ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಜಾತಿಗಣತಿ ಅಸ್ತ್ರ

| Published : Apr 21 2025, 12:55 AM IST

ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಜಾತಿಗಣತಿ ಅಸ್ತ್ರ
Share this Article
  • FB
  • TW
  • Linkdin
  • Email

ಸಾರಾಂಶ

೨೦೧೫ ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ ಜಾತಿ ಸಮೀಕ್ಷೆ ಅಯೋಗ ರಚನೆ ಮಾಡಲಾಯಿತು. ಸರ್ವೇಯಿಂದ ಸರ್ವರಿಗೂ ಒಳ್ಳೆಯದು ಆಗಬೇಕು, ವರದಿಯಲ್ಲಿ ಕೆಲ ಲೋಪದೋಷಗಳು ಇವೆ, ಮುಂದೆ ಸರ್ವ ಪಕ್ಷಗಳ ಸಭೆ ಕರೆಯಬೇಕು, ಧಾರ್ಮಿಕ ಗುರುಗಳನ್ನು ಕರೆಸಬೇಕು, ಜಾತಿ ಗಣತಿಗೆ ೧೭೦ ಕೋಟಿ ವೆಚ್ಚವಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ ಸರ್ಕಾರ ತನ್ನ ಲೋಪದೋಷಗಳು ಮತ್ತು ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜಾತಿಗಣತಿ ಪದ ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿ ಕಾರಿದರು.ಕೋಲಾರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂವಿಧಾನದಡಿ ಜಾತಿಗಣತಿ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ ಸಮೀಕ್ಷೆ ಮಾಡಲು ಮಾತ್ರ ಅವಕಾಶವಿದೆ ಎಂದರು.

ಕಾಂತರಾಜು ಆಯೋಗ ವರದಿ

ಆದರೆ ೨೦೧೫ ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ ಅಯೋಗ ರಚನೆ ಮಾಡಲಾಯಿತು, ಇದಕ್ಕೆ ಕಾಂತರಾಜು ಅವರನ್ನು ಅಧ್ಯಕ್ಷ ಮಾಡಿ ೫ ವರ್ಷದಲ್ಲಿ ವರದಿ ತಯಾರು ಮಾಡಲು ತಿಳಿಸಲಾಗಿತ್ತು, ಆದರೆ ಕಾಂತರಾಜು ತಯಾರಿಸಿದ ವರದಿಗೆ ಆಗಿನ ನಂಬರ್ ಸೆಕೆಂಟರಿ ಸಹಿ ಹಾಕಿಲ್ಲ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಾಂತರಾಜು ವರದಿ ಮುಂದೆ ತರಲಿಲ್ಲ ಎಂದರು.

ನಂತರ ಜಯಪ್ರಕಾಶ್ ಹೆಗ್ಡೆ ಬಂದರು. ತರಾತುರಿಯಲ್ಲಿ ಬೇಕಾದ ರೀತಿಯಲ್ಲಿ ವರದಿ ತಯಾರು ಮಾಡಿದರು, ಇದಕ್ಕೆ ಯಾರು ಸಹಿ ಹಾಕಿದ್ದಾರೆ, ಅವರು ಯಾರ ಸಂಬಂಧಿಕರು ಎಂಬುದು ಗೊತ್ತಿರುವ ವಿಷಯ, ಜಾತಿಗಣತಿ ಬಗ್ಗೆ ಮಾತನಾಡುತ್ತಾ ಹೋದರೆ ೨೦೦ ಸಂಪುಟ ಇವೆ. ಸರ್ವೇ ಸ್ವಾಗತ ಮಾಡುತ್ತೀವೆ, ಆದರೆ ಸರ್ವೇ ಆಗಿರುವ ರೀತಿಗೆ ನಮ್ಮ ವಿರೋಧವಿದೆ, ಕಡೆ ಕಡೆಯ ವ್ಯಕ್ತಿಗೆ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಸರ್ವೇಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ವರದಿಯಲ್ಲಿ ಲೋಪದೋಷಗಳಿವೆ

ನಮ್ಮ ರಾಜಕೀಯ ಕುರ್ಚಿಗಳು ಭದ್ರಪಡಿಸಿಕೊಳ್ಳುವುದಕ್ಕೆ, ರಕ್ಷಣೆಗೆ ಅಲ್ಲ, ಸರ್ವೇಯಿಂದ ಸರ್ವರಿಗೂ ಒಳ್ಳೆಯದು ಆಗಬೇಕು, ವರದಿಯಲ್ಲಿ ಕೆಲ ಲೋಪದೋಷಗಳು ಇವೆ, ಮುಂದೆ ಸರ್ವ ಪಕ್ಷಗಳ ಸಭೆ ಕರೆಯಬೇಕು, ಧಾರ್ಮಿಕ ಗುರುಗಳನ್ನು ಕರೆಸಬೇಕು, ಜಾತಿ ಗಣತಿಗೆ ೧೭೦ ಕೋಟಿ ವೆಚ್ಚವಾಗಿದೆ, ಜನರ ತೆರಿಗೆ, ಕನ್ನಡಿಗರ ಹಣ ಯಾವ ರೀತಿ ವೆಚ್ಚವಾಗಿದೆ ಎಂಬುದರ ಬಗ್ಗೆ ಚರ್ಚೆಯಾಗಬೇಕಿದ್ದು, ಇದಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡರೇ ಉತ್ತರ ಕೊಡಬೇಕು, ಮರಸು ವಕ್ಕಲಿಗರು ೩೫೦೦ ಇದ್ದಾರೆ ಅಂತೆ, ಇದು ಹೋಬಳಿ, ತಾಲೂಕು ಅಥವಾ ರಾಜ್ಯಕ್ಕೂ ಉತ್ತರ ನೀಡಬೇಕಾಗಿದೆ ಎಂದು ತಿಳಿಸಿದರು.