ಸಾರಾಂಶ
ಜನವರಿ 1ರಂದು ತಾಲೂಕಿನ ಎಲ್ಲ ಸರಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಶ್ರೀ ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ಸುತ್ತೋಲೆ ಹೊರಡಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
ಕುಷ್ಟಗಿ: ತಾಲೂಕು ಆಡಳಿತದ ವತಿಯಿಂದ ಜನವರಿ 2ರಂದು ಅಮರಶಿಲ್ಪಿ ಶ್ರೀ ಜಕಣಾಚಾರಿ ಸಂಸ್ಮರಣಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಸರಕಾರದಿಂದ ಈ ದಿನ ಆಚರಣೆ ಮಾಡಲು ನಮ್ಮ ಸಂಪೂರ್ಣ ಸಹಕಾರವಿದೆ. ಸರಕಾರದ ಸುತ್ತೋಲೆಯಂತೆ ಜನವರಿ 1ರಂದು ತಾಲೂಕಿನ ಎಲ್ಲ ಸರಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಶ್ರೀ ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ಸುತ್ತೋಲೆ ಹೊರಡಿಸಲಾಗುವುದು. ನಂತರ ವಿಶ್ವಕರ್ಮ ಸಮಾಜದವರ ಸಹಯೋಗದೊಂದಿಗೆ ಜ. 2ರಂದು ವೇದಿಕೆ ಕಾರ್ಯಕ್ರಮ ಮಾಡಲಾಗುವುದು, ಸಹಕಾರ ನೀಡಬೇಕು ಎಂದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ಶರಣಪ್ಪ ಬಡಿಗೇರ ಮಾತನಾಡಿ, ಕಳೆದ ಬಾರಿ ಆಚರಣೆ ಮಾಡಿದ ಅನುದಾನದ ಮೊತ್ತ ಇನ್ನೂ ತಾಲೂಕು ಆಡಳಿತದಿಂದ ಬಂದಿಲ್ಲ. ಸರಕಾರದಿಂದ ಬರುವ ಅನುದಾನವನ್ನು ಸರಿಯಾಗಿ ಪಾವತಿ ಮಾಡಬೇಕು ಎಂದರು.ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರಪ್ಪ ಬಡಿಗೇರ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಜ.2ರಂದು ಆಚರಿಸಲು ಸಮಾಜ ಬಾಂಧವರು ನಿರ್ಧರಿಸಿದ್ದು, ತಾಲೂಕಾಡಳಿತದ ಸಹಕಾರದೊಂದಿಗೆ ಯಶಸ್ವಿಯಾಗಿ ಕಾರ್ಯಕ್ರಮ ಆಚರಣೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಪ್ರಾಣೇಶ ಬಳ್ಳಾರಿ, ಮಹೇಶ ಅಂಗಡಿ, ತಾಲೂಕು ದೈಹಿಕ ಪರಿವೀಕ್ಷಕಿ ಸರಸ್ವತಿ, ಕಂದಾಯ ಇಲಾಖೆಯ ಸಿಬ್ಬಂದಿ ಸುಂದರರಾಜ್, ವಿಶ್ವಕರ್ಮ ಸಮಾಜದ ಹಿರಿಯರಾದ ತಾಲೂಕು ವಿಶ್ವಕರ್ಮ ಸಮಾಜದ ಹಿರಿಯರಾದ ಭೀಮಣ್ಣ ಬಡಿಗೇರ, ಕಾರ್ಯದರ್ಶಿ ಅನೀಲ ಕಮ್ಮಾರ, ಬಸವರಾಜ ಬಡಿಗೇರ, ಮಹಾಂತೇಶ ಬಡಿಗೇರ ಸೇರಿದಂತೆ ಇತರರು ಇದ್ದರು.ಉಪನಯನ
ಜ. 2ರಂದು ಅಮರಶಿಲ್ಪಿ ಶ್ರೀ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ವಿಶ್ವಕರ್ಮ ಸಮಾಜದ ವತಿಯಿಂದ ಸಾಮೂಹಿಕ ಉಪನಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕುಷ್ಟಗಿ ತಾಲೂಕಿನ ಕುಷ್ಟಗಿ, ತಾವರಗೇರಾ, ಹನಮಸಾಗರ, ಹನುಮನಾಳ, ದೋಟಿಹಾಳ ಭಾಗದ ಎಲ್ಲ ಸಮಸ್ತ ತಾಲೂಕು ವಿಶ್ವಕರ್ಮ ಬಾಂಧವರು ತಮ್ಮ ಮಕ್ಕಳ ಉಪನಯನ ಮಾಡುವ ಸಲುವಾಗಿ ಸಮಾಜದ ಮುಖಂಡರನ್ನು ಸಂಪರ್ಕಿಸಿ ಹೆಸರು ನೋಂದಣಿ ಮಾಡಿಸಬೇಕು.