ಡಾ.ಅಂಬೇಡ್ಕರ್‌ ಜಯಂತಿ ಹಬ್ಬದಂತೆ ಆಚರಿಸಿ

| Published : Apr 09 2025, 12:31 AM IST

ಡಾ.ಅಂಬೇಡ್ಕರ್‌ ಜಯಂತಿ ಹಬ್ಬದಂತೆ ಆಚರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಬೆಳ್ಳಿರಥ ಬೆಳ್ಳಿ ರಥದ ಮೇಲೆ ಇರಿಸಿ ಮೆರವಣಿಗೆ ಮಾಡಿಸಬೇಕು. ಹಾಗೂ ಅಂಬೇಡ್ಕರ್ ರವರ ಜೀವನಧಾರಿತ ಸ್ತಬ್ದಚಿತ್ರವನ್ನು ಮೆರವಣಿಗೆ ಜವಾಬ್ದಾರಿಯನ್ನು ಎಲ್ಲಾ ಇಲಾಖೆಯವರು ವಹಿಸಿಕೊಳ್ಳ ಬೇಕು ಹಾಗೆ ದಲಿತ ಎಸ್ ಎಸ್ ಎಲ್ ಸಿ ಹಾಗೂ ದ್ವಿತಿಯ ಪಿಯುಸಿ ವಿದ್ಯಾರ್ಥಿ ಮಕ್ಕಳಿಗೆ ಪ್ರೋತ್ಸಹಧನ ನೀಡಿ ಗೌರವಿಸಲಾಗುವುದು.

ಕನ್ನಡಪ್ರಭ ವಾರ್ತೆ ಚೇಳೂರು

ಏಪ್ರಿಲ್ ೧೪ರಂದು ನಡೆಯುವ ಡಾ.ಬಿಆರ್ ಅಂಬೇಡ್ಕರ್ ಮತ್ತು ಬಾಬಾ ಜೀವನ ರಾಮ್ ಅವರ ಜಯಂತಿ ಆಚರಣೆ ಕುರಿತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪೂರ್ವಭಾವಿ ಸಭೆಯು ತಹಸೀಲ್ದಾ‌ರ್ ಶ್ರೀನಿವಾಸಲು ನಾಯ್ಡು ಅಧ್ಯಕ್ಷತೆಯಲ್ಲಿ ನಡೆಯಬೇಕಿತ್ತು. ಆದರೆ ಕೆಲ ಕಾರಣಂತರದಿಂದ ಸೋಮವಾರ ಪಟ್ಟಣ ತಾಲೂಕು ಕಚೇರಿಯಲ್ಲಿ ಇಒ ರಮೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ರೂಪುರೇಷೆಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕರು ಶೇಷಾದ್ರಿ ಅವರು ಮಾತನಾಡಿ ಏಪ್ರಿಲ್ ೧೪ ರಂದು ಎರಡು ಮಹಾನ್ ಚೇತನಗಳ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಸಿದ್ದತೆ ಮಾಡಿಕೊಳ್ಳಲಾಗುವುದು ಎಂದರು.

ಕಚೇರಿಗಳಿಗೆ ದೀಪಾಲಂಕಾರ

ಎಲ್ಲಾ ಸರ್ಕಾರಿ ಕಛೇರಿಗಳಿಗೆ ದೀಪಾಲಂಕಾರ, ಮತ್ತು ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡುವ ಬಗ್ಗೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಿಚಾರಗಳನ್ನು ಅದ್ಯಯನ ಮಾಡಿರುವ ಉಪನ್ಯಾಸಕರಿಂದ ಉಪನ್ಯಾಸ ನೀಡುವ ಬಗ್ಗೆ ತಿಳಿಸಿದರು. ತಾಲೂಕು ಕಾರ್ಯನಿರ್ವಹಣಾಧಿಕಾರಿ ರಮೇಶ್ ಮಾತನಾಡಿ ಆಚರಣೆ ಹಬ್ಬ ಅದು ನಮ್ಮ ಮೂಲ ನಿವಾಸಿಗಳ ಪರಂಪರೆ, ಯಾರು ಬೇಕಾದರೂ ಅವರ ಪರಂಪರೆಯ ದೇವರ ಪೂಜೆ ಯನ್ನು ಮಾಡಬಹುದು ಆದರೆಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮ್ಮೆಲ್ಲರ ದೈವ, ಘನತೆ, ಅವರ ಜಯಂತಿ ಆಚರಣೆ ನಮಗೆ ಹಬ್ಬ ಆ ದಿನವನ್ನ ಬಹಳ ವಿಜೃಂಭಣೆಯಿಂದ ಆಚರಿಸಬೇಕು ಎಂದರು.

