ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಕಾಪಾಡುವುದು ಅಗತ್ಯವಾಗಿದೆ. ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ, ಸಹೋದರತ್ವ ಮತ್ತು ಸಾಮರಸ್ಯದಿಂದ ಹಬ್ಬ ಆಚರಿಸಬೇಕು.
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಬಕ್ರೀದ್ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ಆಚರಿಸುವ ಉದ್ದೇಶದಿಂದ ಪಟ್ಟಣದ ಪೊಲೀಸ್ ಇಲಾಖೆ ವತಿಯಿಂದ ಶಾಂತಿಸಭೆಯನ್ನು ಸಿಪಿಐ ಬಿ.ವಿ. ನ್ಯಾಮಗೌಡ ಅವರ ಅಧ್ಯಕ್ಷತೆಯಲ್ಲಿ ಪಿಎಸ್ಐ ನಾಗರಾಜ ಗಡದ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.ಸಿಪಿಐ ಬಿ.ವಿ. ನ್ಯಾಮಗೌಡ ಮಾತನಾಡಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಕಾಪಾಡುವುದು ಅಗತ್ಯವಾಗಿದೆ. ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ, ಸಹೋದರತ್ವ ಮತ್ತು ಸಾಮರಸ್ಯದಿಂದ ಹಬ್ಬ ಆಚರಿಸಬೇಕು ಎಂದರು.
ಲಕ್ಷ್ಮೇಶ್ವರ ಪಟ್ಟಣ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಈ ನೆಲದಲ್ಲಿ ಸೂಫಿ ಸಂತರು ನಡೆದಾಡಿ ಭಾವೈಕ್ಯತೆಗೆ ನಾಂದಿ ಹಾಡಿದ್ದಾರೆ. ಹಿಂದೂ ಮುಸ್ಲಿಮರು ಸಹೋದರತೆಯಿಂದ ಜೀವನ ನಡೆಸುತ್ತಿದ್ದಾರೆ. ಎಲ್ಲರೂ ಒಂದೇ ಕುಟುಂಬದ ಸಹೋದರರಂತೆ ಬದುಕುತ್ತಿರುವ ಪಟ್ಟಣದಲ್ಲಿ ಶಾಂತಿಗೆ ಭಂಗ ತರುವ ರೀತಿಯಲ್ಲಿ ನಡೆದುಕೊಳ್ಳುವವರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದರು.ಪಿಎಸ್‌ಐ ನಾಗರಾಜ ಗಡದ ಮಾತನಾಡಿ ಹಬ್ಬದ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಭದ್ರತಾ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಸಂಚಾರ ನಿಯಮ ಪಾಲಿಸುವುದು ಹಾಗೂ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯಿಂದ ವರ್ತಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಪೂರ್ಣಾಜಿ ಕರಾಟೆ, ಗೋಕಾವಿ, ರಫೀಕ್ ಕಲಬುರ್ಗಿ, ವಿನೂಷ್ ಜಮಖಂಡಿ ಮಾತನಾಡಿದರು. ದರ್ಗಾ ಕಮಿಟಿಯ ಅಧ್ಯಕ್ಷ ಸುಲೇಮಾನ್ ಸಾಬ್ ಕಣಿಕೆ, ಗೌಸ್ ಮೋದಿನ್ ಜಮಖಂಡಿ, ನೂರ ಅಹ್ಮದ್ ನಿಡಗುಂದಿ ಎಂ.