ಮೊಹರಂ ಶಾಂತಿಯಿಂದ ಆಚರಿಸಿ: ಆನಂದ

| Published : Jul 13 2024, 01:37 AM IST

ಸಾರಾಂಶ

ಹಿಂದೂ ಮತ್ತು ಮುಸ್ಲಿಂ ಬಾಂಧವರು ಮೊಹರಂ ಹಬ್ಬ ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕೆಂದು ಸಿಪಿಐ ಆನಂದ ವಾಘ್ಮೋಡೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಸುರಪುರ

ಹಿಂದೂ ಮತ್ತು ಮುಸ್ಲಿಂ ಬಾಂಧವರು ಮೊಹರಂ ಹಬ್ಬ ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕೆಂದು ಸಿಪಿಐ ಆನಂದ ವಾಘ್ಮೋಡೆ ಮನವಿ ಮಾಡಿದರು.

ನಗರದ ಪೊಲೀಸ್ ಠಾಣೆ ಆವರಣದಲ್ಲಿ ಮೊಹರಂ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಜೂ.17ರಂದು ಮೊಹರಂ ಆಚರಿಸಲಾಗುತ್ತದೆ. ಸಮುದಾಯಗಳ ಮುಖಂಡರು ತಿಳಿಸಿದಂತೆ ಅಗತ್ಯವಿರುವ ಕಡೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.

ಕುಂಬಾರಪೇಟೆ, ತಳವಾರಗೇರಾ, ತಿಂಥಣಿ, ದಖನಿ ಮೊಹಲ್ಲಾ ಸೇರಿ ಅಗತ್ಯ ಕಡೆಗಳಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಲಾಗುವುದು. ಆಲೈ ಆಡುವ ಸಂದರ್ಭದಲ್ಲಿ ಕಾಲು ತುಳಿದರು, ಸ್ಪರ್ಶಿಸಿದರೂ ಎಂಬುದನ್ನೇ ನೆಪ ಮಾಡಿಕೊಂಡು ಕಲಹಕ್ಕೆ ನಾಂದಿ ಹಾಡಬಾರದು. ದೇವರ ಸವಾರಿ ಸಂದರ್ಭದಲ್ಲಿ ಒಂದು ದೇವರ ಸವಾರಿ ನಂತರ ಮತ್ತೊಂದು ದೇವರ ಸವಾರಿಗೆ ಅವಕಾಶ ಮಾಡಿಕೊಡಲಾಗುವುದು. ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ದೇವರ ದಫನ್ ನೆರವೇರಲಿದೆ ಎಂದು ತಿಳಿಸಿದರು.

ಪಿಎಸ್‌ಐಗಳಾದ ಹಣಮಂತಪ್ಪ ಸಿದ್ದಾಪುರ, ಸಿದ್ದಣ್ಣ ಯಡ್ರಾಮಿ, ಮುಖಂಡರಾದ ಶಿವಲಿಂಗ ಹಸನಾಪುರ, ಮಾಳಪ್ಪ ಕಿರದಹಳ್ಳಿ, ಉಸ್ತಾದ್ ವಜಾಹತ್ ಹುಸೇನ್, ದಾನಪ್ಪ ಕಡಿಮನಿ, ಮುಬೀನ್ ದಖನಿ, ಖಾಜಾ ಅಜ್ಮೀರ್ ಸೇರಿದಂತೆ ಇತರರು ಸಲಹೆ ನೀಡಿದರು.

ಸಭೆಯಲ್ಲಿ ರಾಮಣ್ಣ ಶೆಳ್ಳಗಿ, ಅಯ್ಯಪ್ಪ, ಧರ್ಮಣ್ಣ, ಬಸವರಾಜ ದೊಡ್ಮನಿ, ಮಹೇಶ ಯಾದಗಿರಿ, ತಿಪ್ಪಣ್ಣ ಹೂಗಾರ, ಮಲ್ಲಪ್ಪ ಶೆಳ್ಳಗಿ, ಮೊನಪ್ಪ, ತಿಪ್ಪಣ್ಣ ಶೆಳ್ಳಗಿ, ಭೀಮರಾಯ ಮಂಗಳೂರ, ಶೇಖರ ಮಂಗಳೂರ, ರಾಜು ಬಡಿಗೇರ, ಶಾಂತಪ್ಪ ತಳವಾರಗೇರ, ಶರಣು ತಳವಾರಗೇರ, ಅಂಬಾಜಿ, ಅಭಿಷೇಕ, ಅಕ್ಷಯಕುಮಾರ, ಮೌನೇಶ ಸೇರಿದಂತೆ ಇತರರಿದ್ದರು.