ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಚನ್ನಗಿರಿ ಪೊಲೀಸ್ ಉಪ ವಿಭಾಗಕ್ಕೆ ಒಳಪಡುವ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳ ಉಪವಿಭಾಗದ ವ್ಯಾಪ್ತಿಯಲ್ಲಿ ಗೌರಿಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಸೌಹಾರ್ದ ಶಾಂತಿ ಸಭೆ ಪಟ್ಟಣದ ವಿಠಲ ರುಕ್ಕುಮ್ಮಾಯಿ ಸಮುದಾಯ ಭವನದಲ್ಲಿ ಗುರುವಾರ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭ ಮಾತನಾಡಿದ ಎಸ್‌ಪಿ ಅವರು, ಹಬ್ಬಗಳು ಮನಸ್ಸಿಗೆ ಸಂತೋಷ, ನೆಮ್ಮದಿ ನೀಡುವ ಧಾರ್ಮಿಕ ಕಾರ್ಯಕ್ರಮಗಳಾಗಿವೆ. ಅನ್ಯ ಧರ್ಮೀಯರಿಗೆ ನೋವಾಗದಂತೆ ಕಾನೂನಿನ ಚೌಕಟ್ಟಿನಲ್ಲಿ ಹಬ್ಬಗಳ ಆಚರಿಸಿ. ಸಾರ್ವಜನಿಕವಾಗಿ ಗಣಪತಿಗಳನ್ನು ಪ್ರತಿಷ್ಠಾಪಿಸುವಂಥವರು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಪೆಂಡಾಲ್‌ನಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಗಣೇಶ ವಿಸರ್ಜನೆ ಸಮಯದಲ್ಲಿ ಸಮಿತಿಯವರು ಸ್ವಯಂ ಸೇವಕರನ್ನು ನಿಯೋಜನೆ ಮಾಡಬೇಕು ಎಂದು ಸುರಕ್ಷತೆಗೆ ಸಲಹೆ ನೀಡಿದ ಅವರು, ರಾತ್ರಿ 10 ಗಂಟೆಯೊಳಗೆ ಮೆರವಣಿಗೆ ಮುಕ್ತಾಯ ಮಾಡಬೇಕು ಎಂದರು.
ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ಸ್ಯಾಮ್ ವರ್ಗಿಸ್ ಮಾತನಾಡಿದರು. ಸಭೆಯಲ್ಲಿ ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಬಸವಾಪಟ್ಟಣ, ಸಂತೆಬೆನ್ನೂರು ಈ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.ವಿವಿಧ ಸಂಘಟನೆಗಳ ಪ್ರಮುಖರಾದ ಮಂಜುನಾಥ್, ಜಿ,ನಿಂಗಪ್ಪ, ನಾಗರಾಜ್, ಅಮಾನುಲ್ಲಾ, ಸರ್ಧಾರ್, ಸಾಸಿವೆಹಳ್ಳಿಯ ಜಬ್ಬರ್ ಖಾನ್, ಸಂತೆಬೆನ್ನೂರು ಬಸವರಾಜ್, ಹೊನ್ನಾಳಿಯ ಮಂಜುನಾಥ್ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.
ಹೊನ್ನಾಳಿಯ ಉಪ ವಿಭಾಗಾಧಿಕಾರಿ ಅಭಿಷೇಕ್, ತಹಶೀಲ್ದಾರ್ ಎನ್.ಜೆ.ನಾಗರಾಜ್, ಚನ್ನಗಿರಿ ತಾ.ಪಂ ಕಾರ್ಯನಿರ್ವಾಣಾಧಿಕಾರಿ ಪ್ರಕಾಶ್, ಸಿ.ಪಿ.ಐ.ರವೀಶ್, ಸಂತೆಬೆನ್ನೂರು ಪಿ.ಎಸ್.ಐ ಜಗದೀಶ್, ಅಬಕಾರಿ ಎಸ್.ಪಿ ಮುರುಡೇಶ್, ಹೊನ್ನಾಳಿ ತಹಶೀಲ್ದಾರ್ ರಾಜೇಶ್, ಹೊನ್ನಾಳಿ ತಾ.ಪಂ ಕಾರ್ಯನಿರ್ವಾಣಾಧಿಕಾರಿ ರಾಮಲಿಂಗ, ಹೊನ್ನಾಳಿ ಬೆಸ್ಕಂ ಅಭಿಯಂತರ ಜಯಪ್ಪ, ನ್ಯಾಮತಿ ಬೆಸ್ಕಾಂ ಇಲಾಖೆಯ ಅಭಿಯಂತರ ಶ್ರೀನಿವಾಸ್, ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ, ಆಗ್ನಿಶಾಮಕ ಠಾಣಾಧಿಕಾರಿ ಕುಮಾರ್ ಸೇರಿದಂತೆ ಹೊನ್ನಾಳಿ, ಚನ್ನಗಿರಿ, ನ್ಯಾಮತಿ ತಾಲೂಕುಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.- - -
-14ಕೆಸಿಎನ್‌ಜಿ1: ಸೌಹಾರ್ದ ಶಾಂತಿ ಸಭೆಯಲ್ಲಿ ಜಿಲ್ಲಾ ಎಸ್ಪಿ ಉಮಾಪ್ರಶಾಂತ್ ಮಾತನಾಡಿದರು.-14ಕೆಸಿಎನ್ಜಿ2: ಸೌಹಾರ್ದ ಶಾಂತಿ ಸಭೆಯಲ್ಲಿ ಹೊನ್ನಾಳಿ, ಚನ್ನಗಿರಿ, ನ್ಯಾಮತಿ ತಾಲೂಕುಗಳ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.