ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ಸಂಸ್ಥೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

| Published : Oct 19 2024, 12:20 AM IST

ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ಸಂಸ್ಥೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬಂಟ್ವಾಳ ತಾಲೂಕಿನ ಗಿರೀಶ್ ಗೌಡ ಎಚ್. ಹಾಗೂ ಸುಮಿತ್ರ ದಂಪತಿ ಪುತ್ರಿ, ೬ನೇ ತರಗತಿಯ ಸಾನ್ವಿ (ಬಾಲ ವರ್ಗ) ಗಣಿತ ವಸ್ತು ಪ್ರದರ್ಶನದಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ.

ಕನ್ನಡಪ್ರಭ ವಾರ್ತೆ ಪುತ್ತೂರು

ನಗರದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ವಿದ್ಯಾರ್ಥಿಗಳು ಪುತ್ತೂರಿನ ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಗಣಿತ, ವಿಜ್ಞಾನ ಹಾಗೂ ಸಂಸ್ಕೃತಿ ಜ್ಞಾನ ಪರಿಚಯ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ಗಿರೀಶ್ ಗೌಡ ಎಚ್. ಹಾಗೂ ಸುಮಿತ್ರ ದಂಪತಿ ಪುತ್ರಿ, ೬ನೇ ತರಗತಿಯ ಸಾನ್ವಿ (ಬಾಲ ವರ್ಗ) ಗಣಿತ ವಸ್ತು ಪ್ರದರ್ಶನದಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ. ಪುತ್ತೂರಿನ ಡಾ. ರವಿ ನಾರಾಯಣ್ ಹಾಗೂ ಅಶ್ವಿನಿ ಬಿ. ದಂಪತಿಯ ಪುತ್ರಿ, ೭ನೇ ತರಗತಿಯ ಆರಾಧ್ಯ (ಶಿಶುವರ್ಗ) ವಿಜ್ಞಾನ ಪತ್ರ ವಾಚನದಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ. . ಮುಕ್ರಂಪಾಡಿಯ ಪ್ರವೀಣ್ ದೊಡ್ಡಮಾಣಿ ಹಾಗೂ ಚಿತ್ಕಲ ಗೌರಿ ಕೆ. ಪುತ್ರಿ ೧೦ನೇ ತರಗತಿಯ ನಿಯತಿ ಭಟ್ (ಕಿಶೋರ ವರ್ಗ) ವಿಜ್ಞಾನ ಪ್ರಯೋಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ದರ್ಬೆಯ ಪ್ರವೀಣ್ ರಾವ್- ಸುಗಂಧಿನಿ ದಂಪತಿ ಪುತ್ರ, ೯ನೇ ತರಗತಿಯ ಪ್ರಿಯಾಂಶು ರಾವ್ ಹಾಗೂ ಪಡೀಲ್‌ನ ಸುರೇಶ್ ಶೆಟ್ಟಿ ಹಾಗೂ ನೈನಾ ಎಸ್. ಶೆಟ್ಟಿ ಪುತ್ರ ೯ನೇ ತರಗತಿಯ ಕನಿಷ್ಕ್ ಶೆಟ್ಟಿ ಮತ್ತು ಪೆರ್ಲಡ್ಕದ ಕರುಣಾಕರ ರೈ- ಶಾಂತ ರೈ ಪುತ್ರಿ ೧೦ನೇ ತರಗತಿಯ ಅದಿತಿ ರೈ (ಕಿಶೋರವರ್ಗ) ವಿಜ್ಞಾನ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಪೆರ್ಲಡ್ಕದ ಎಸ್. ಯೋಗೀಶ್ ಕಲ್ಲೂರಾಯ ಹಾಗೂ ಕಪಿಲ ಪಿ.ಬಿ. ಪುತ್ರ ೫ನೇ ತರಗತಿಯ ಯುಗನ್ ಹಿಮಾನಿಕಾ (ಶಿಶುವರ್ಗ) ಜ್ಞಾನ ಪ್ರಯೋಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಕೊಂಬೆಟ್ಟುವಿನ ಶ್ರೀಕೃಷ್ಣ ಎಂ. ಮತ್ತು ಶಂಕರಿ ಎಚ್. ಅವರ ಪುತ್ರಿ ೭ನೇ ತರಗತಿಯ ಅನ್ವಿತಾ, ತಾರೆಗುಡ್ಡೆಯ ಸತೀಶ್ ಶೆಟ್ಟಿ ಹಾಗೂ ಸುರೇಖಾ ದಂಪತಿಯ ಪುತ್ರಿ ೮ನೇ ತರಗತಿಯ ಹೃನ್ಮಯಿ ಶೆಟ್ಟಿ, ಮುಕ್ರಂಪಾಡಿಯ ಈರದಾಸಪ್ಪ ಮತ್ತು ಜ್ಯೋತಿ ದಂಪತಿ ಪುತ್ರ ೭ನೇ ತರಗತಿಯ ಪ್ರೇಮ್ (ಬಾಲ ವರ್ಗ) ವಿಜ್ಞಾನ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

ಕುಂಜೂರು ಪಂಜದ ಶ್ರೀನಿವಾಸ್ ಮಯ್ಯ ಹಾಗೂ ಜಯಸಕ್ಷ್ಮೀ ಮಯ್ಯ ದಂಪತಿ ಪುತ್ರ, ೫ನೇ ತಗತಿಯ ಮಯೂರ್ ಎಸ್. ಮಯ್ಯ, ವಸಂತ್ ಗೌಡ ಹಾಗೂ ಮೀನಾಕ್ಷಿ ದಂಪತಿ ಪುತ್ರಿ, ೫ನೇ ತರಗತಿಯ ಶ್ರೀಯಾ ಹಾಗೂ ಉಣಚದ ವಿಜಯ್ ಕುಮಾರ್ ಮತ್ತು ಪ್ರತಿಭಾ ಕುಮಾರಿ ದಂಪತಿ ಪುತ್ರಿ ೫ನೇ ತರಗತಿಯ ರೋಚಿಕ (ಶಿಶು ವರ್ಗ)ಗಣಿತ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.