾವು ಕೋಲ್ಕತಾ ಪೊಲೀಸರಿಗೆ ಆಫಿಸಿಯಲ್ ಆಗಿ ಸಹಕಾರ ನೀಡಿದ್ದೇವೆ ಎಂದರು.
ಪರಮಾನಂದ ತಂದೆ ತಾಯಿಗೆ ನಾವು ಮಾಹಿತಿ ನೀಡಿದ್ದೇವೆ. ಪರಮಾನಂದ ಬಗ್ಗೆ ಲೋಕಾಪುರ ಠಾಣೆಯಲ್ಲಿ ಈ ಹಿಂದೆ ಯಾವುದೇ ಪ್ರಕರಣ ದಾಖಲಾಗಿಲ್ಲ. ನಮ್ಮ ಠಾಣೆ ವ್ಯಾಪ್ತಿಯಿಂದ ಪರಮಾನಂದ ಒಬ್ಬನನ್ನು ಮಾತ್ರ ಬಂಧಿಸಲಾಗಿದೆ. ಆತ ಎ1 ಆರೋಪಿನಾ ಅಥವಾ ಎ-2 ನಾ ಅಂತ ನಮಗೆ ಯಾವುದೇ ಮಾಹಿತಿ ಇಲ್ಲ. ಎಲ್ಲ ತನಿಖೆಯನ್ನು ಹರಿದೇವಪುರ ಠಾಣೆ ಪೊಲೀಸರಿಂದ ನಡೆಯುತ್ತಿದೆ. ನಾವು ಅವರಿಗೆ ಅವಶ್ಯವಿರುವ ಸಹಕಾರ ಮಾತ್ರ ನೀಡುತ್ತೇವೆ ಎಂದು ಎಸ್‌ಪಿ ಸಿದ್ದಾರ್ಥ ಗೋಯಲ್ ತಿಳಿಸಿದರು.ಆರೋಪಿಯ ಮನೆಗೆ ಬೀಗ:ಕೋಲ್ಕತಾದ ಐಐಎಂ ಕ್ಯಾಂಪಸ್‌ನಲ್ಲಿ ಯುವತಿಯ ಗ್ಯಾಂಗ್ ರೇಪ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಪರಮಾನಂದ ಟೋಪಣ್ಣವರ ಮನೆಗೆ ಬೀಗ ಹಾಕಲಾಗಿದೆ. ಲೋಕಾಪುರ ಪಟ್ಟಣದ ಕಾಡರಕೊಪ್ಪ ರಸ್ತೆಯಲ್ಲಿರುವ ಪರಮಾನಂದ ಮನೆ ಇದೀಗ ಬೀಕೋ ಎನ್ನುತ್ತಿದೆ. ಮಗ ಬಂಧನವಾಗಿರುವ ಬೆನ್ನಲ್ಲೇ ಪರಮಾನಂದನ ಪಾಲಕರು ಕೋಲ್ಕತಾಗೆ ತೆರಳಿದ್ದಾರೆ. ಬೇಲ್‌ಗೆ ಅರ್ಜಿ ಸಲ್ಲಿಸಲು ವಕೀಲರ ಸಮೇತವೇ ಪೋಷಕರು ಅಲ್ಲಿಗೆ ತೆರಳಿದ್ದಾರೆ. ಲೋಕಾಪೂರ ಮನೆಯಲ್ಲಿ ವಾಸವಿದ್ದ ಪರಮಾನಂದನ ತಂದೆ- ತಾಯಿ, ಕೆಳಗಿನ ಹಾಗೂ ಮೇಲ್ಮಹಡಿ ಮನೆ ಎರಡಕ್ಕೂ ಬೀಗ ಹಾಕಿ ಮನೆ ಖಾಲಿ ಮಾಡಿದ್ದಾರೆ. ಜುಲೈ ೧೨ರಂದು ಪರಮಾನಂದನನ್ನು ಕೋಲ್ಕತಾದ ಹರಿದೇವಪುರ ಠಾಣೆ ಪೊಲೀಸರು ಬಂಧಿಸಿದ್ದರು. ಹಾಗಾಗಿ ಕೋಲ್ಕತಾಗೆ ಪರಮಾನಂದನ ಪೋಷಕರು ಹೋಗಿದ್ದಾರೆ. ಶುಕ್ರವಾರವೂ ಹರಿದೇವಪುರ ಠಾಣೆ ಪೊಲೀಸರು ಪರಮಾನಂದನನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.