ಹಬ್ಬದಂತೆ ಜಯಂತಿ ಆಚರಿಸಿ

ಚಿಕ್ಕಬಳ್ಳಾಪುರ ಜಿಲ್ಲಾ ಕೆ.ಡಿ.ಎಸ್‌.ಎಸ್ ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರಮಣ ಮಾತನಾಡಿ, ಚೆಳೋರು ನೂತನ ತಾಲೂಕಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಎಲ್ಲಾ ಸಂಘ ಸಂಸ್ಥೆಗಳು ಅಧಿಕಾರಿ ಗಳು ಮಹಿಳಾ ಸಂಘದವರು ಪ್ರತಿಯೊಬ್ಬರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು, ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ದೀಪಾವಳಿ ಮಾಡಿ ಅಂಬೇಡ್ಕರ್ ಜಯಂತಿಯನ್ನ ಮನೆಯ ಹಬ್ಬದಂತೆ ಮಾಡಬೇಕಾಗಿದೆ ಎಂದರು.

ಜಿ ನರಸಿಂಹ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಬೆಳ್ಳಿರಥ ಬೆಳ್ಳಿ ರಥದ ಮೇಲೆ ಇರಿಸಿ ಮೆರವಣಿಗೆ ಮಾಡಿಸಬೇಕು. ಹಾಗೂ ಅಂಬೇಡ್ಕರ್ ರವರ ಜೀವನಧಾರಿತ ಸ್ತಬ್ದಚಿತ್ರವನ್ನು ಮೆರವಣಿಗೆ ಜವಾಬ್ದಾರಿಯನ್ನು ಎಲ್ಲಾ ಇಲಾಖೆಯವರು ವಹಿಸಿಕೊಳ್ಳ ಬೇಕು ಹಾಗೆ ದಲಿತ ಎಸ್ ಎಸ್ ಎಲ್ ಸಿ ಹಾಗೂ ದ್ವಿತಿಯ ಪಿಯುಸಿ ವಿದ್ಯಾರ್ಥಿ ಮಕ್ಕಳಿಗೆ ಪ್ರೋತ್ಸಹಧನ ನೀಡಿ ಗೌರವಿಸಬೇಕು ಎಂದು ಸಲಹೆ ನೀಡಿದರು.ತಾಲೂಕು ವೈದ್ಯಾಧಿಕಾರಿ ಸತ್ಯನಾರಾಯಣರೆಡ್ಡಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಶೇಷಾದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ತಾಲ್ಲುಕು ಶಿರಸ್ತೆದಾರ್‌ ಸತೀಶ್, ಆರ್ ಐ ಈಶ್ವರಪ್ಪ,ವಿವಿದ ಇಲಾಖೆಯ ಅಧಿಕಾರಿಗಳು ಸೇರಿದಂತೆ ದಲಿತ ಮುಖಂಡರಾದ ಡಿವಿ ವೆಂಕಟೇಶ್,ಜಿ ನರಸಿಂಹಪ್ಪ, ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣ, ಡಿಕೆ ರಮೇಶ್, ಟಿ ಎಂ ಶ್ರೀನಿವಾಸ್,ಟೈಲರ್ ರಾಮಚಂದ್ರ, ಈಶ್ವರ, ಆನಂದ, ಪಾಳ್ಯಕೆರೆ ಬಾಬು,ಶ್ರೀನಾಥ ಉಪಸ್ಥಿತರಿದ್ದರು.ಸಭೆ ಬಹಿಷ್ಕಾರ

ನೂತನ ಚೇಳುರು ತಾಲೂಕಿನಲ್ಲಿ ಏ.4 ರಂದು ಬಾಬು ಜಗಜೀವನ್ ರಾಮ್ ಹಾಗೂ ಅಂಬೆಡ್ಕರ್ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ ಹಮ್ಮಿಕೋಳ್ಳಲಾಗಿತ್ತು, ಆದರೆ ತಹಸೀಲ್ದಾರ್ ಬಿಟ್ಟರೆ ವಿವಿಧ ಇಳಾಖೆಯ ಅದಿಕಾರಿಗಳ ಗೈರು ಹಾಜರಿಂದ ವಿವಿಧ ದಲಿತ ಮುಖಂಡರು ಅಧಿಕಾರಿಗಳ ವಿರುದ್ದ ದಿಕ್ಕಾರಗಳನ್ನು ಕೂಗುತ್ತಾ ಪೂರ್ವಭಾವಿಸಭೆಯಿಂದ ಹೋರನಡೆದರು.ನಂತರ ಏ07 ರಂದು ಪೂರ್ವಭಾವಿ ಸಭೆ ಹಮ್ಮಿಕೋಳ್ಳಲಾಗಿದ್ದು ಅದಕ್ಕೆ ಮುಖ್ಯವಾಗಿ ರಾಷ್ಠಿಯ ಹಬ್ಬಗಳ ಆಚರಣೆ ಸಮಿತಿಯ ಅದ್ಯಕ್ಷರು ಆದಂತಹ ತಹಸಿಲ್ದಾರ್ ರವರು ಸೇರಿದಂತೆ ಬುರುಡಗುಂಟೆ, ಏನಿಗದಲೆ,ಚಿಲಕಲನೇರ್ಪು ಪಿಡಿಒ ಗಳು ಗೈರಾಗಿದ್ದು ಅವರಿಗೆ ಕಾರಣ ಕೇಲಿ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.