Caste and division should not come between politicians and voters.

-ಶಾಸಕ ಡಿ.ಜಿ. ಶಾಂತನಗೌಡ ಮಾತು । ತಾಲೂಕು ಮಹಾಸಭಾ ಘಟಕದ ಪದಾಧಿಕಾರಿ ಪದಗ್ರಹಣ

--

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜಾತಿ, ಮತ, ಧರ್ಮಗಳ ಬೇಧ ಮನೋಭಾವನೆಗಳು ರಾಜಕಾರಣಿಗಳು, ಮತದಾರರಲ್ಲಿ ಬರಬಾರದು. ಆಗ ಮಾತ್ರ ಆರೋಗ್ಯವಂತ ಸಮಾಜ ಹಾಗೂ ಪರಿಶುದ್ಧ ರಾಜಕೀಯ ವಾತಾವರಣ ಕಾಣಲು ಸಾಧ್ಯ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಅವರು ಭಾನುವಾರ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಹೊನ್ನಾಳಿ ತಾಲೂಕು ಮಹಾಸಭಾ ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳು ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇದೇ ಪ್ರಥಮ ಬಾರಿಗೆ ಮಹಾಸಭಾದ ಪದಾಧಿಕಾರಿಗಳ ಸ್ಥಾನಗಳಿಗೆ ಚುನಾವಣೆ ನಡೆದು ಅವಿರೋಧ ಆಯ್ಕೆನಡೆದಿದ್ದು ಸಮಾಜದ ದೃಷ್ಣಿಯಿಂದ ಶುಭ ಸೂಚನೆಯಾಗಿದೆ ಎಂದು ಹೇಳಿದರು.

ಭಗವಾನ್ ಬುದ್ಧ ಎಲ್ಲರ ರಕ್ತ ಕೆಂಪು ಎಂದು ಮಾರ್ಮಿಕವಾಗಿ ಹೇಳಿದ್ದು, ಇದರಂತೆ ಇತರ ಸಮಾಜದಲ್ಲಿ ಸಹ ತಾರತಮ್ಯ ಎಣಿಸದೇ ವೀರಶೈವ ಲಿಂಗಾಯತ ಸಮಾಜದವರು ಮುಂದುವರೆಯಬೇಕು. ಈಗಾಗಲೇ ಕ್ರಾಂತಿಯೋಗಿ ಬಸವಣ್ಣನವರ ಎರಡು ಪುತ್ಥಳಿ ಸಿದ್ದಗೊಂಡಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಬಸವಣ್ಣ ಹಾಗೂ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸುವ ಕೆಲಸ ಮಾಡಲಾಗುವುದು, 9 ಕೋಟಿ ವೆಚ್ಚದಲ್ಲಿ ತಾಲೂಕು ಸೌಧದ ಕೆಲಸ ಆರಂಭಿಗೊಂಡಿದೆ ಎಂದು ಹೇಳಿದರು

ಸ್ವಾಮೀಜಿಗಳಲ್ಲಿ ಹೊಂದಾಣಿಕೆ ಕಾಣಬೇಕು: ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಭಕ್ತರನ್ನು ಹೊಂದಾಣಿಕೆ ಇದೆ ಆದರೆ, ಎಲ್ಲಾ ಸ್ವಾಮೀಜಿಗಳಲ್ಲಿ ಹೊಂದಾಣಿಗೆ ಕಾಣಬೇಕಾಗಿದೆ ಎಂದರು.

ರಾಜಕಾರಣ ಬದಿಗೊತ್ತಿ ಸಮಾಜದ ಹಿತಕ್ಕಾಗಿ ಎಲ್ಲರೂ ಶ್ರಮಿಸಬೇಕು ಒಳಪಂಗಡಗಳ ಬಗ್ಗೆ ಸಂಕುಚಿತ ಮನೋಭಾವನೆ ಮೀರಿ ವೀರಶೈವ ಲಿಂಗಾಯತ ಸಮಾಜ ಬೆಳೆಯಬೇಕು ಎಂದು ಹೇಳಿದರು.

