ಚುನಾವಣೆಯನ್ನು ಹಬ್ಬದ ರೀತಿ ಸಂಭ್ರಮಿಸಿ, ತಪ್ಪದೇ ಮತ ಚಲಾಯಿಸಿ: ಶಿವಮೂರ್ತಿ

| Published : Mar 20 2024, 01:21 AM IST

ಚುನಾವಣೆಯನ್ನು ಹಬ್ಬದ ರೀತಿ ಸಂಭ್ರಮಿಸಿ, ತಪ್ಪದೇ ಮತ ಚಲಾಯಿಸಿ: ಶಿವಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಗರೀಕ ಬಂಧುಗಳೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಹಬ್ಬದ ರೀತಿ ಸಂಭ್ರಮಿಸುವ ಮೂಲಕ ಈ ಮತದಾರರ ಹಬ್ಬದಲ್ಲಿ ಪಾಲ್ಗೊಂಡು ಹಕ್ಕು ಚಲಾಯಿಸಿ ಎಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಶಿವಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ನಾಗರೀಕ ಬಂಧುಗಳೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಹಬ್ಬದ ರೀತಿ ಸಂಭ್ರಮಿಸುವ ಮೂಲಕ ಈ ಮತದಾರರ ಹಬ್ಬದಲ್ಲಿ ಪಾಲ್ಗೊಂಡು ಹಕ್ಕು ಚಲಾಯಿಸಿ ಎಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಶಿವಮೂರ್ತಿ ಹೇಳಿದರು.

ತಾಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣಾ ಹಿನ್ನೆಲೆ ತಾಪಂ ಹೊರಾಂಗಣದಲ್ಲಿ ನಡೆದ ಬೈಕ್‌ ರ್‍ಯಾಲಿ ಗೆ ಬಲೂನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಚುನಾವಣೆಗಳಲ್ಲಿ ಪ್ರತಿಯೊಬ್ಬ ಮತದಾರರು ತಪ್ಪದೆ ಮತ ಚಲಾಯಿಸಿ, ಮತ ಚಲಾವಣೆ ಮಾಡುವುದು ಮತದಾರರ ಪ್ರಮುಖ ಹಕ್ಕು, ಈ ಹಕ್ಕನ್ನು ಹಬ್ಬದ ಮಾದರಿ ಮೂಲಕ ಸಂಭ್ರಮಿಸಿ ಮೂಲಕ ಶೇಕಡ 90ರಷ್ಟು ಯಶಸ್ವಿ ಮತದಾನಕ್ಕೆ ಸಹಕಾರ ನೀಡಬೇಕು, ಈ ಹಿನ್ನೆಲೆ ಬೈಕ್ ರ್‍ಯಾಲಿ ಮೂಲಕ ಮತದಾರರಿಗೆ ಅರಿವು ಮೂಡಿಸಲಾಗುತ್ತಿದೆ, ಶಾಂತಿಯುತ ಮತ್ತು ಹಬ್ಬದ ಮಾದರಿ ಮತದಾನಕ್ಕೆ ಸಾವ೯ಜನಿಕರೆಲ್ಲರೂ ಸಹಕರಿಸಬೇಕು ಎಂದರು.

317 ತೃತೀಯ ಲಿಂಗಿಗಳಿಂದ ನೊಂದಣಿ:

ಈ ವೇಳೆ ತಾಪಂ ಇಒ ಶ್ರೀನಿವಾಸ್ ಮಾತನಾಡಿ, ಕೊಳ್ಳೇಗಾಲ ತಾಲೂಕು ವ್ಯಾಪ್ತಿಯಲ್ಲಿ 317 ತೃತೀಯ ಲಿಂಗಿಗಳು ತಮ್ಮ ಹಕ್ಕು ಚಲಾವಣೆಗಾಗಿ ನೊಂದಾಯಿಸಿಕೊಂಡಿರುವುದು ಹೆಮ್ಮೆಯ ವಿಚಾರ, ಕೊಳ್ಳೇಗಾಲ ತಾಲೂಕು ವ್ಯಾಪ್ತಿಯಲ್ಲಿ ಬೈಕ್ ರ್‍ಯಾಲಿ ಮೂಲಕ ಈ ಬಾರಿ ಹೆಚ್ಚಿನ ಮತದಾನಕ್ಕಾಗಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 90ರಷ್ಟು ಮತದಾನ ಆಗಬೇಕು ಎಂಬುದು ನಮ್ಮ ಗುರಿಯಾಗಿದೆ. ಈನಿಟ್ಟಿನಲ್ಲಿ ಅರಿವು ಕಾರ್ಯಕ್ರಮ ಅಯೋಜಿಸಲಾಗಿದೆ. ಈ ಹಿನ್ನೆಲೆ ಇಂದು 500 ಬೈಕ್ ಬಳಸಿ ಜಾಥಾ ನಡೆಸಲಾಗುತ್ತಿದೆ. ಮತದಾನದ ಪ್ರಕ್ರಿಯೆಯಿಂದ ಹೊರಗುಳಿದವರನ್ನು ಕರೆತರುವುದು, ತಮಗೆ ಇಷ್ಟ ಬಂದವರಿಗೆ ಹಕ್ಕು ಚಲಾವಣೆಗೆ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಅವಕಾಶ ನೀಡುವುದು ನಮ್ಮ ದ್ಯೇಯವಾಗಿದೆ ಎಂದರು.

