ಸಾರಾಂಶ
-ಕನ್ನಡ ರಾಜ್ಯೋತ್ಸವ ನಿಮಿತ್ತ ಪೂರ್ವಭಾವಿ ಸಭೆಯಲ್ಲಿ ವೆಂಕಟೇಶನಾಯಕ ಭೈರಿಮಡ್ಡಿ ಸಲಹೆ
ಕನ್ನಡಪ್ರಭ ವಾರ್ತೆ ಸುರಪುರಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆಯಿಂದ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶನಾಯಕ ಭೈರಿಮಡ್ಡಿ ಹೇಳಿದರು.
ಕರವೇ ತಾಲೂಕು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕರವೇ ತಾಲೂಕು ಘಟಕದ ಪದಾಧಿಕಾರಿಗಳ, ಹೋಬಳಿ ವಲಯದ ಅಧ್ಯಕ್ಷರ ಮತ್ತು ಎಲ್ಲ ಪದಾಧಿಕಾರಿಗಳ ಹಾಗೂ ಎಲ್ಲ ಘಟಕದ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಕರವೇಯಿಂದ ಧ್ವಜಾರೋಹಣ ಮಾಡಲಾಗುವುದು. ಕರವೇಯ ಎಲ್ಲ ಪದಾಧಿಕಾರಿಗಳು ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದೊಂದಿಗೆ ಅದ್ಧೂರಿಯಾಗಿ ಆಚರಿಸಬೇಕು. ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕರವೇ ತಾಲೂಕು ಪದಾಧಿಕಾರಿಗಳಾದ ಆನಂದ ಮಾಚಗುಂಡಾಳ, ಹಣಮಂತ ದೇವಿಕೇರಿ, ಹಣಮಂತ ಹಾಲಗೇರಿ, ಭೀಮನಗೌಡ ಗೊಗಡಿಹಾಳ, ಶ್ರೀಶೈಲ ಕಾಚಾಪೂರ, ಮಲ್ಲು ವಿಷ್ಣು ಸೇನಾ, ಅನಿಲ, ರಂಗನಾಥ ಬಿರಾದಾರ್, ಕಾರ್ಮಿಕ ಘಟಕದ ಅಯ್ಯಪ್ಪ ವಗ್ಗಾಳಿ, ಯುವ ಘಟಕದ ನಾಗರಾಜ ಡೊಣ್ಣಿಗೇರಿ, ಮಲ್ಲಿಕಾರ್ಜುನ ದೇವಿಕೇರಿ, ನಗರ ಘಟಕದ ನಿಂಗಪ್ಪ ರಂಗಂಪೇಟೆ, ಅಟೋ ಘಟಕದ ಆನಂದ ರತ್ತಾಳ ಮತ್ತು ವಿವಿಧ ಹೋಬಲಳಿ ವಲಯ ಮತ್ತು ನಾನಾ ಗ್ರಾಮಶಾಖೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಾದ ಕುಮಾರ ಮೋಪಗಾರ, ಸೋಮು ದೊರೆ, ಮಲ್ಲಣ್ಣಗೌಡ ಕಕ್ಕೇರಿ.ಸೋಮು ಹಿರೇಹಳ್ಳ, ಅರ್ಜುನ ಯಕ್ಷಿಂತಿ, ಬಲಭೀಮ ಬೊಮ್ಮನಳ್ಳಿ, ಮಹಾರಾಜ ಹೆಮ್ಮಡಗಿ, ರಾಮನಗೌಡ ಶಖಾಪೂರ, ಶೇಖರ ಚೌಡೇಶ್ವರಿಹಾಳ, ದೇವಿಂದ್ರಪ್ಪಗೌಡ ಚಂದ್ಲಾಪೂರ, ಭೀಮರಾಯ ಬಾದ್ಯಾಪೂರ, ಷಣ್ಮುಖ, ಆಂಜನೇಯ ಅಡ್ಡೋಡಗಿ, ರಾಜು ತಳ್ಳಳ್ಳಿ, ಬಸವರಾಜ ಕಾಚಾಪೂರ, ರಾಯಪ್ಪ ತಿಪ್ಪನಟಗಿ, ಭೀಮರಾಯ ಹಾಲಗೇರಿ, ರಾಮಯ್ಯ ದೇವಿಕೇರಿ, ರಾಮಕೃಷ್ಣ ಡೊಣ್ಣಿಗೇರಿ, ಶ್ರೀಶೈಲ ರತ್ತಾಳ, ಭಾಗಣ್ಣ ಗುಡ್ಡಕಾಯಿ, ದೇವು ಗುಡ್ಡಕಾಯಿ, ಮಲ್ಲಪ್ಪ ಕುರಿ, ದತ್ತು ಬಾಡದ, ಮೌನೇಶ ಬಡಿಗೇರ ಇದ್ದರು.
-----ಫೋಟೋ: ಸುರಪುರ ಕರವೇ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಪೂರ್ವಭಾವಿ ಸಭೆಯಲ್ಲಿ ಕರವೇ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶನಾಯಕ ಭೈರಿಮಡ್ಡಿ ಮಾತನಾಡಿದರು.31ವೈಡಿಆರ್3