ಧಾರ್ಮಿಕ ಕ್ರಾಂತಿಯ ಹರಿಕಾರ ಬಸವಣ್ಣವನರ ಪುತ್ಥಳಿ ನಿರ್ಮಾಣಕ್ಕಾಗಿ 29ಲಕ್ಷ ವಚ್ಛ ತಗುಲಿದೆ. ಆದರೆ, ಇದುವರೆಗೆ ಕೇವಲ 4.5ಲಕ್ಷ ಮಾತ್ರ ಸಂಗ್ರಹವಾಗಿದ್ದು, ಈ ಬಗ್ಗೆ ಯುವಕರು, ಸಮಾಜದ ಹಿರಿಯವರು ಒಗ್ಗಟ್ಟಾಗಿ ಹಣ ಸಂಗ್ರಹಣೆಗೆ ಮುಂದಾಗಬೇಕು ಎಂದು ಹೇಳಿದರು.

ನೊಳಂಬ ಲಿಂಗಾಯತ ಸಮಾಜದ ಕೇಂದ್ರ ಸಂಘದ ಉಪಾಧ್ಯಕ್ಷ ಜಿ.ರುದ್ರೇಗೌಡ್ರು ಪಂಚಮಸಾಲಿ ವೀರಶೈವ ಸಮಾಜದ ಹಿರಿಯ ಮುಖಂಡ ಡಾ.ರಾಜ್ ಕುಮಾರ್ ಮಾತನಾಡಿದರು.

ಹಿರೇಕಲ್ಮಠ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಶಿಕ್ಷಣ, ಸಂಸ್ಕೃತಿ, ಧಾರ್ಮಿಕ ಮೌಲ್ಯಗಳಿಗೆ ಆದ್ಯತೆ ನೀಡಿ, ಸಮಾಜದ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ಪಿ.ಚನ್ನವೀರಪ್ಪ ಗೌಡರು ಮಾತನಾಡಿದರು.

ತಾಲೂಕು ಮಹಾಸಭಾ ಘಟಕದಲ್ಲಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಧುಗೌಡ, ಟಿ.ಜಿ.ರಮೇಶ್ ಗೌಡ, ಪಿ, ವೀರಣ್ಣ ಪಟ್ಟಣ ಶೆಟ್ಟಿ, ಮಹಾಸಭಾದ ರಾಜ್ಯ ಕಾರ್ಯದರ್ಶಿ ಎಂ.ಜಿ.ಶಶಿಕಲಾ, ಜಿಲ್ಲಾಧ್ಯಕ್ಷ ಚಂದ್ರಶೇಖರ ಐಗೂರು, ಸಂದೀಪ್ ಅಣಬೇರು, ನಿರ್ಮಾಲ ಶುಭಾಷ್, ಎಚ್.ಎ.ಗದ್ದಿಗೇಶ್, ರುದ್ರೇಗೌಡ ಮಾದೇನಹಳ್ಳಿ, ಮಹೇಶ್ವರಪ್ಪ ಮಲೆಕುಂಬಳೂರು, ಅಂದಾನಿ ಗಂಗಾಧರ, ರಾಜಣ್ಣ ಸಾಸ್ವೇಹಳ್ಳಿ, ಪಂಚಾಕ್ಷರಯ್ಯ ಭೈರನಹಳ್ಳಿ, ಶಶಿಕಲಾ ಡಾ. ಕೊಟ್ರೇಶ್ ಉತ್ತಂಗಿ, ಮಂಜುನಾಥ ನೆಲಹೊನ್ನೆ, ಶಿಲ್ಪರಾಜುಗೌಡ್ರು, ಚಿಕ್ಕಜೋಗಿಹಳ್ಳಿ ನಾಗರಾಜ್, ಕೋರಿ ಯೋಗೀಶ್, ಸೇರಿದಂತೆ ಮಹಾಸಭಾದ ನಿರ್ದೇಶಕರು, ವೀ.ಲಿಂ ಸಮಾಜದ ಎಲ್ಲ ಒಳಪಂಗಡಗಳ ಪದಾಧಿಕಾರಿಗಳು ಇದ್ದರು.

ಪೋಟೊ:27ಎಚ್.ಎಲ್.ಐ1

ಹಿರೇಕಲ್ಮಠದ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಅಭಾವೀಲಿಂ ಮಹಾಸಭಾದ ಹೊನ್ನಾಳಿ ತಾಲೂಕು ಮಹಾಸಭಾ ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಿದರು.