ಪಟೇಲ್‌ ರವರಿಗೆ ಮದ್ಯ, ಮಹಿಳೆ ಬಗ್ಗೆ ದುರ್ಬಲತೆ ಹೊಂದಿದ್ದರು ಎಂಬ ಅಪವಾದವಿದ್ದರೂ ಕೆಲಸದ ಅವಧಿಯಲ್ಲಿ ಇವುಗಳಿಂದ ದೂರವಿದ್ದರು, ಮಹಿಳೆಯರ ಬಗ್ಗೆ ಗೌರವ ಹೊಂದಿದ್ದರು. ಬಡವರು, ರೈತರು, ಕಾರ್ಮಿಕರ ಬಗ್ಗೆ ಮಾನವೀಯತೆ ತೋರುತ್ತಿದ್ದರು. ಅವರಿಗೆ ಅಧಿಕಾರದ ವ್ಯಾಮೋಹ ಎಂದಿಗೂ ಇರಲಿಲ್ಲ. ಜಾತಿಯತೆ ಎಂಬವುದು ಅವರ ಬಳಿ ಸುಳಿಯುತ್ತಿರಲಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರ

ಮನುಷ್ಯರ ಅಂತಃಕರಣ ಶುದ್ದವಾಗಿದ್ದರೆ ಮಾತ್ರ ಜನಪರ ಕೆಲಸ ಸಾಧ್ಯ ಎಂಬುವುದಕ್ಕೆ ಮಾಜಿ ಸಿಎಂ ದಿ. ಜೆ.ಹೆಚ್.ಪಟೇಲ್ ಮಾದರಿಯಾಗಿದ್ದಾರೆ, ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಗೌರವಿಸಬೇಕೆಂಬುದನ್ನು ಪಟೇಲ್‌ರ ನಿಲುವಾಗಿತ್ತು ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಮಾಜಿ ಸಿಎಂ ದಿ. ಜೆ.ಎಚ್‌. ಪಟೇಲ್‌ ೨೫ನೇ ಪುಣ್ಯ ಸ್ಮರಣೋತ್ಸವ ಉದ್ಘಾಟಿಸಿ ‘ಕುಸುವ್ಯವಸ್ಥೆಯಿಂದ ಸುವ್ಯವಸ್ಥೆಯಡೆಗೆ’ ಎಂಬ ವಿಷಯ ಕುರಿತು ಮಾತನಾಡಿದರು.

ವಿದ್ಯಾವಂತರಲ್ಲೆ ಜಾತಿಯತೆ ಹೆಚ್ಚುಇಂದು ಅನಕ್ಷಸ್ಥರಿಗಿಂತ ವಿದ್ಯಾವಂತರಲ್ಲೇ ಹೆಚ್ಚು ಜಾತಿಯತೇ ಕಾಣುತ್ತಿದ್ದೇವೆ, ರಾಜಕೀಯದಲ್ಲಿ ಅನೇಕ ಹೋರಾಟಗಳು, ಸೇವೆಗಳು ಮಾಡಿ ಚುನಾವಣೆಗೆ ಸ್ವರ್ಧಿಸಿದಾಗ ಜಾತಿಯ ಬಗ್ಗೆ ಪ್ರಸ್ತಾಪಿಸುವುದೇಕೆ ಎಂದು ಪ್ರಶ್ನಿಸಿದ ಅವರು, ಇಂದಿನ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಮೂರೂ ಪಕ್ಷಗಳು ಭ್ರಷ್ಟ ಮತ್ತು ವ್ಯಾಪಾರೀಕರಣದ ಅವ್ಯಸ್ಥೆಗಳಲ್ಲಿ ಮುಳುಗಿದ್ದು ಹಿಟ್ಲರ್ ಕಾಲದಲ್ಲಿ ಸನ್ನಿವೇಶಗಳಿಗಿಂತ ಯಾವುದೇ ರೀತಿ ಭಿನ್ನವಾಗಿಲ್ಲ ಎಂದು ವ್ಯಂಗವಾಡಿದರು. ಪಟೇಲ್‌ ರವರಿಗೆ ಮದ್ಯ, ಮಹಿಳೆ ಬಗ್ಗೆ ದುರ್ಬಲತೆ ಹೊಂದಿದ್ದರು ಎಂಬ ಅಪವಾದವಿದ್ದರೂ ಕೆಲಸದ ಅವಧಿಯಲ್ಲಿ ಇವುಗಳಿಂದ ದೂರವಿದ್ದರು, ಮಹಿಳೆಯರ ಬಗ್ಗೆ ಗೌರವ ಹೊಂದಿದ್ದರು. ಬಡವರು, ರೈತರು, ಕಾರ್ಮಿಕರ ಬಗ್ಗೆ ಮಾನವೀಯತೆ ತೋರುತ್ತಿದ್ದರು. ಅವರಿಗೆ ಅಧಿಕಾರದ ವ್ಯಾಮೋಹ ಎಂದಿಗೂ ಇರಲಿಲ್ಲ. ಜಾತಿಯತೆ ಎಂಬವುದು ಅವರ ಬಳಿ ಸುಳಿಯುತ್ತಿರಲಿಲ್ಲ. ಪ್ರಜ್ಞಾಪೂರ್ವಕವಾದ ಆಡಳಿತ ನೀಡಿದರು ಅವರನ್ನು ನಾನು ಮರೆಯದ ಕ್ಷಣವಿಲ್ಲ ಎಂದರು. ದೇಶಕ್ಕೆ ಮಾಡಿದ ಅಪಮಾನ

