17ಕ್ಕೆ ಜಾತಿ ಜನಗಣತಿ ಹಿನ್ನೋಟ, ಮುನ್ನೋಟ ವಿಚಾರಗೋಷ್ಠಿ

| Published : Aug 15 2025, 01:00 AM IST

17ಕ್ಕೆ ಜಾತಿ ಜನಗಣತಿ ಹಿನ್ನೋಟ, ಮುನ್ನೋಟ ವಿಚಾರಗೋಷ್ಠಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯಿಂದ ಜಾತಿ ಜನಗಣತಿ ಹಿನ್ನೋಟ ಮುನ್ನೋಟ ವಿಚಾರಗೋಷ್ಠಿ ನಡೆಯಲಿದೆ

ಕಾರವಾರ: ಕಾರವಾರ ತಾಲೂಕಿನ ಶೇಜವಾಡ ಸದಾನಂದ ಪ್ಯಾಲೇಸ್ ನಲ್ಲಿ ಆ.17ರಂದು ಬೆಳಿಗ್ಗೆ 10.30ಕ್ಕೆ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯಿಂದ ಜಾತಿ ಜನಗಣತಿ ಹಿನ್ನೋಟ ಮುನ್ನೋಟ ವಿಚಾರಗೋಷ್ಠಿ ನಡೆಯಲಿದೆ ಎಂದು ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.ಇದೊಂದು ಪಕ್ಷಾತೀತವಾದ ಕಾರ್ಯಕ್ರಮವಾಗಿದೆ. ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೋಟ ಶ್ರೀನಿವಾಸ ಪೂಜಾರಿ, ಯದುವೀರ ಒಡೆಯರ್, ಮಾಜಿ ಸಚಿವ ಹರತಾಳ ಹಾಲಪ್ಪ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ವಾದಿರಾಜ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಾತಿ ಜನಗಣತಿ ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ದೇಶದ ಅವಕಾಶ ವಂಚಿತ ಸಮುದಾಯಗಳ ಜನತೆಯನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಅವರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಾನಮಾನವನ್ನು ದೊರಕಿಸಿಕೊಡುವುದು, ರಾಜಕೀಯವಾಗಿ ಅವಕಾಶ ಕಲ್ಪಿಸುವುದು ಸೇರಿದಂತೆ ಅಮೂಲಾಗ್ರವಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವ ಆಶಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ್ದಾಗಿದೆ ಎಂದರು.

ಪಕ್ಷಾತೀತವಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಮುಖರು ಪಾಲ್ಗೊಂಡು ಜಾತಿ ಜನ ಗಣತಿ ಬಗ್ಗೆ ಸಲಹೆ, ಸೂಚನೆ ಮಾರ್ಗದರ್ಶನ ನೀಡಬಹುದು. ಆ ಮೂಲಕ ಸಮಾಜದಲ್ಲಿ ಅವಕಾಶ ವಂಚಿತರ ಕುರಿತು ಗಮನ ಸಳೆಯಬಹುದು. ಆ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಂತೆ ರೂಪಾಲಿ ಎಸ್.ನಾಯ್ಕ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

‘’ಜಾತಿ ಜನಗಣತಿ ಹಿನ್ನೋಟ ಮುನ್ನೋಟ’’ ವಿಚಾರಗೋಷ್ಠಿಯನ್ನು ಈ ಹಿಂದೆ ಬೇರೆ ಸ್ಥಳದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಕಾರಣಾಂತರಗಳಿಂದ ರೈಲ್ವೇ ಸ್ಟೇಶನ್ ರಸ್ತೆಯ ಶೇಜವಾಡ ಸದಾನಂದ ಪ್ಯಾಲೇಸ್ ಸಭಾಭವನದಲ್ಲಿ ವಿಚಾರಗೋಷ್ಠಿ ನಡೆಯಲಿದೆ.