ಸಾರಾಂಶ
ಯಾವುದೇ ಕಾರಣಕ್ಕೂ ಪರೀಕ್ಷೆಗೆ ಹೆದರದೇ ಎದುರಿಸಬೇಕು. ಆಗ ನಿರೀಕ್ಷೆಗಿಂತ ಹೆಚ್ಚಿನ ಅಂಕಗಳನ್ನು ಪಡೆಯಬಹುದು ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಕುಷ್ಟಗಿ: ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಂಭ್ರಮದಂತೆ ಆಚರಣೆ ಮಾಡಬೇಕು. ಆಗ ಮಾತ್ರ ನಿಮ್ಮ ನಿರೀಕ್ಷೆಗಳಿಗಿಂತ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯ ಎಂದು ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.
ತಾಲೂಕಿನ ತಾವರಗೇರಾ ಪಟ್ಟಣದ ಶಶಿಧರಸ್ವಾಮಿ ವಿದ್ಯಾನಿಕೇತನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಪರೀಕ್ಷಾ ಸಂಭ್ರಮ ಮತ್ತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಯಾವುದೇ ಕಾರಣಕ್ಕೂ ಪರೀಕ್ಷೆಗೆ ಹೆದರದೇ ಎದುರಿಸಬೇಕು. ಆಗ ನಿರೀಕ್ಷೆಗಿಂತ ಹೆಚ್ಚಿನ ಅಂಕಗಳನ್ನು ಪಡೆಯಬಹುದು ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.ಕೇವಲ ಪರೀಕ್ಷೆಗಾಗಿ ಓದುವುದು ಹವ್ಯಾಸ ಒಳ್ಳೆಯದಲ್ಲ. ಕಲಿಕೆ ಎನ್ನುವುದು ನಿರಂತರವಾಗಿರಬೇಕು. ಜೀವನದಲ್ಲಿ ಎದುರಾಗುವ ಸಮಸ್ಯೆ ಸವಾಲುಗಳನ್ನು ಹೆದುರಿಸುವಂತ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಶಿಕ್ಷಣ ಕೊಡಬೇಕಿದೆ. ಪ್ರಶ್ನೆಗಳನ್ನು ಕೇಳುವ ಜಾಗೃತಿ ಮೂಡಿಸಿಕೊಂಡು ನಿಮ್ಮ ಮನಸ್ಸಿನಲ್ಲಿರುವ ಸಂದೇಹಗಳನ್ನು ಪರಿಹರಿಸಿಕೊಳ್ಳಿ. ಸಂಕೋಚ ಪಟ್ಟುಕೊಂಡು ಸುಮ್ಮನೆ ಕುಳಿತರೆ ನಿಮಗೆ ನೀವೆ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ ಎಂದರು.ದೊಡ್ಡ ಸಂಶೋಧನೆಗಳು ಹುಟ್ಟಿಕೊಂಡಿದ್ದೇ ಪ್ರಶ್ನೆಗಳಿಂದ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು ಎಂದು ಹೇಳಿದರು.ಎಸೆಸೆಲ್ಸಿ ಮಕ್ಕಳಿಗೆ ಅಣಕು ಪರೀಕ್ಷೆ ನಡೆಸುವ ಮೂಲಕ ಪರೀಕ್ಷೆ ಕುರಿತು ಆತ್ಮವಿಶ್ವಾಸ ಮೂಡಿಸುವ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಪ್ರಭಾಕರ ಆವರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ನಂತರ ಬಿಇಒ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ, ಪ್ರಶ್ನೆ ಪತ್ರಿಕೆಗಳ ಕುರಿತು ಸಂವಾದ ನಡೆಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಜಗದೀಶಪ್ಪ, ಪ್ರಾಚಾರ್ಯ ಆರ್.ಜೆ. ಅಂಬಿಗೇರ, ಸಿದ್ದಲಿಂಗಯ್ಯ ಹಿರೇಮಠ, ಮೆಣೇದಾಳ ಪ್ರೌಢಶಾಲೆಯ ಮುಖ್ಯಶಿಕ್ಷಕಿ ನಿಂಬಮ್ಮ ತುಂಬದ, ಸಂಗನಾಳ ಶಾಲೆಯ ಮುಖ್ಯಶಿಕ್ಷಕ ಮಲ್ಲಪ್ಪ ಓಲಿ, ಆಡಳಿತಾಧಿಕಾರಿ ಬಸನಗೌಡ ಪಾಟೀಲ, ಪಂಪಾಪತಿ ಸಾಸ್ವಿಹಾಳ, ಎನ್.ವೈ. ಬಿಳೆಗುಡ್ಡ ಇದ್ದರು.