ಗೋಕರ್ಣದಲ್ಲಿ ಕರ್ಣಾಟಕ ಬ್ಯಾಂಕ್‌ನ ೧೦೧ ವರ್ಷಾಚರಣೆ ಆಚರಣೆ

| Published : Feb 20 2025, 12:47 AM IST

ಗೋಕರ್ಣದಲ್ಲಿ ಕರ್ಣಾಟಕ ಬ್ಯಾಂಕ್‌ನ ೧೦೧ ವರ್ಷಾಚರಣೆ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ಣಾಟಕ ಬ್ಯಾಂಕ್ ೧೦೧ನೇ ವರ್ಷಾಚರಣೆಯನ್ನು ಗೋಕರ್ಣ ಶಾಖೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಇದಕ್ಕೂ ಮೊದಲು ಅಪೋಲೋ ವ್ಯದ್ಯಕೀಯ ಸಂಸ್ಥೆಯ ಸಹಯೋಗದಲ್ಲಿ ಗ್ರಾಹಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಗೋಕರ್ಣ: ಕರ್ಣಾಟಕ ಬ್ಯಾಂಕ್ ೧೦೧ನೇ ವರ್ಷಾಚರಣೆಯನ್ನು ಇಲ್ಲಿನ ಶಾಖೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅಥಿಯಾಗಿ ಆಗಮಿಸಿದ ವಿಷ್ಣುಗುಪ್ತ ವಿಶ್ವವಿದ್ಯಾ ಪೀಠದ ಆಡಳಿತಾಧಿಕಾರಿ ಡಾ. ಪ್ರಸನ್ನಕುಮಾರ ಉದ್ಘಾಟಿಸಿದರು. ಬಳಿಕ ಮತನಾಡಿದ ಅವರು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಶತಮಾನ ದಾಟಿರುವ ಬ್ಯಾಂಕ್ ಕಾರ್ಯವನ್ನು ಪ್ರಶಂಸಿಸಿ, ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ತಾಪಂ ಮಾಜಿ ಸದಸ್ಯ ಮಹೇಶ ಶಟ್ಟಿ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಕಟ್ಟಿ ಬೆಳೆಸಿದ ಬ್ಯಾಂಕ್ ಹಲವಾರು ವಿಲೀನಗೊಂಡು ಮೂಲ ಹೆಸರು ಕಳೆದುಕೊಂಡಿದೆ. ಆದರೆ ರಾಜ್ಯದ ಹೆಸರನ್ನು ದೇಶದೆಲ್ಲೆಡೆ ಗುರುತಿಸುವಂತೆ ಮಾಡಿರುವ ಕರ್ಣಾಟಕ ಬ್ಯಾಂಕ್ ಹೆಚ್ಚಿನ ಸೌಲಭ್ಯ ಹಾಗೂ ಇನ್ನಷ್ಟು ಉತ್ತಮ ಸೇವೆ ನೀಡುವ ಮೂಲಕ ಬ್ಯಾಂಕ್ ಸೇವೆಯಲ್ಲಿ ಮೊದಲ ಸ್ಥಾನ ದೊರೆಯಲಿ ಎಂದು ಆಶಿಸಿದರು.

ಶಾಖಾ ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ, ಗ್ರಾಪಂ ಸದಸ್ಯ ರಮೇಶ ಪ್ರಸಾದ, ಪ್ರಭಾಕರ ಪ್ರಸಾದ, ಸತೀಶ ಭಟ್ಟ, ಭೂಷಣ ಗೌಡ, ನಾರಾಯಣ ತಾಂಡೇಲ, ಬ್ಯಾಂಕಿನ ಪ್ರದೀಪ ನಾಯ್ಕ, ನಿಖಿಲ್ ಮಹಾಲೆ, ಬಂಗಾರ ಪರೀಕ್ಷಕಿ ವಿದ್ಯಾ ಜನ್ನು ಉಪಸ್ಥಿತರಿದ್ದರು. ರವೀಂದ್ರ ಮಂಜರಬಲ್ಲಿ ಸ್ವಾಗತಿಸಿದರು. ಸಹಾಯಕ ವ್ಯವಸ್ಥಾಪಕ ಚೇತನ್ ಬಿ.ಜಿ. ವಂದಿಸಿದರು. ಯೋಗರಾಜ ಭಟ್, ಸಂಪತ್ ಕೃಷ್ಣ, ನರಸಿಂಹ ಹೊಳ್ಳ, ಸುಕ್ರಿ ಗೌಡ ಮತ್ತಿತರರು ನಿರ್ವಹಿಸಿದರು. ಗ್ರಾಹಕರು, ಬ್ಯಾಂಕ್ ಸಿಬ್ಬಂದಿ ಪಾಲ್ಗೊಂಡಿದ್ದರು. ಬಂದ ಎಲ್ಲ ಗಣ್ಯರು ಹಣತೆ ಬೆಳಗಿದ್ದು ವಿಶೇಷವಾಗಿತ್ತು.

ಇದಕ್ಕೂ ಮೊದಲು ಅಪೋಲೋ ವ್ಯದ್ಯಕೀಯ ಸಂಸ್ಥೆಯ ಸಹಯೋಗದಲ್ಲಿ ಗ್ರಾಹಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ನೂರಕ್ಕೂ ಹೆಚ್ಚು ಗ್ರಾಹಕರು ತಪಾಸಣೆಗೆ ಒಳಪಟ್ಟು ಸೂಕ್ತ ಸಲಹೆ, ಸೂಚನೆ ಪಡೆದರು.