ದನಗಾಯಿ ರೈತನ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ

| Published : Jul 06 2025, 01:48 AM IST

ಸಾರಾಂಶ

ದನಗಾಯಿ ರೈತನ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ ನಡೆಸಿ ಮಾನಸಿಕವಾಗಿ ಕಿರುಕುಳ ನೀಡಿರುವ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಒತ್ತಾಯಿಸಿದ್ದಾರೆ

ಕನ್ನಡಪ್ರಭ ವಾರ್ತೆ ಹನೂರು ದನಗಾಯಿ ರೈತನ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ ನಡೆಸಿ ಮಾನಸಿಕವಾಗಿ ಕಿರುಕುಳ ನೀಡಿರುವ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಒತ್ತಾಯಿಸಿದ್ದಾರೆ.

ತಾಲೂಕಿನ ಕೌದಳ್ಳಿ ಮಲೆ ಮಾದೇಶ್ವರ ವನ್ಯಧಾಮ ಅರಣ್ಯ ಪ್ರದೇಶಕ್ಕೆ ವ್ಯಾಪ್ತಿಯಲ್ಲಿ ಬರುವ ಕಡಂಬುರು ಗ್ರಾಮದ ರೈತ ಮಹದೇವ್ ತನ್ನ ಜಾನುವಾರು, ಮೇಕೆಗಳನ್ನು ಎಲಚಿ ಕೆರೆ ಅರಣ್ಯ ಪ್ರದೇಶದಲ್ಲಿ ಮೇಯಿಸುತ್ತಿದ್ದಾಗ ಐವರು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ.

ಘಟನೆಯ ವಿವರ:

ಎಲಚಿ ಕೆರೆ ಅರಣ್ಯ ಪ್ರದೇಶದಲ್ಲಿ ಕಡಂಬುರು ಗ್ರಾಮದ ರೈತ ಮಹದೇವ್ 2025 ಜೂ. 3 ರಂದು ಜಾನುವಾರುಗಳು ಮತ್ತು ತಮ್ಮ ಮೇಕೆಗಳನ್ನು ಮೇಯಲು ಬಿಟ್ಟಿದ್ದಾಗ ಬಂದ ಅರಣ್ಯಾಧಿಕಾರಿ ಹಾಗೂ ನಾಲ್ವರು ಸಿಬ್ಬಂದಿಗಳು ಜಾನುವಾರುಗಳನ್ನು ಹೊಡೆದು ಓಡಿಸಿ ನಂತರ ರೈತನ ಕಪಾಲಕ್ಕೆ ಬೆನ್ನಿಗೆ ಸಿಕ್ಕ ಕಡೆಯಲ್ಲ ಹಲ್ಲೇ ನಡಸಿ ಕೌದಳ್ಳಿ ಅರಣ್ಯ ಅಧಿಕಾರಿಗಳ ಗೆಸ್ಟ್ ಹೌಸ್ ನಲ್ಲಿ ಒಂದು ಕೊಠಡಿಯಲ್ಲಿ ಕೂಡಿಹಾಕಿ ಬಟ್ಟೆ ಬಿಚ್ಚಿ ಮನಬಂದಂತೆ ಹಲ್ಲೇ ನಡೆಸಿ ಈತನನ್ನು ಬಲವಂತವಾಗಿ ಚಿರತೆ ಸಾವಿಗೆ ಕಾರಣ ನಾನೇ ಎಂದು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ₹15 ಸಾವಿರ ನೀಡಿದರೆ ಬಿಡುತ್ತೇವೆ ಎಂದು ಒಂದು ದಿನ ಕೊಟ್ಟಡಿಯಲ್ಲಿ ಕೂಡಿಹಾಕಿ ನಂತರ ಬಿಡುಗಡೆಗೊಳಿಸಿದ್ದಾರೆ. ಈ ವಿಚಾರ ರೈತರಿಗೆ ತಿಳಿದರೆ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಚಿರತೆ ಕಾಲು ಕಡಿದು ಉಗುರಿಗೆ ಕತ್ತರಿ ದುಷ್ಕೃತ್ಯದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಪ್ಪಿತಸ್ಥರ ಮೇಲೆ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜುಲೈ1 ರಂದು ಕಚೇರಿಗೆ ದೂರಿನ ಬಂದ ಪತ್ರ ಬಂದ ಹಿನ್ನೆಲೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥ ಕೌದಳ್ಳಿ ವಲಯ ಅರಣ್ಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಆದೇಶ ನೀಡಿದ್ದರು. ಅಲ್ಲದೆ ಜೂ. 3 ರಂದು ತಾಲೂಕಿನ ಚಿಂಚಳ್ಳಿ ಗ್ರಾಮದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಉಸ್ತುವಾರಿ ಸಚಿವ ವೆಂಕಟೇಶ್ ತಾಲೂಕಿಗೆ ಬಂದ ದಿನವೇ ಅರಣ್ಯ ಅಧಿಕಾರಿಗಳಿಂದ ಮುಗ್ಧ ರೈತನ ಮೇಲೆ ಹಲ್ಲೆ ಮತ್ತು ದರ್ಪದಿಂದ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಅರಣ್ಯಾಧಿಕಾರಿಗಳು ವಿರುದ್ಧ ರೈತ ಮುಖಂಡ ಮಹದೇವ್ ಅವರಿಂದ ರಾಮಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗುವುದು ಎಂದು ರೈತ ತಿಳಿಸಿದ್ದಾನೆ.

