ಗೋಸೇವೆ ಮೂಲಕ ಹುಟ್ಟುಹಬ್ಬ ಆಚರಿಸಿ: ಪೇಜಾವರ ಶ್ರೀ

| Published : Nov 26 2023, 01:15 AM IST

ಗೋಸೇವೆ ಮೂಲಕ ಹುಟ್ಟುಹಬ್ಬ ಆಚರಿಸಿ: ಪೇಜಾವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

3 ಕ್ವಿಂಟಲ್‌ನಷ್ಟು ಕುಚ್ಚಿಗೆ ಅಕ್ಕಿ ಗಂಜಿ ಮಾಡಿ, ಅದರೊಂದಿಗೆ 4 ಕ್ವಿಂಟಲ್‌ ಕಾಯಿ ಹಿಂಡಿ, 4 ಕ್ವಿಂಟಲ್‌ ಎಳ್ಳು ಹಿಂಡಿ, 10 ಕ್ವಿಂಟಲ್‌ ಗೋಪಿ ಹಿಂಡಿ, 120 ಕೆ.ಜಿ ಬೆಲ್ಲ ಸೇರಿದಂತೆ ಇನ್ನಿತರ ಆಹಾರವನ್ನು ಮಿಶ್ರಣ ಮಾಡಿ ಗೋಶಾಲೆಯ ಎಲ್ಲ ಗೋವುಗಳಿಗೆ ಉಣ ಬಡಿಸಲಾಯಿತು

ಕನ್ನಡಪ್ರಭ ವಾರ್ತೆ ಉಡುಪಿ

ತಮ್ಮ ಜನ್ಮದಿನ ಮತ್ತು ಇನ್ನಿತರ ಸಂಭ್ರಮದ ದಿನಗಳನ್ನು ಗೋಸೇವೆ ಮಾಡುವುದರ ಮೂಲಕ ಆಚರಿಸಿಕೊಂಡರೆ ಅದು ಹೆಚ್ಚು ಅರ್ಥಪೂರ್ಣವೂ ಪುಣ್ಯಪ್ರದವೂ ಆಗಿರುತ್ತದೆ ಎಂದು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ಹೇಳಿದರು. ಅವರು ಶನಿವಾರ, ನೀಲಾವರ ಕಾಮಧೇನು ಗೋಶಾಲೆಯಲ್ಲಿ ಉಡುಪಿಯ ಉದ್ಯಮಿ ಶಶಿಧರ ಭಟ್ ನೇತೃತ್ವದಲ್ಲಿ ತಮ್ಮ ಬಂಧುಗಳೊಂದಿಗೆ ನಡೆದ ಗೋಗ್ರಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಸ್ಥಳದಲ್ಲಿಯೇ 3 ಕ್ವಿಂಟಲ್‌ನಷ್ಟು ಕುಚ್ಚಿಗೆ ಅಕ್ಕಿ ಗಂಜಿ ಮಾಡಿ, ಅದರೊಂದಿಗೆ 4 ಕ್ವಿಂಟಲ್‌ ಕಾಯಿ ಹಿಂಡಿ, 4 ಕ್ವಿಂಟಲ್‌ ಎಳ್ಳು ಹಿಂಡಿ, 10 ಕ್ವಿಂಟಲ್‌ ಗೋಪಿ ಹಿಂಡಿ, 120 ಕೆ.ಜಿ ಬೆಲ್ಲ ಸೇರಿದಂತೆ ಇನ್ನಿತರ ಆಹಾರವನ್ನು ಮಿಶ್ರಣ ಮಾಡಿ ಗೋಶಾಲೆಯ ಎಲ್ಲ ಗೋವುಗಳಿಗೆ ಉಣ ಬಡಿಸುವ ಮೂಲಕ ಗೋಸೇವೆಯನ್ನು ಮಾಡಲಾಯಿತು. ಇದಕ್ಕೆ ಮೊದಲು ಶ್ರೀಪಾದರಿಗೆ ಈ ಸಂದರ್ಭದಲ್ಲಿ ಪಾದಪೂಜೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸವಿತಾ ಶಶಿಧರ್ ಭಟ್, ಹರೀಶ್ ಆಚಾರ್ಯ, ರಮೇಶ್ ಮೂಡಬೆಟ್ಟು, ಮಂಜುನಾಥ ರಾವ್, ಜನಾರ್ದನ ಭಟ್, ಗೋವಿಂದ ಭಟ್, ರಾಜಗೋಪಾಲ್ ಭಟ್, ನಾಗರಾಜ್ ಬಾಯರಿ, ವರದ ಭಟ್ ಮಣಿಪಾಲ, ಅನಂತ್ರಾಮ್ ರಾವ್, ನಿರಂಜನ್ ಭಟ್, ಶೈಲೇಶ್ ಭಟ್, ರಜನೀಶ್ ಭಟ್ ಮುಂತಾದವರು ಉಪಸ್ಥಿತರಿದ್ದರು.