ಸಾರಾಂಶ
ಕನ್ನಡ ನಾಡು ಕಾವೇರಿಂದ ಗೋದಾವರಿ ವರೆಗೆ ಹರಡಿರುವ ನಾಡಾಗಿದ್ದು ಇಂದು ಅನ್ಯ ಭಾಷಿಕರು ಇಲ್ಲಿ ಬಂದುಳಿದು ನಮ್ಮ ಭಾಷೆಯನ್ನು ಕಲುಷಿತ ಮಾಡುತ್ತಿದ್ದಾರೆ. ಯುವಪೀಳಿಗೆ ಭಾಷೆಯನ್ನು ರಾಜ್ಯಕ್ಕೆ ಮಾತ್ರ ಸೀಮಿತಗೊಳಸದೆ ಸಾಗರದಾಚೆಗೂ ಬಿತ್ತರಿಸಬೇಕು.
ಅಳ್ನಾವರ:
ಕರ್ನಾಟಕ ರಾಜೋತ್ಸವವನ್ನು ಸಮೀಪದ ಹೊನ್ನಾಪೂರ ಗ್ರಾಮ ಪಂಚಾಯಿತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.ಈ ವೇಳೆ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಗ್ರಾಪಂ ಸದಸ್ಯ ತೇಜಸ್ ದೊಡ್ಡಮನಿ, ಕರ್ನಾಟಕ ಅಂಖಡ ಭಾರತದ ಅವಿಭಾಜ್ಯ ಅಂಗವಾಗಿದ್ದು, ಕನ್ನಡನಾಡು ದೇಶದ ಮೂಲೆ ಮೂಲೆಗಳಿಂದ ಬಂದುಳಿದ ಅದೇಷ್ಟೋ ಜನರಿಗೆ ಆಶ್ರಯ ತಾಣವಾಗಿದೆ, ಇಂದಿನ ಯುವಪೀಳಿಗೆಯಲ್ಲಿ ನಾಡಿನ ಇತಿಹಾಸ, ಕಲೆ, ಸಾಹಿತ್ಯದ ಬಗ್ಗೆ ಅರಿವು ಮೂಡಿಸುವುದು ನಮ್ಮೆಲರ ಆದ್ಯ ಕರ್ತವ್ಯವಾಗಿದೆ. ಕನ್ನಡ ನಾಡು ಕಾವೇರಿಂದ ಗೋದಾವರಿ ವರೆಗೆ ಹರಡಿರುವ ನಾಡಾಗಿದ್ದು ಇಂದು ಅನ್ಯ ಭಾಷಿಕರು ಇಲ್ಲಿ ಬಂದುಳಿದು ನಮ್ಮ ಭಾಷೆಯನ್ನು ಕಲುಷಿತ ಮಾಡುತ್ತಿದ್ದಾರೆ. ಯುವಪೀಳಿಗೆ ಭಾಷೆಯನ್ನು ರಾಜ್ಯಕ್ಕೆ ಮಾತ್ರ ಸೀಮಿತಗೊಳಸದೆ ಸಾಗರದಾಚೆಗೂ ಬಿತ್ತರಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಪಿಡಿಒ ಸುಜಾತಾ ಲಕ್ಕಪ್ಪನವರ, ಗ್ರಾಪಂ ಅಧ್ಯಕ್ಷ ಸುಶೀಲ ಹರಿಜನ, ಉಪಾಧ್ಯಕ್ಷ ಪ್ರಕಾಶ ಕಟ್ಟಿಮನಿ, ಪರಪ್ಪ ನಾಯಕ, ಸಂತೋಷ ಕಲಾಜ, ಶಾಂತವ್ವ ಶಾತ್ರತೇಜ, ನಿರ್ಮಲ ಗಸ್ತಿ, ಬಾಳವ್ವ ಹೂಗಾರ, ಮಹ್ಮದ್‌ಫಾರೂಕ್ ಅಂಬಡಗಟ್ಟಿ, ಮಾಶಾಬಿ ಹಾದಿಮನಿ, ಖತೂಜಾ ಡೋನಸಾಲ ಮತ್ತಿತರರು ಇದ್ದರು.