ರಾಜ್ಯ ಸರ್ಕಾರದಿಂದ ಹರ್ಡೆಕರ್ ಜಯಂತಿ ಆಚರಿಸಿ

| Published : Feb 21 2025, 12:47 AM IST

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರದಿಂದ ಸ್ವಾತಂತ್ರ್ಯ ಸೇನಾನಿ, ಗಾಂಧಿ ವಾದಿ, ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧರಾದ ಹರ್ಡೆಕರ್ ಮಂಜಪ್ಪ ಜಯಂತಿಯನ್ನು ಫೆಬ್ರವರಿ 18ರಂದು ಆಚರಿಸುವಂತೆ ಸೂಕ್ತ ಆದೇಶ ನೀಡಬೇಕೆಂದು ವಿಧಾನಸಭಾ ಸಭಾಪತಿ ಯು.ಟಿ.ಖಾದರ್ ಖಾನ್ ಅವರಿಗೆ ಡಾ.ಬಸವಪ್ರಭು ಸ್ವಾಮೀಜಿ ಮನವಿ ಸಲ್ಲಿಸಿದ್ದಾರೆ.

- ವಿಧಾನಸಭಾ ಸಭಾಪತಿ ಯು.ಟಿ.ಖಾದರ್ ಅವರಿಗೆ ಡಾ.ಬಸವಪ್ರಭು ಸ್ವಾಮೀಜಿ ಮನವಿ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಸ್ವಾತಂತ್ರ್ಯ ಸೇನಾನಿ, ಗಾಂಧಿ ವಾದಿ, ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧರಾದ ಹರ್ಡೆಕರ್ ಮಂಜಪ್ಪ ಜಯಂತಿಯನ್ನು ಫೆಬ್ರವರಿ 18ರಂದು ಆಚರಿಸುವಂತೆ ಸೂಕ್ತ ಆದೇಶ ನೀಡಬೇಕೆಂದು ವಿಧಾನಸಭಾ ಸಭಾಪತಿ ಯು.ಟಿ.ಖಾದರ್ ಖಾನ್ ಅವರಿಗೆ ಡಾ.ಬಸವಪ್ರಭು ಸ್ವಾಮೀಜಿ ಮನವಿ ಸಲ್ಲಿಸಿದರು.

ನಗರದ ದೊಡ್ಡ ಪೇಟೆಯ ಶ್ರೀ ವಿರಕ್ತ ಮಠಕ್ಕೆ ಸಭಾಪತಿ ಅವರು ಗುರುವಾರ ಆಗಮಿಸಿದ ಸಂದರ್ಭ ಮನವಿ ಪತ್ರ ಸಲ್ಲಿಸಲಾಯಿತು. ಧರ್ಮ, ಅಧ್ಯಾತ್ಮಗಳು, ಭಾರತೀಯ ಸಂಸ್ಕೃತಿಯ ಬೇರುಗಳು. ವರ್ತಮಾನದ ಬದುಕು ಸುಂದರಗೊಳ್ಳುವಲ್ಲಿ ಇವುಗಳ ಇಂದಿನ ಅಗತ್ಯತೆ ಅಲ್ಲಗಳೆಯುವಂತಹುದಲ್ಲ. ಭಾರತದ ಸ್ವಾತಂತ್ರ್ಯ ಸಂದರ್ಭದಲ್ಲೂ ಗಾಂಧೀಜಿಯವರ ಅಹಿಂಸಾತ್ಮಕ ಸತ್ಯಾಗ್ರಹದ ಹಿನ್ನಲೆ ಈ ಸಾಂಸ್ಕೃತಿಕ ಅಂಶಗಳ ಕೊಡುಗೆ ಅಪಾರ. ಮಹಾವೀರ, ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್‌ ಚಳವಳಿಗಳ ಆಧಾರವೂ ಹೌದು ಎಂದರು.

20ನೇ ಶತಮಾನದ ಆದಿಭಾಗದಲ್ಲಿ ಅಂದರೆ 1913ರಲ್ಲಿ 12ನೇ ಶತಮಾನದ ಮಹಾಮಾನವತಾವಾದಿ ಬಸವಣ್ಣನವರ ಜನ್ಮದಿನವನ್ನು ಬಸವ ಜಯಂತಿ ಎಂದಾಗಿ ಆಚರಿಸುವ ಮೊದಲ ಕಾರ್ಯಕ್ರಮ ದಾವಣಗೆರೆಯ ವಿರಕ್ತ ಮಠದಲ್ಲಿ ಅಂದಿನ ಶ್ರೀ ಮೃತ್ಯುಂಜಯ ಅಪ್ಪಗಳ ಪ್ರೇರಣೆಯಿಂದ ನಡೆಯಿತು. ಇದರ ಆಯೋಜನೆ, ಕಾರ್ಯಾನುಷ್ಠಾನದ ರೂವಾರಿ ಹರ್ಡೆಕರ್ ಮಂಜಪ್ಪನವರು ಎಂದರು.

ಶ್ರೀಮಠದ ಎಂ.ಜಯಕುಮಾರ, ಎಸ್.ಓಂಕಾರಪ್ಪ, ಟಿ.ಎಂ.ವೀರೇಂದ್ರ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಶ್ರೀಮಠದ ಭಕ್ತರು ಇದ್ದರು.

- - -

-20ಕೆಡಿವಿಜಿ40: ರಾಜ್ಯ ಸರ್ಕಾರದಿಂದ ಹರ್ಡೆಕರ್ ಮಂಜಪ್ಪನವರ ಜಯಂತಿಯನ್ನು ಪ್ರತಿ ವರ್ಷ ಅಚರಿಸಲು ಆದೇಶಿಸಬೇಕೆಂದು ದಾವಣಗೆರೆಯಲ್ಲಿ ಸಭಾಪತಿ ಯು.ಟಿ.ಖಾದರ್ ಖಾನ್‌ರಿಗೆ ಡಾ.ಬಸವಪ್ರಭು ಸ್ವಾಮೀಜಿ ಮನವಿ ಸಲ್ಲಿಸಿದರು.