ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಕಾಶ್ಯಪ ಪುಸ್ತಕ ಸಹಕಾರಿ: ಮಹೇಶ

| Published : Dec 24 2023, 01:46 AM IST

ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಕಾಶ್ಯಪ ಪುಸ್ತಕ ಸಹಕಾರಿ: ಮಹೇಶ
Share this Article
  • FB
  • TW
  • Linkdin
  • Email

ಸಾರಾಂಶ

10ನೇ ತರಗತಿ ಎನ್ನುವುದು ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟವಾಗಿದ್ದು, ವಿದ್ಯಾರ್ಥಿ ಮತ್ತು ಪಾಲಕರಲ್ಲಿರುವ ಕುತೂಹಲ ಹಾಗೂ ಆತಂಕ ದೂರಗೊಳಿಸುವ ನಿಟ್ಟಿನಲ್ಲಿ ಗದಗ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯ ೧೭೭ ವಿದ್ಯಾರ್ಥಿಗಳಿಗೆ ಡಾ. ಮಹೇಶ ನಾಲವಾಡ ಫೌಂಡೇಶನ್ ಅಧ್ಯಕ್ಷ ಡಾ. ಮಹೇಶ ನಾಲವಾಡ ಕಾಶ್ಯಪ ಪುಸ್ತಕ ವಿತರಿಸಿದರು.

ಗದಗದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕಾಶ್ಯಪ ಪುಸ್ತಕ ವಿತರಣೆ

ಗದಗ: ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಅಭ್ಯಾಸಕ್ಕೆ ಸಹಕಾರಿಯಾಗುವ ಮಾದರಿ ಮತ್ತು ಉತ್ತರ ಸಹಿತ ಬೋರ್ಡ್‌ ಪ್ರಶ್ನೆ ಪತ್ರಿಕೆಗಳುಳ್ಳ ಕ್ಯಾಶಪ್‌ ಪುಸ್ತಕವನ್ನು ಉಚಿತವಾಗಿ ವಿತರಿಸುತ್ತಿದ್ದೇವೆ ಎಂದು ಡಾ. ಮಹೇಶ ನಾಲವಾಡ ಫೌಂಡೇಶನ್ ಅಧ್ಯಕ್ಷ ಡಾ. ಮಹೇಶ ನಾಲವಾಡ ಹೇಳಿದರು.

ಇಲ್ಲಿಯ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯ ೧೭೭ ವಿದ್ಯಾರ್ಥಿಗಳಿಗೆ ಕಾಶ್ಯಪ ಪುಸ್ತಕ ವಿತರಿಸಿ ಅವರು ಮಾತನಾಡಿ, ಸರಕಾರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸರಕಾರದ ಜತೆ ನಮ್ಮ ಸಂಸ್ಥೆಯು ಈ ರೀತಿ ಮಕ್ಕಳ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಪರಿಣಾಮ ತರಲು ಸಹಕಾರಿಯಾಗಲೆಂದು ಶಿಕ್ಷಣ ತಜ್ಞರ ಸಲಹೆ ಮೂಲಕ ಕ್ಯಾಶಪ್ ಪುಸ್ತಕ ತಯಾರಿಸಲಾಗಿದ್ದು ಇದರ ಸದುಪಯೋಗವನ್ನು ಎಲ್ಲ ಮಕ್ಕಳು ಪಡೆದುಕೊಳ್ಳಬೇಕು ಎಂದರು.

೧೦ನೇ ತರಗತಿ ಎನ್ನುವುದು ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟವಾಗಿದ್ದು, ವಿದ್ಯಾರ್ಥಿ ಮತ್ತು ಪಾಲಕರಲ್ಲಿರುವ ಕುತೂಹಲ ಹಾಗೂ ಆತಂಕ ದೂರಗೊಳಿಸುವ ನಿಟ್ಟಿನಲ್ಲಿ ಈ ಪುಸ್ತಕ ಉತ್ತಮ ಸಹಕಾರಿಯಾಗಿದೆ. ಉತ್ತರ ಸಹಿತ ಮಾದರಿ ಪ್ರಶ್ನೆ ಪತ್ರಿಕೆಗಳು ಸಹಜವಾಗಿ ವಿದ್ಯಾರ್ಥಿಗಳು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಸಿದ್ಧಗೊಳಿಸಲಾಗಿದೆ ಎಂದರು.

ಡಿಡಿಪಿಐ ವಿ.ವಿ. ರಡ್ಡೇರ ಮಾತನಾಡಿ, ಮಕ್ಕಳು ಹೇಗೆ ಓದಬೇಕು ಎಂದರೆ ಓದಿ ಸಂಗ್ರಹಿಸಿ ನಂತರ ತಿಳಿದುಕೊಂಡು ಮತ್ತೆ ಅದನ್ನು ಪುನರ ಪ್ರಕಟಿಸಬೇಕು, ಇದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗುವುದು. ಅದೇ ರೀತಿ ಶಿಕ್ಕಕರು ವಿಷಯಗಳನ್ನು ಮಕ್ಕಳಿಗೆ ಪುನಃ ಪುನಃ ಓದಿಸುವುದರಿಂದ ಪರೀಕ್ಷಾ ಫಲಿತಾಂಶ ಉತ್ತಮವಾಗುವುದರಲ್ಲಿ ಸಂಶಯವಿಲ್ಲಾ ಎಂದು ಹೇಳಿದರು.

ಈ ವೇಳೆ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹಾಗೂ ಬಸವರಾಜ ಧಾರವಾಡ ಮಾತನಾಡಿದರು.

ಬಸಣ್ಣ ಗಾಣಿಗೇರ, ಅಖಿಲ ಹಲಗತ್ತಿ, ರಾಜೇಂದ್ರ ಹೊಂಗಲ್ ಹಾಗೂ ಶಾಲೆಯ ಮುಖೋಪಾಧ್ಯಾಯರು , ಸಿಬ್ಬಂದಿ, ಮಕ್ಕಳು ಇದ್ದರು.