ಸಾರಾಂಶ
ರಸ್ತೆ ಬದಿಯಲ್ಲಿ ಅಪಘಾತವಾಗಿ ಜೀವನ್ಮರಣ ಹೋರಾಟದಲ್ಲಿದ್ದ ಬೈಕ್ ಸವಾರನ ಜೀವವನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಶನಿವಾರ ಕಾಪಾಡಿದ್ದಾರೆ.
-ತಕ್ಷಣ ತಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಕನ್ನಡಪ್ರಭ ವಾರ್ತೆ ಕೊಪ್ಪಳ
ರಸ್ತೆ ಬದಿಯಲ್ಲಿ ಅಪಘಾತವಾಗಿ ಜೀವನ್ಮರಣ ಹೋರಾಟದಲ್ಲಿದ್ದ ಬೈಕ್ ಸವಾರನ ಜೀವವನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಶನಿವಾರ ಕಾಪಾಡಿದ್ದಾರೆ.ತಾಲೂಕಿನ ಹಟ್ಟಿ ಕ್ರಾಸ್ ಬಳಿ ಬೈಕ್ ಮತ್ತು ಕಾರಿನ ನಡುವೆ ಅಪಘಾತವಾಗಿ ಬೈಕ್ ಮೇಲಿದ್ದ ಬೊಮ್ಮನಾಳ ಗ್ರಾಮದ ಶರಣಪ್ಪ ಕೆಳಗೆ ಬಿದ್ದಿದ್ದ. ಈ ವೇಳೆ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಬೈಕ್ ಸವಾರನ ಕಾಲಿನ ಮೇಲೆ ಹರಿದು ಹೋಗಿತ್ತು. ಅಲ್ಲದೆ, ಕಾಲು ನಜ್ಜುಗುಜ್ಜಾಗಿತ್ತು.
ಇದರಿಂದ ತೀವ್ರ ರಕ್ತಸ್ರಾವವಾಗಿ ನಿತ್ರಾಣಗೊಂಡು ಸ್ಥಳದಲ್ಲೇ ಸಾವು-ಬದುಕಿನ ನಡುವೆ ಬೈಕ್ ಸವಾರ ಒದ್ದಾಡ್ಡಿದ್ದಾನೆ.ಘಟನೆ ನಡೆದು 40ಕ್ಕೂ ಹೆಚ್ಚು ನಿಮಿಷವಾದರೂ ನೆರೆದಿದ್ದ ಸ್ಥಳೀಯರು ಆ್ಯಂಬುಲೆನ್ಸ್ ಹಾಗೂ ಸಹಾಯಕ್ಕಾಗಿ ಪರದಾಡುತ್ತಿದ್ದರು.
ಈ ವೇಳೆ ಕುಷ್ಟಗಿ ಕಡೆಯಿಂದ ಕೊಪ್ಪಳಕ್ಕೆ ಕಡೆಗೆ ವೈದ್ಯ ಬಸವರಾಜ ಕ್ಯಾವಟರ್ ಬರುತ್ತಿರುವಾಗ ಬೈಕ್ ಸವಾರ ಕೆಳಗಡೆ ನಿತ್ರಾಣವಾಗಿ ಬಿದ್ದಿರುವುದನ್ನು ಗಮನಿಸಿದ್ದಾರೆ.ಸರ್ಕಾರಿ ಆ್ಯಂಬುಲೆನ್ಸ್ ಬರುವುದು ತಡ ಆಗುತ್ತಿರುವುದನ್ನು ಗಮನಿಸಿ, ತಾವೇ ಮುಂದೆ ನಿಂತು ಕೂಡಲೇ ತಮ್ಮದೇ ಆಸ್ಪತ್ರೆಯ ಆ್ಯಂಬುಲೆನ್ಸ್ ಕರೆಯಿಸಿ, ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ.
ಕುಷ್ಟಗಿ ಕಡೆಯಿಂದ ಕೊಪ್ಪಳಕ್ಕೆ ಬರುತ್ತಿರುವಾಗ ಹಟ್ಟಿ ಕ್ರಾಸ್ ಬಳಿ ಬೈಕ್ ಸವಾರ ಅಪಘಾತವಾಗಿ ಕೆಳಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ. ಕೂಡಲೇ ಆ್ಯಂಬುಲೆನ್ಸ್ ಕರೆಯಿಸಿ, ನಮ್ಮದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವೆ ಎಂದು ಬಸವರಾಜ ಕ್ಯಾವಟರ್ ತಿಳಿಸಿದ್ದಾರೆ.