ಎನ್. ಬಾಡಗಿ, ಪಕೀರಪ್ಪ ಜಕ್ಕನವರ, ಹುಸೇನ್‌ಸಾಬ ಗುಡೂರು, ಮಹಮ್ಮದ್ ಸಾಧಿಕ್ ಹುಲಗೇರಿ, ಇಸ್ಮಾಯಿಲ್ ಅಡೂರು, ಸುರೇಶ ಹಟ್ಟಿ, ಖಾಜಾಹುಶನ್ ಹಡಗಲಿ, ಪ್ರವೀಣ್ ನರೇಗಲ್, ಮಲಿಕ್ ಹೆಸರೂರ, ಖಾಜಾಪೀರ್ ಜಮಖಂಡಿ, ಖಾದರಸಾಬ್ ನದಾಫ್, ಪ್ರವೀಣ ನರೇಗಲ್ಲ, ಮಹ್ಮದ್‌ಸಾದಿಕ್ ಹಿಲಗೇರಿ ಸೇರಿದಂತೆ ಅನೇಕರು ಇದ್ದರು. ವಿದ್ಯಾರ್ಥಿಗಳ ಸಮಗ್ರ ಪ್ರಗತಿಗೆ ಕ್ರೀಡೆ ಮುಖ್ಯಗದಗ: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಕ್ರೀಡೆಗೆ ಮಹತ್ವದ ಪಾತ್ರವಿದ್ದು, ಇದು ದೈಹಿಕ ಆರೋಗ್ಯದ ಜತೆಗೆ ಶಿಸ್ತು, ನಾಯಕತ್ವ ಮತ್ತು ತಂಡ ಮನೋಭಾವವನ್ನು ಬೆಳೆಸುತ್ತದೆ ಎಂದು ಕೆಎಸ್‌ಎಸ್ ಪದವಿ ಕಾಲೇಜಿನ ನಿವೃತ್ತ ಗಣಿತಶಾಸ್ತ್ರ ಪ್ರಾಧ್ಯಾಪಕ ಪ್ರೊ. ವಿ.ಎಚ್. ಕೊಳ್ಳಿ ತಿಳಿಸಿದರು.ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಆರ್ಟ್ ಆಫ್ ಗಿವಿಂಗ್ ಫೌಂಡೇಶನ್ ದಾನ ಮಾಡಿದ ವಾಲಿಬಾಲ್ ಕಿಟ್‌ನ್ನು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿ ಮಾತನಾಡಿದರು.ಪ್ರಸ್ತುತ ಫೌಂಡೇಶನ್ ಯುವ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಭೌತಿಕ ಬೆಳವಣಿಗೆಗೆ ಉಪಯುಕ್ತವಾದ ಹಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳಲ್ಲಿ ಕ್ರೀಡಾ ಸಾಮಗ್ರಿಗಳ ದಾನವೂ ಒಂದಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಸಂಸ್ಥೆಗೆ ಆಭಾರಿಯಾಗುವುದರ ಜತೆಗೆ ಕಾಲೇಜಿನ ಕೀರ್ತಿ ಹೆಚ್ಚಿಸಬೇಕೆಂದರು.ಡಾ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಅಚ್ಯುತ ಸಮಂತ ಅವರು 2013ರ ಮೇ 17ರಂದು ಸ್ಥಾಪಿಸಿರುವ ಆರ್ಟ್ ಆಫ್ ಗಿವಿಂಗ್ ಫೌಂಡೇಶನ್ ಸಮಾಜದಲ್ಲಿ ಪ್ರೀತಿ, ಕರುಣೆ, ದಯೆ, ಸಹಾನುಭೂತಿ, ಶಾಂತಿ, ಸಂತೋಷವನ್ನು ಉತ್ತೇಜಿಸುವತ್ತ ಗಮನಹರಿಸಿ ಸ್ಥಳೀಯ ಸ್ವಯಂ ಸೇವಕರು, ಎನ್‌ಜಿಒಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪರಸ್ಪರೋಪಗ್ರಹೋ ಜೀವಾನಂ ಮೌಲ್ಯದ ಹಿರಿಮೆಗೆ ಪಾತ್ರವಾಗಿದ್ದು, ಫೌಂಡೇಶನದ ಸಹಾಯವನ್ನು ಸದಾಕಾಲ ಸ್ಮರಿಸುತ್ತೇವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾ. ಡಾ. ಸುಧಾ ಕೌಜಗೇರಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ಸ್ವಾಗತಿಸಿದರು. ಪ್ರಾಧ್ಯಾಪಕ ಭೀಮೇಶ ನಿರೂಪಿಸಿದರು. ಮಹಿಳಾ ವೇದಿಕೆ ಸಂಯೋಜಕಿ ಡಾ. ಸಾರಿಕಾ ಪಾಟೀಲ, ಪ್ರೊ. ವಿ.ಎಚ್. ಕೊಳ್ಳಿ ಪರಿಚಯಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಲಕ್ಷ್ಮಣ ಮುಳಗುಂದ ವಂದಿಸಿದರು.