ಸಾರಾಂಶ
ಜಾನುವಾರುಗಳು ನಮ್ಮ ದೇಶದ ರೈತರ ಜೀವನಾಡಿಗಳಾಗಿವೆ, ಅದಕ್ಕಾಗಿ ಸರ್ಕಾರ ಕೋಟ್ಯಂತರ ಹಣ ವ್ಯಯಿಸುವ ಮೂಲಕ ಜಾನುವಾರುಗಳ ರಕ್ಷಣೆ ಮಾಡುವ ಕಾರ್ಯಕ್ರಮಕ್ಕೆ ಮುಂದಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.ಬುಧವಾರ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಇರುವ ಪಶುಚಿಕಿತ್ಸಾ ಆವರಣದಲ್ಲಿ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನೂತನ ಕಟ್ಟಡದ ಭೂಮಿ ಪೂಜೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರಜಾನುವಾರುಗಳು ನಮ್ಮ ದೇಶದ ರೈತರ ಜೀವನಾಡಿಗಳಾಗಿವೆ, ಅದಕ್ಕಾಗಿ ಸರ್ಕಾರ ಕೋಟ್ಯಂತರ ಹಣ ವ್ಯಯಿಸುವ ಮೂಲಕ ಜಾನುವಾರುಗಳ ರಕ್ಷಣೆ ಮಾಡುವ ಕಾರ್ಯಕ್ರಮಕ್ಕೆ ಮುಂದಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಬುಧವಾರ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಇರುವ ಪಶುಚಿಕಿತ್ಸಾ ಆವರಣದಲ್ಲಿ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪಶು ಸಂಪತ್ತು ದೇಶದ ಸಂಪತ್ತಾಗಿದೆ. ರೈತರ ಮಿತ್ರ ಎನಿಸಿಕೊಂಡಿರುವ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಒತ್ತು ನೀಡುವುದು ಅಗತ್ಯವಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಪಶುಚಿಕಿತ್ಸಾಲಯದ ಕಟ್ಟಡ ಕಟ್ಟಲು ಅನುಮತಿ ನೀಡುವ ಮೂಲಕ ಜಾನುವಾರುಗಳ ರಕ್ಷಣೆಗೆ ಮುಂದಾಗಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ರೈತರು ತಮ್ಮ ಜಾನುವಾರುಗಳ ಆರೋಗ್ಯ ತಪಾಷಣೆಯನ್ನು ನಿಮಯಮಿತವಾಗಿ ಮಾಡಿಸಿಕೊಳ್ಳುವ ಮೂಲಕ ಅವುಗಳ ಆರೋಗ್ಯ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಶೀಘ್ರದಲ್ಲಿ ನೂತನ ಕಟ್ಟಡ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿಕೊಡಬೇಕು, ಅಲ್ಲದೆ ಗುಣಮಟ್ಟದ ಕಾಮಗಾರಿ ಮಾಡುವುದು ಅತಿ ಮುಖ್ಯವಾಗಿದೆ.ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಬೇಡ ಎಂದು ಶಾಸಕರು ಗುತ್ತಿಗೆದಾರರಿಗೆ ಕಿವಿ ಮಾತು ಹೇಳಿದರು. ಈ ವೇಳೆ ಎಂ.ಆರ್. ಪಾಟೀಲ, ರಮೇಶ ಹಾಳತೋಟದ, ಶಕ್ತಿ ಕಟ್ಟಿ, ನಿಂಗಪ್ಪ ಬನ್ನಿ, ಟಾಕಪ್ಪ ಸಾತಪೂತೆ, ದುಂಡೇಶ ಕೊಟಗಿ, ಗಂಗಾಧರ ಮೆಣಸಿನಕಾಯಿ, ಫಕ್ಕಿರೇಶ ರಟ್ಟಿಹಳ್ಳಿ, ವಾಸು ಪಾಟೀಲ, ಬಸವರಾಜ ಚಕ್ರಸಾಲಿ, ಈರಣ್ಣ ಅಕ್ಕೂರ, ಸಂಗಮೇಶ ಬೆಳವಿಗಿ, ಅನಿಲ ಮುಳಗುಂದ, ಬಸವರಾಜ ಕಲ್ಲೂರ, ನಾಗಸಮುದ್ರ, ಉಳವೇಶಗೌಡ ಪಾಟೀಲ, ವಿಶಾಲ ಬಟಗುರ್ಕಿ ಸೇರಿದಂತೆ ಅನೇಕರು ಇದ್ದರು.