ಶಾಂತಿಯುತವಾಗಿ ಮೋಹರಂ ಆಚರಿಸಿ: ಐ.ಎಂ. ಮಠಪತಿ

| Published : Jul 14 2024, 01:32 AM IST

ಸಾರಾಂಶ

ಹಿಂದು-ಮುಸ್ಲಿಂ ಸೌಹಾರ್ದತೆಗೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು. ಸೌಂಡ್ ಸಿಸ್ಟಂ ಬ್ಯಾನ್ ಮಾಡಲಾಗಿದೆ. ವಾದ್ಯ ಮೇಳ ಬಳಿಸಿ ಹಬ್ಬ ಆಚರಿಸಬೇಕು ಎಂದು ಮುರಗೋಡ ಠಾಣೆ ಸಿಪಿಐ ಐ.ಎಂ. ಮಠಪತಿ ಹೇಳಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಹಿಂದು-ಮುಸ್ಲಿಂ ಸೌಹಾರ್ದತೆಗೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು. ಸೌಂಡ್ ಸಿಸ್ಟಂ ಬ್ಯಾನ್ ಮಾಡಲಾಗಿದೆ. ವಾದ್ಯ ಮೇಳ ಬಳಿಸಿ ಹಬ್ಬ ಆಚರಿಸಬೇಕು ಎಂದು ಮುರಗೋಡ ಠಾಣೆ ಸಿಪಿಐ ಐ.ಎಂ. ಮಠಪತಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಶಾಂತಿ ಸಭೆಯಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿವೆ. ಎಲ್ಲರೂ ಸೇರಿ ಸಮಸ್ಯೆಯಾಗದಂತೆ ಹಬ್ಬ ಆಚರಿಸಬೇಕು ಎಂದರು.

ಪಿಎಸ್‌ಐ ಚಾಂದಬಿ ಗಂಗಾವತಿ ಮಾತನಾಡಿ, ಏನೇ ಸಮಸ್ಯೆಯಾದರೂ ಸಮಿತಿ ಸದಸ್ಯರೇ ನೇರ ಹೊಣೆ. ತಂಟೆ ತಕರಾರು ಮಾಡದೆ ಹಬ್ಬ ಆಚರಿಸಬೇಕು ಎಂದು ತಿಳಿಸಿದರು.

ಸದಾನಂದ ಹಣಬರ, ನೀಲಪ್ಪ ಬಾರ್ಕಿ, ಭಾಸ್ಕರ ಹಿರೇಮೆತ್ರಿ, ಇಮಾಮಸಾಬ ಹಳಬರ, ಬಾಬು ಚನ್ನಮೇತ್ರಿ, ವಿಶಾಲಗೌಡ ಪಾಟೀಲ, ಎಸ್.ಎಸ್. ಕುರುಬಗಟ್ಟಿಮಠ, ಸಲೀಂ ಜಮಾದಾರ, ಸುರೇಶ ಭಜಂತ್ರಿ, ಫಿರೋಜ್ ಖಾದ್ರಿ, ಶಿವಾನಂದ ಕರಿಗೋಣವರ, ಹನುಮಂತ ಕಡಕೋಳ, ಮುದ್ದಪ್ಪ ಪೂಜೇರ, ಮಹಾದೇವ ಯಂಡ್ರಾವಿ, ಮುರಾರಿ ತೇಣಗಿ, ಶಾಸನಾಯ್ಕ ಪಾಟೀಲ, ಸೋಮನಿಂಗ ಬೆಳವಡಿ, ವಿಠ್ಠಲ ಆಲದಕಟ್ಟಿ ಸೇರಿದಂತೆ ಪೊಲೀಸ್ ಸಿಬ್ಬಂದಿಯಾದ ಎಎಸ್‌ಐ ಡಬ್ಲು.ಎಚ್. ಯಾದವಾಡ, ವೈ.ಎಂ. ಕಡಕೋಳ, ಎಚ್.ಆರ್. ನ್ಯಾಮಗೌಡರ, ಎಸ್.ಬಿ. ದೊಡ್ಡವಾಡ ಇದ್ದರು.