ಮತಗಟ್ಟೆಗಳಿಗೆ ಆಗಮಿಸುವ ಹಿರಿಯರಿಗೆ ಅಗತ್ಯ ಸೌಲಭ್ಯಕ್ಕೆ ಕ್ರಮವಹಿಸಲಾಗಿದೆ. ಯುವ ಮತದಾರರನ್ನು ಬಳಸಿಕೊಂಡು ಅವರನ್ನು ಜಾಗೃತಿಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ಯುವ ಮತದಾರರ ಆಟೋಗ್ರಾಫ್ ಸಂಗ್ರಹಣೆ ಸಹಾ ನಮ್ಮ ಗುರಿಯಾಗಿದೆ. ಈ ಹಿನ್ನೆಲೆ ಹಬ್ಬದ ರೀತಿ ಚುನಾವಣೆಯನ್ನು ಚುನಾವಣೆ ಪರ್ವ, ದೇಶದ ಗರ್ವ ಎಂಬ ನಿಟ್ಟಿನಲ್ಲಿ ಆಚರಿಸಲಾಗುತ್ತಿದೆ, ವಿಕಚೇತನರನ್ನು ಹೆಚ್ಚಿನ ನಿಟ್ಟಿನಲ್ಲಿ ಮತಗಟ್ಟೆಗೆ ಕರೆತರುವ ಮೂಲಕ ಅವರಿಗೆ ಅಗತ್ಯ ಸೌಲಭ್ಯ ಮಾಡಿಕೊಡಲಾಗುವುದು ಎಂದರು.

ಬೈಕ್ ರ್‍ಯಾಲಿ ತಾಪಂನಿಂದ ಹೊರಟು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಡಾ.ಅಂಬೇಡ್ಕರ್ ರಸ್ತೆ, ಮಸೀದಿ ವೃತ್ತ, ಡಾ.ರಾಜ್ ಕುಮಾರ್ ರಸ್ತೆ, ಗುರುಕಾರ್ ವೃತ್ತ, ಎಂಜಿಎಸ್ವಿ ರಸೆಯ ಮೂಲಕ ತೆರಳಿ ಅರಿವು ಮೂಡಿಸಲಾಯಿತು.

ಈ ವೇಳೆ ತಾಪಂ ಇಒ ಶ್ರೀನಿವಾಸ್, ಸಹಾಯಕ ನಿರ್ದೆಶಕ ಗೋಪಾಲಕೃಷ್ಣ, ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್, ಜಿಪಂ ಎಇಇ ಶಿವಪ್ರಕಾಶ್, ಕೃಷಿ ಅಧಿಕಾರಿ ಸುಂದ್ರಮ್ಮ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ ಇನ್ನಿತರಿದ್ದರು.

19ಕೆಜಿಎಲ್14 ಕೊಳ್ಳೇಗಾಲದ ತಾಪಂ ಆವರಣದಲ್ಲಿ ಬೈಕ್ ರ್‍ಯಾಲಿಗೆ ಉಪವಿಭಾಗಾಧಿಕಾರಿ ಚಾಲನೆ ನೀಡಿ ಮಾತನಾಡಿದರು. ಇಒ ಶ್ರೀನಿವಾಸ್, ಗೋಪಾಲಕೃಷ್ಣ, ಶಿವಪ್ರಕಾಶ್ ಇದ್ದಾರೆ.