ಅದ್ಧೂರಿಯಾಗಿ ನಡೆದ ಸಿಡಿ ಉತ್ಸವ

| Published : Apr 21 2025, 12:54 AM IST

ಸಾರಾಂಶ

ಸಿಡಿಯಣ್ಣ ನನ್ನು ಮೇಲ್ಬಾಗಕ್ಕೆ ತೊಗುಹಾಕಿ ತಿರುಗಿಸುವಾಗ ಸುತ್ತಲು ನೆರೆದಿದ್ದ ಸಾವಿರಾರು ಸಂಖ್ಯೆಯ ಭಕ್ತರು ಮೇಲೆ ತಿರುವ ಸಿಡಿಗೆ ಬಾಳೆ ಹಣ್ಣು ಎಸೆದು ಭಕ್ತಿ ಮೆರೆದರು. ಪದ್ಧತಿಯಂತೆ ಹತ್ತಾರು ಸುತ್ತ ಸುತ್ತಿದ ಸಿಡಿರಣ್ಣ ನನ್ನು ಕೆಳಗಿಳಿಸಿ ನಂತರ ದೇವಾಲಯದೊಳಗೆ ವಿಶೇಷ ಪೂಜೆ ಸಲ್ಲಿಸುದೊಂದಿಗೆ ಎರಡು ದಿನಗಳ ಸಿಡಿ ಉತ್ಸವ ಸಂಪನ್ನಗೊಂಡಿತು

ಕನ್ನಡಪ್ರಭ ವಾರ್ತೆ ಮಾಲೂರು

ಇಲ್ಲಿನ ಇತಿಹಾಸ ಪ್ರಸಿದ್ದ ದ್ರೌಪತಾಂಬ ದೇವಿ ಕರಗ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಪಟಾಲಮ್ಮ ಮುತ್ಯಾಲಮ್ಮ ಜಾತ್ರ ಮಹೋತ್ಸವದಲ್ಲಿ ಶನಿವಾರ ಸಂಜೆ ನಡೆದ ಸಿಡಿ ಉತ್ಸವ ಅದ್ದೂರಿಯಾಗಿ ನಡೆದಿದ್ದು, ಸುಮಾರು ಐದು ಸಾವಿರ ಭಕ್ತರು ಸಾಕ್ಷೀಕರಿಸಿದರು. ಶುಕ್ರವಾರ ರಾತ್ರಿ ಪಟಾಲಮ್ಮ ದೇವಾಲಯದಿಂದ ಸಿಡಿರಣ್ಣ ಹೂತ್ತ ಪೂಜಾರಿ ಪಟ್ಟಣದ ರೈಲ್ವೇ ಫೀಡರ್‌ ರಸ್ತೆಯ ಊರ ಬಾಗಿಲು ಮನೆಯ ಬಳಿ ಬಂದು ಅಲ್ಲಿಂದ ವಕ್ಕಲು ದೀಪಗಳೂಂದಿಗೆ ತಮಟೆ ವಾದ್ಯಕ್ಕೆ ತಕ್ಕಂತೆ ಕುಣಿಯುತ್ತ ಸಪ್ಲಾಂಬ ದೇವಾಲಯದಲ್ಲಿ ಆರತಿ ಸ್ವೀಕರಿಸಿ ನಂತರ ಪಟಲಮ್ಮ ದೇವಾಲಯ ಬಳಿ ನಿರ್ಮಿಸಲಾಗಿದ್ದ ಅಗ್ನಿಕುಂಡದ ಮೂಲಕ ಶನಿವಾರ ಬೆಳಗ್ಗಿನ ಜಾವ 4 ರ ಸುಮಾರಿಗೆ ಸಿಡಿರಣ್ಣ ದೇವಾಲಯ ಪ್ರವೇಶಿಸಿತು.ಹತ್ತಾರು ಸುತ್ತ ಸುತ್ತಿದ ಸಿಡಿರಣ್ಣ

ಸಿಡಿಯಣ್ಣ ನನ್ನು ಮೇಲ್ಬಾಗಕ್ಕೆ ತೊಗುಹಾಕಿ ತಿರುಗಿಸುವಾಗ ಸುತ್ತಲು ನೆರೆದಿದ್ದ ಸಾವಿರಾರು ಸಂಖ್ಯೆಯ ಭಕ್ತರು ಮೇಲೆ ತಿರುವ ಸಿಡಿಗೆ ಬಾಳೆ ಹಣ್ಣು ಎಸೆದು ಭಕ್ತಿ ಮೆರೆದರು. ಪದ್ಧತಿಯಂತೆ ಹತ್ತಾರು ಸುತ್ತ ಸುತ್ತಿದ ಸಿಡಿರಣ್ಣ ನನ್ನು ಕೆಳಗಿಳಿಸಿ ನಂತರ ದೇವಾಲಯದೊಳಗೆ ವಿಶೇಷ ಪೂಜೆ ಸಲ್ಲಿಸುದೊಂದಿಗೆ ಎರಡು ದಿನಗಳ ಸಿಡಿ ಉತ್ಸವ ಸಂಪನ್ನಗೊಂಡಿತ್ತು. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಜನದಟ್ಟಣೆ ಸುಧಾರಿಸಲು ಪೊಲೀಸರು ಸೂಕ್ತ ಬಂದೋಬಸ್ತು ವ್ಯವಸ್ಥೆ ಮಾಡಿದ್ದರು.ಪಟಾಲಮ್ಮ ದೇವಾಲಯದ ಸಮಿತಿಯ ಕೊಲ್ಮಿ ಗೋಪಾಲಕೃಷ್ಣ,ಧನಂಜಯ,ಮಧುಸೂಧನ, ನಿವೃತ್ತ ಬಿಬಿಎಂಪಿ ಅಭಿಯಂತರ ಎಂ.ಕೆ.ವೆಂಕಟೇಶ್‌ , ಮಾಜಿ ಪುರಸಭೆ ಅಧ್ಯಕ್ಷ ಸಿ.ಪಿ.ನಾಗರಾಜು, ಎಂ.ಬಿ.ನಂಜುಂಡಪ್ಪ, ಎಂ.ವಿ.ವೇಮನ,ತಬಲ ರಾಜು ಇನ್ನಿತರರು ಇದ್ದರು.