ದನಗಳ ಜಾತ್ರಾ ಮಹೋತ್ಸವ ಪುನರಾರಂಭ

| Published : Jan 22 2025, 12:32 AM IST

ಸಾರಾಂಶ

ಸ್ಥಗಿತಗೊಂಡಿದ್ದ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯವರ ದನಗಳ ಜಾತ್ರಾ ಮಹೋತ್ಸವ, ಪುರಸಭೆ ವತಿಯಿಂದ ಪುನರಾಂಭ ಮಾಡಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. , ಬರುವ ಉತ್ತಮ ರಾಸುಗಳಿಗೆ ಬಹುಮಾನ, ಕುಡಿಯುವ ನೀರು ವಿದ್ಯುತ್ ದೀಪ ನೆರಳಿನ ವ್ಯವಸ್ಥೆಯನ್ನು ಮೇವು ಕಲ್ಪಿಸಲಾಗಿದೆ. ಮೂರು ಹಂತದಲ್ಲಿ ತಳಿಗಳ ಆಧಾರದ ಮೇಲೆ ಬಹುಮಾನ ನೀಡುತ್ತಿದೆ. ರಾಸುಗಳನ್ನು ಜಾತ್ರೆಗೆ ಫೆಬ್ರವರಿ 7ರಿಂದ ತರಬೇಕು. ರಾಸುಗಳ ಆಯ್ಕೆ ೧೧ರಂದು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸ್ಥಗಿತಗೊಂಡಿದ್ದ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯವರ ದನಗಳ ಜಾತ್ರಾ ಮಹೋತ್ಸವ, ಪುರಸಭೆ ವತಿಯಿಂದ ಪುನರಾಂಭ ಮಾಡಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಅವರು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಫೆಬ್ರವರಿ ೭ರಿಂದ ೧೩ರವರೆಗೆ ದನಗಳ ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ, ರಥೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಪುರಸಭೆ, ಪಶುಪಾಲನಾ ಇಲಾಖೆ ಹಾಗೂ ತಾಲೂಕು ಆಡಳಿತದ ಸಹಕಾರದಲ್ಲಿ ದನಗಳ ಜಾತ್ರೆ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ. ಏಳು ವರ್ಷಗಳಿಂದ ನಿಂತುಹೋಗಿದ್ದ ದನಗಳ ಜಾತ್ರೆಗೆ ಮತ್ತೆ ಚಾಲನೆ ದೊರಕಿದ್ದು, ಬರುವ ಉತ್ತಮ ರಾಸುಗಳಿಗೆ ಬಹುಮಾನ, ಕುಡಿಯುವ ನೀರು ವಿದ್ಯುತ್ ದೀಪ ನೆರಳಿನ ವ್ಯವಸ್ಥೆಯನ್ನು ಮೇವು ಕಲ್ಪಿಸಲಾಗಿದೆ. ಮೂರು ಹಂತದಲ್ಲಿ ತಳಿಗಳ ಆಧಾರದ ಮೇಲೆ ಬಹುಮಾನ ನೀಡುತ್ತಿದೆ. ರಾಸುಗಳನ್ನು ಜಾತ್ರೆಗೆ ಫೆಬ್ರವರಿ 7ರಿಂದ ತರಬೇಕು. ರಾಸುಗಳ ಆಯ್ಕೆ ೧೧ರಂದು ನಡೆಯಲಿದ್ದು, ಫೆಬ್ರವರಿ ೧೩ರಂದು ಬಹುಮಾನ ನೀಡಿಕೆ ನಡೆಯಲಿದೆ.

ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಫೆಬ್ರವರಿ ೧೩ರಂದು ಸಮಾರೋಪ ಸಮಾರಂಭ ಸಾಂಸ್ಕೃತಿಕ ಕಾರ್ಯಕ್ರಮಗಳು, ಗ್ರಾಮೀಣ ಪ್ರತಿಭೆಗಳ ಅನಾವರಣ, ಕಲಾ ಪ್ರದರ್ಶನ ಬಹುಮಾನ ನೀಡಲಾಗುವುದು. ಪುರಸಭೆಯ ವತಿಯಿಂದ ದನಗಳ ಜಾತ್ರೆಗಾಗಿ ವ್ಯಾಪಕ ಪ್ರಚಾರ ಮಾಡಲಾಗುವುದು, ಪುರಸಭಾ ಸದಸ್ಯರನ್ನು ಒಳಗೊಂಡಂತೆ ಜಾತ್ರಾ ಕಮಿಟಿ ರಚನೆಯಾಗಲಿದೆ ಎಂದು ಮಾಹಿತಿ ನೀಡಿದರು. ಪುರಸಭೆ ಸದಸ್ಯರಾದ ಸುಜಾತ, ಪ್ರಕಾಶ್, ಇಲಿಯಾಸ್, ಸುರೇಶ್, ರಾಧಾ, ನವೀನ್, ಮುಂತಾದವರು ತಮ್ಮ ವಾರ್ಡ್‌ಗಳ ಸ್ವಚ್ಛತೆ, ವಿದ್ಯುತ್ ದೀಪದ ಬಗ್ಗೆ ಸಭೆಯ ಗಮನಕ್ಕೆ ತಂದರು.ಪುರಸಭೆ ಅಧ್ಯಕ್ಷ ಬನಶಂಕರಿ ರಘು ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪಾಧ್ಯಕ್ಷೆ ರಾಣಿಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ನೂತನ ಮುಖ್ಯ ಅಧಿಕಾರಿ ಯತೀಶ್ ಕುಮಾರ್‌, ಸಿಇಒ ಶಾರದಮ್ಮ ಸೇರಿದಂತೆ ಇತರರು ಹಾಜರಿದ್ದರು.