ರಾಜಕೀಯ ಪಕ್ಷಗಳು ಇಂದು ವ್ಯಾಪಾರೀಕರಣವಾಗಿದೆ. ಭವಿಷ್ಯದಲ್ಲಿ ಯಾರ ವಿರುದ್ದ ಹೋರಾಟ ಮಾಡಬೇಕೆಂಬುವುದು ಯಕ್ಷ ಪ್ರಶ್ನೆಯಾಗಿದ್ದು ಹೋರಾಟಕ್ಕೆ ಇಳಿದಾಗ ಈಗಿರುವ ಮೂರೂ ಪ್ರಮುಖ ಪಕ್ಷಗಳು ಒಂದಾಗಿ ಹೋರಾಟ ಹತ್ತಿಕ್ಕಲಿವೆ. ಸೈದ್ದಾಂತಿಕೆ ನೆಲೆಯೇ ಇಲ್ಲ. ದೇಶಕ್ಕೆ ಯಾರೂ ಅಪಮಾನ ಮಾಡಬೇಕಾಗಿಲ್ಲ. ರುಪಾಯಿಯ ಮೌಲ್ಯವನ್ನು ೯೦ಕ್ಕೆ ತಂದಿರುವುದೇ ಸಾಕು ಎಂದು ಕೇಂದ್ರವನ್ನು ಪರೋಕ್ಷವಾಗಿ ಟೀಕಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ, ರಾಜ್ಯದ ರಾಜಕಾರಣದಲ್ಲಿ ಜೆ.ಎಚ್‌. ಪಟೇಲರು ಹಿರಿಯ ಮುತ್ಸದಿಯಾಗಿ ಸಮಾಜವಾದದ ನೇತಾರ ಸಮಾಜ ಸುವ್ಯವಸ್ಥೆಗೆ ಜೀವನದಲ್ಲಿ ಸರಣ ಜೀವನದ ಮೂಲಕ ರಾಜ್ಯದ ಸಿಎಂ ಆಗಿ ಆಡಳಿತ ಚುಕ್ಕಾಣಿ ಹಿಡಿದು ಸಮಾಜದ ಪಥದತ್ತ ಕೊಂಡ್ಯೊಯಲು ಪ್ರಯತ್ನಿಸಿದರು.

ಸಾಂವಿಧಾನಿಕ ಆಡಳಿತ ನೀಡಬೇಕುಸಮಾಜವು ಇಂದು ಕ್ರೂರ ವ್ಯವಸ್ಥೆ ತಲುಪಿದೆ. ಸಂಸದೀಯದಲ್ಲಿ ಪ್ರಜಾಪ್ರಭುತ್ವದ ರೂಪುರೇಷೆಗಳ ಕುರಿತು, ಮೂಲಭೂತ ಸೌಲಭ್ಯಗಳ ಕುರಿತು ಚರ್ಚೆಗಳಾಗುತ್ತಿಲ್ಲ. ಸಂಸದೀಯ ಪ್ರಜಾಪ್ರಭುತ್ವಗಳು ವಿಫಲವಾದಾಗ ವ್ಯವಸ್ಥೆಗಳು ನಿರ್ಮಾಣವಾಗಲಿದೆ. ಪ್ರಜಾಪ್ರಭುತ್ವದ ವ್ಯವಸ್ಥೆ ಎಂದ ಮೇಲೆ ಜನಪರವಾದ ಸಂವಿಧಾನ ಆಡಳಿತ ವ್ಯವಸ್ಥೆ ನೀಡ ಬೇಕಾಗಿರುವುದು ರಾಜಕೀಯ ಪಕ್ಷಗಳ ಜವಾಬ್ದಾರಿ ಎಂದರು.ಚುನಾವಣೆಯ ವ್ಯವಸ್ಥೆಗಳು ವ್ಯಾಪಾರೀಕರಣವಾಗುತ್ತಿದೆ. ರಾಜಕಾರಣದಲ್ಲಿ ಅಪರಾಧಿ ವ್ಯವಸ್ಥೆಗಳು ಕಂಡು ಬರುತ್ತಿದೆ. ಕಳೆದ ೨ ದಿನಗಳ ಹಿಂದೆ ವಂದೇ ಮಾತರಂ ಬಗ್ಗೆ ಚರ್ಚೆಗಳಾಗಿ ನಗ್ನ ಸತ್ಯಗಳನ್ನು ಮರೆಮಾಚಲಾಗಿದೆ. ದೇಶದ ಚರಿತ್ರೆಗಳನ್ನು ನಾಶಪಡಿಸಿ ದೇಶದ ದಿಕ್ಕು ತಿರುಚುವಂತ ಪ್ರಯತ್ನಗಳು ನಡೆದಿವೆ ಎಂದರು.