ಅರಣ್ಯಾಧಿಕಾರಿಗಳ ತಪ್ಪು ಮುಚ್ಚಲು ರೈತನ ಮೇಲೆ ದರ್ಪ:

ಕೌದಳ್ಳಿ ವಲಯ ಅರಣ್ಯ ಪ್ರದೇಶದಲ್ಲಿ ಚಿರತೆಯ ಕಾಲು ಕಡಿದು ಉಗುರಿಗೆ ಕತ್ತರಿ ಹಾಕಿದ ದುಷ್ಕೃತ್ಯದ ಬಗ್ಗೆ ಸೂಕ್ತ ತನಿಖೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಮುಗ್ಧ ರೈತನ ಮೇಲೆ ದರ್ಪ ತೋರಿಸುತ್ತಿದ್ದಾರೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅರಣ್ಯ ಪ್ರದೇಶದ 5 ಕಿ.ಮೀ ರಸ್ತೆಯಲ್ಲಿ ಹಲ್ಲೆ ನಡೆಸಿ ₹15,000 ಬೇಡಿಕೆ ಇಟ್ಟರು. ನಾನು ಯಾವುದೇ ತಪ್ಪು ಮಾಡಿಲ್ಲ ನನಗೆ ಯಾಕೆ ಸುಳ್ಳು ಹೇಳಲು ಹೇಳುತ್ತೀರಾ ಎಂದು ಹೇಳಿದ್ದಕ್ಕೆ ಜಾನುವಾರು ಮತ್ತು ಮೇಕೆಗಳನ್ನು ಓಡಿಸಿ ನನ್ನನ್ನು ಕೌದಳ್ಳಿ ಅರಣ್ಯ ಇಲಾಖೆ ಗೆಸ್ಟ್ ಹೌಸ್ ಗೆ ಕರೆತಂದು ಇದೇ ರಾತ್ರಿ ಕೂಡಿಹಾಕಿ ಕೊಠಡಿಯಲ್ಲಿ ಮನಬಂದಂತೆ ಥಳಿಸಿ ಯಾರಿಗಾದರೂ ತಿಳಿಸಿದರೆ ನಿನಗೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಮಹದೇವ್, ಕಡಂಬುರು ಅರಣ್ಯಾಧಿಕಾರಿಗಳಿಂದ ಹಲ್ಲೆಗೆ ಒಳಗಾದ ರೈತ

ಅರಣ್ಯ ಅಧಿಕಾರಿಗಳು ತಾವು ಮಾಡಿರುವ ತಪ್ಪನ್ನು ಮುಚ್ಚಿಹಾಕಲು ರೈತರ ಮೇಲೆ ದೌರ್ಜನ್ಯ ನಡೆಸಿ ಗೆಸ್ಟ್ ಹೌಸ್ ನಲ್ಲಿ ಬಟ್ಟೆ ಬಿಚ್ಚಿ ಮನೆಬಂದಂತೆ ಹಲ್ಲೆ ನಡೆಸಿರುವ ಕೌದ್ದಳ್ಳಿ ವಲಯ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ರೈತನಿಂದ ರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ತಿಳಿಸಲಾಗಿದೆ. ಈ ಕುರಿತು ಮುಂದಿನ ದಿನಗಳಲ್ಲಿ ರೈತ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

ಹೊನ್ನೂರ್ ಪ್ರಕಾಶ್ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