ಸಾರಾಂಶ
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾರ್ಮಿಕರ ಸಂಘಟನೆ ವತಿಯಿಂದ ಸಿದ್ದಾಪುರ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ರೈತರು ಮತ್ತು ಕಾರ್ಮಿಕರ ಸಭೆ ನಡೆಯಿತು.
ಕನ್ನಡಪ್ರಭವಾರ್ತೆ ವಿರಾಜಪೇಟೆ
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾರ್ಮಿಕ ಸಂಘಟನೆ ವತಿಯಿಂದ ಸಿದ್ದಾಪುರ ಸ್ವರ್ಣಮಾಲ ಕಲ್ಯಾಣ ಮಂಟಪದಲ್ಲಿ ರೈತರು ಮತ್ತು ಕಾರ್ಮಿಕರ ಸಭೆ ನಡೆಯಿತು.ಕರ್ನಾಟಕ ರಾಜ್ಯ ರೈತ ಸಂಘ ಸಿದ್ದಾಪುರ ಘಟಕದ ಅಧ್ಯಕ್ಷರಾದ ದೇವಣೀರ ಬೋಪಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾಡಾನೆ ಸಾವು ಪ್ರಕರಣ ಹಿನ್ನೆಲೆಯಲ್ಲಿ ರೈಟರ್ ಜೋಸೆಫ್ ಮೇಲೆ ಪ್ರಕರಣ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಮಾ. 14ರಂದು ಸಂಜೆ 5 ಗಂಟೆಗೆ ಸಿದ್ದಾಪುರ ನಗರದಲ್ಲಿ ಪ್ರತಿಭಟನೆ ನಡೆಸಲು ನಿರ್ಣಯ ಕೈಗೊಳ್ಳಲಾಯಿತು..
ಸಭೆಯಲ್ಲಿ ನೆಲ್ಯಹುದಿಕೇರಿ ಗ್ರಾಮದ ಅತ್ತಿಮಂಗಲ ಗ್ರಾಮದ ನಲ್ವತ್ತೆಕ್ರೆ ಲೇಸ್ಲಿ ಪಿಂಟೋ ಅವರ ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ರೈಟರ್ ಜೋಸೆಫ್ ಎಂಬುವವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆಗಾಗಿ ಕರೆದುಕೊಂಡು ಹೋಗಿ ಮಾನಸಿಕ ಹಿಂಸೆ ನೀಡಿ ಥಳಿಸಿದ್ದಾರೆ ಎಂದು ಜೋಸೆಫ್ ಅವರ ಮಗಳು ಮಾರಿಯಾ ಅವರು ಸಭೆಯಲ್ಲಿ ತಿಳಿಸಿದರು.ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಮ್ಮತ್ತಿ ಹೋಬಳಿ ಯ ಅಧ್ಯಕ್ಷರಾದ ಮಂಡೇಪಂಡ ಪ್ರವೀಣ್ ಬೋಪಯ್ಯ, ಜಿಲ್ಲಾ ಸಮಿತಿ ಖಜಾಂಚಿ ಇಟ್ಟಿರ ಸಭಿತ ಭೀಮಯ್ಯ, ಅಪ್ಪಾರಂಡ ಬಿದ್ದಪ್ಪ, ಕಾರ್ಮಿಕ ಸಂಘಟನೆ ಯ ಪ್ರಮುಖರಾದ ಪಿ.ಆರ್. ಭರತ್, ಎನ್.ಡಿ. ಕುಟ್ಟಪ್ಪ. ಹೆಚ್. ಬಿ. ರಮೇಶ್. ಉಪಸ್ಥಿತರಿದ್ದರು.
ಸಭೆಯಲ್ಲಿ ಸಂತ್ರಸ್ತ ಜೋಸೆಫ್ ಅವರ ಮಗಳು, ಮಗ,ಹಾಗೂ ತಂಗಿ, ತೋಟದ ಮಾಲೀಕರಾದ ಲೆಸ್ಲಿ ಪಿಂಟೊ, ಕರ್ನಾಟಕ ರಾಜ್ಯ ರೈತ ಸಂಘದ ಅಮ್ಮತ್ತಿ, ಸಿದ್ದಾಪುರ ಹೋಬಳಿ ಯ ಸದಸ್ಯರು, ಕಾರ್ಮಿಕ ಸಂಘಟನೆಯ ಸದಸ್ಯರು ಸಭೆಯಲ್ಲಿ ಹಾಜರಿದ್ದರು.