೨ನೇ ಸ್ವಾತಂತ್ರ್ಯ ಅನಿವಾರ್ಯ ಇಂದು ೨ನೇ ಸ್ವಾತಂತ್ರ್ಯ ಹೋರಾಟ ಸಂಗ್ರಮದ ಅವಶ್ಯಕತೆ ಅನಿವಾರ್ಯವಾಗುತ್ತಿದೆ. ಜನತೆಯ ನಿರ್ಧಾರಗಳು ಬದಲಾಯಿಸಬೇಕಾಗಿದೆ ಹೋರಾಟಗಳು ಮನೆ ಮನೆಯಿಂದ ಪ್ರಾರಂಭವಾಗಬೇಕಾಗಿದೆ. ಅಧಿಕಾರಕ್ಕಾಗಿ ಒಂದಾಗುವ ಜನತೆಯು ಸಮಾನತೆಗೆ ಒಂದಾಗುತ್ತಿಲ್ಲ. ಅಧಿಕಾರ ಪಡೆದವರು ಅಧಿಕಾರ ಬಿಡಲು ತಯಾರಿಲ್ಲ. ದಿ.ಜೆ.ಎಚ್‌.ಪಟೇಲ್ ಅವರಂತಹ ಮುತ್ಸದಿ ರಾಜಕಾರಣಿಯ ವ್ಯಕ್ತಿತ್ವದ ಚಿಂತನೆಗಳು ಇಂದು ಯುವ ರಾಜಕಾರಣಿಗಳಿಗೆ ಮಾರ್ಗದರ್ಶನವಾಗಬೇಕೆಂದು ತಿಳಿಸಿದರು.

ನಿಷ್ಟೂರವಾದಿ ಜೆಎಚ್‌ ಪಟೇಲ್‌

ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಮಾತನಾಡಿ, ಪಟೇಲ್ ಅವರು ಯಾವೂದಕ್ಕೂ ಹಿಂಜರಿಕೆ ಇರಲಿಲ್ಲ. ನೇರ ಮತ್ತು ನಿಷ್ಟೂರವಾದಿಗಳಾದರೂ ಅವರಲ್ಲಿ ಮಾನವೀಯತೆ ಮೇರು ಪರ್ವತದಂತಿದ್ದರು. ಲೋಹಿಯ ಸಿದ್ದಂತಗಳು ಪಟೇಲ್‌ರಲ್ಲಿ ಕಾಣಬಹುದಾಗಿತ್ತು. ರಾಜಕಾರಣದಲ್ಲಿ ದೇವರಾಜ ಅರಸು ಮತ್ತು ಜೆ.ಹೆಚ್.ಪಟೇಲ್ ಅವರ ಆಡಳಿತದ ಸುಧಾರಣೆಗಳು ನೆನಪುಗಳು ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯಸಾನ್ನಿಧ್ಯ ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿ ವಹಿಸಿ ಆಶೀರ್ವಾಚನ ನೀಡಿದರು. ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ವ್ಯವಸ್ಥಾಪಕ ಧರ್ಮದರ್ಶಿ ಮಹಿಮಾ ಜೆ.ಹೆಚ್.ಪಟೇಲ್, ಜೆ.ಹೆಚ್.ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ತ್ರಿಶೂಲ ಪಾಣಿ.ಜೆ.ಎಚ್. ಪಟೇಲ್ ವಂದಿಸಿದರು. ಡಾ.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.