ಸಾರಾಂಶ
ರಂಜಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ದಿಸೆಯಲ್ಲಿ ಮುಖಂಡರು ಮುನ್ನಚ್ಚರಿಕೆ ವಹಿಸಬೇಕು. ತಾವೂ ನೀಡಿರುವ ಸಲಹೆಗಳನ್ನು ಸಹ ಗಂಭೀರವಾಗಿ ಪರಿಗಣಿಸಲಾಗುವುದು. ಕೊಪ್ಪಳ ನಗರ ಹಾಗೂ ಜಿಲ್ಲೆ ಶಾಂತಿಗೆ ಹೆಸರಾಗಿದೆ. ಅದಕ್ಕೆ ಎಲ್ಲರೂ ಬದ್ಧವಾಗಿರಬೇಕು. ಕಿಡಿಗೇಡಿಗಳು ಮಾಡುವ ಕುತಂತ್ರಕ್ಕೆ ಸಮಾಜದ ಶಾಂತಿ ಕೆಡುವುದು ಬೇಡ.
ಕೊಪ್ಪಳ:
ಪವಿತ್ರ ರಂಜಾನ್ ಹಬ್ಬವನ್ನು ಶಾಂತಿ ಮತ್ತು ಸೌರ್ಹಾದತೆಯಿಂದ ಆಚರಿಸುವಂತೆ ಡಿವೈಎಸ್ಪಿ ಮುತ್ತಣ್ಣ ಸರ್ವಗೋಳ ಕರೆ ನೀಡಿದ್ದಾರೆ.ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ರಂಜಾನ್ ಹಿನ್ನಲೆಯಲ್ಲಿ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಸಾಮಾಜಿಕ ಜಾಲತಾಣಗಳಲ್ಲಿ ಜಗತ್ತಿನ ಸುಳ್ಳು ವದಂತಿಗಳು, ಕ್ರಿಯೆಟಿವ್ ಪೋಸ್ಟರ್ ಹರಿಬಿಡಲಾಗುತ್ತದೆ. ಹೀಗಾಗಿ, ಇವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವದಂತಿಗಳಿಗೆ ಕಿವಿಗೊಡದೆ, ಬಂದಿರುವ ಸಂದೇಶಗಳ ಕುರಿತು ನಿಗಾವಹಿಸಬೇಕು. ಅಂತ ಅಚಾತುರ್ಯದ ಸಂದೇಶಗಳು ಇದ್ದರೇ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಆಗ ಅವುಗಳ ಮೇಲೆ ನಾವು ಕ್ರಮವಹಿಸಲು ಅನುಕೂಲವಾಗುತ್ತದೆ ಎಂದರು.
ರಂಜಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ದಿಸೆಯಲ್ಲಿ ಮುಖಂಡರು ಮುನ್ನಚ್ಚರಿಕೆ ವಹಿಸಬೇಕು. ತಾವೂ ನೀಡಿರುವ ಸಲಹೆಗಳನ್ನು ಸಹ ಗಂಭೀರವಾಗಿ ಪರಿಗಣಿಸಲಾಗುವುದು. ಕೊಪ್ಪಳ ನಗರ ಹಾಗೂ ಜಿಲ್ಲೆ ಶಾಂತಿಗೆ ಹೆಸರಾಗಿದೆ. ಅದಕ್ಕೆ ಎಲ್ಲರೂ ಬದ್ಧವಾಗಿರಬೇಕು. ಕಿಡಿಗೇಡಿಗಳು ಮಾಡುವ ಕುತಂತ್ರಕ್ಕೆ ಸಮಾಜದ ಶಾಂತಿ ಕೆಡುವುದು ಬೇಡ. ಹೀಗಾಗಿ, ನಾವು ನಿಗಾ ಇಡುತ್ತೇವೆ ಮತ್ತು ನೀವು ಸಹ ಇಂಥವುಗಳ ಬಗ್ಗೆ ಜಾಗೃತಿ ಇರಬೇಕು ಎಂದರು.ನಗರ ಠಾಣೆಯ ಪಿಐ ಜಯಪ್ರಕಾಶ, ಮುಖಂಡರಾದ ಕಾಟನ್ ಪಾಷಾ, ಬಾಷುಸಾಬ್ ಕತಿಬ, ವಕೀಲ ಪೀರಾ ಹುಸೇನ್ ಹೊಸಳ್ಳಿ, ಯಮನೂರಪ್ಪ ನಾಯಕ ಸೇರಿದಂತೆ ಅನೇಕರು ಇದ್ದರು.