ಹಿಂದೂ ಮುಸ್ಲಿಮರ ಭಾವೈಕ್ಯತೆ ಹಾಗೂ ಸೌಹಾರ್ದದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದು ಮುಂಡರಗಿ ಪೊಲೀಸ್ ಠಾಣೆಯ ಸಿಪಿಐ ಅಯ್ಯನಗೌಡ್ರ ಪಾಟೀಲ ಹೇಳಿದರು.
ಡಂಬಳ: ಹಿಂದೂ-ಮುಸ್ಲಿಮರ ಭಾವೈಕ್ಯತೆ ಹಾಗೂ ಸೌಹಾರ್ದದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದು ಮುಂಡರಗಿ ಪೊಲೀಸ್ ಠಾಣೆಯ ಸಿಪಿಐ ಅಯ್ಯನಗೌಡ್ರ ಪಾಟೀಲ ಹೇಳಿದರು.
ಡಂಬಳ ಗ್ರಾಮದ ಪೊಲೀಸ್ ಹೊರ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು.ಹಬ್ಬಗಳು ಸಮಾಜದಲ್ಲಿ ಸೌಹಾರ್ದ ಮತ್ತು ಸಹಬಾಳ್ವೆಯನ್ನು ಬಲಪಡಿಸುವ ಮಾಧ್ಯಮಗಳಾಗಿವೆ. ಪ್ರತಿವರ್ಷದಂತೆ ಈ ಬಾರಿಯೂ ಮೊಹರಂ ಅನ್ನು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.ಸಭೆಯಲ್ಲಿ ಮೊಹರಂ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಶಾಂತಿಯುತ ಹಾಗೂ ಸುವ್ಯವಸ್ಥಿತ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯನ್ನು ಗ್ರಾಮಸ್ಥರು ನೀಡಿದರು.
ಈ ಸಂದರ್ಭದಲ್ಲಿ ಸಿದ್ದಪ್ಪ ಭಂಡಾರಿ, ಶಿವಾನಂದ ಬಂಡಿ, ರಜಾಕಸಾಬ, ರಾಜೇಸಾಬ ಹಿರೇಮನಿ, ಆರ್. ಆಲೂರ, ರಜಾಸಾಬ ಹುಬ್ಬಳ್ಳಿ, ಸಿದ್ದಪ್ಪ ಹೊಂಬಳ, ಮಳ್ಳಪ್ಪ ಕರಿಗಾರ, ಸೋಮಲಿಂಗಪ್ಪ ತಳಗೇರಿ, ಲಕ್ಷ್ಮಣ ಬೇಟಗೇರಿ, ಕೆ.ಎಂ. ಮಠದ, ಮಹೇಶ ಗುಡ್ಡದ, ಎಸ್.ಐ. ಮಠದ, ಮೆಹೆಬೂಬಲಿ ಮೂಲಿಮನಿ, ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಎಸ್.ಎಸ್. ಕಂಚಗಾರ, ಪೊಲೀಸರಾದ ಬಾಬಾಜಾನ ಕಮ್ಮಾರ, ನಾಗರಾಜ ಪೂಜಾರ ಗ್ರಾಮದ ಹಿರಿಯರು, ಯುವಕರು, ಪೊಲೀಸ್ ಸಿಬ್ಬಂದಿ ಇದ್ದರು.ಮೊಹರಂ ಹಬ್ಬ ಸೌಹಾರ್ದತೆಯಿಂದ ಆಚರಿಸಿ
ಮುಳಗುಂದ: ಹಿಂದೂ, ಮುಸ್ಲಿಂ ಸಮಾಜ ಬಾಂಧವರು ಎಲ್ಲರೂ ಒಂದಾಗಿ ಸೌಹಾರ್ದದಿಂದ ಮೊಹರಂ ಹಬ್ಬವನ್ನು ಆಚರಿಸೋಣ ಎಂದು ಸಿಪಿಐ ಬಿ.ಜಿ. ಸುಬ್ಬಾಪುರಮಠ ತಿಳಿಸಿದರು.ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಕುರಿತು ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಾತಿ, ಭೇದ-ಭಾವ ಮರೆತು ಎಲ್ಲರೂ ಒಂದೇ ಎಂಬ ಮನೋಭಾವನೆಯಿಂದ ಮುಂಬರುವ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸೋಣ ಎಂದರು.ಹಾಗೇ ಮೊಹರಂ ಹಬ್ಬದ ಕೊನೆ ದಿನ ಕೋಲಾಟ, ಹೆಜ್ಜೆ ಮೇಳಗಳು ಸ್ಪರ್ಧೆಗೆ ಇಳಿಯಿದೇ ಪರಸ್ಪರ ಸಹಕಾರ ಮನೋಭಾವದಿಂದ ಹಬ್ಬದಲ್ಲಿ ಭಾಗವಹಿಸಿ, ಯಾವುದೇ ಗಲಾಟೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಜತೆ ಸಹಕರಿಸಬೇಕು. ಪಟ್ಟಣದ ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಅಂದಾಗ ಗಲಾಟೆಗಳು ನಡೆಯದಂತೆ ನಿಯಂತ್ರಣ ಮಾಡಲು ಅನುಕೂಲಕರವಾಗುತ್ತದೆ ಎಂದು ಮನವಿ ಮಾಡಿದರು.ಈ ವೇಳೆ ರೈತ ಸಂಘದ ದೇವಪ್ಪ ಅಣ್ಣಿಗೇರಿ, ಶಂಕ್ರಯ್ಯ ಹಿರೇಮಠ, ಮುಸ್ಲಿಂ ಸಮಾಜದ ಧರ್ಮ ಗುರು ಖಾಜಿ, ತಾಜುದ್ದೀನ್ ಕಿಂಡ್ರಿ, ಎಎಸ್ಐ ಈಶ್ವರ ಸಾದರ, ಹುಸೇನಷಾ ಮಕಾಂದರ, ಶೇಖ ಸೇರಿದಂತೆ ಚಿಂಚಲಿ, ಕಲ್ಲೂರ, ನೀಲಗುಂದ, ಶೀತಾಲಹರಿ ಗ್ರಾಮಗಳ ಗುರು-ಹಿರಿಯರು, ಯುವಕರು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.