ಅಂಬಾ ಪ್ರಸಾದ್ ಪಾತಾಳ 60 ರ ಸಂಭ್ರಮ

| Published : May 16 2024, 12:48 AM IST

ಸಾರಾಂಶ

ಶ್ರೀಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ನಂದಾವರ ಉಮೇಶ ಶೆಣೈ ಹಾಗೂ ಗುರಿಕಾರ ಸತ್ಯನಾರಾಯಣ ಭಟ್, ನಿವೃತ್ತ ಮುಖ್ಯ ಗುರುಗಳಾದ ಸುಬ್ರಹ್ಮಣ್ಯ ರಾವ್ ಅವರನ್ನು ಅಂಬಾ ಪ್ರಸಾದ್ ಪಾತಾಳ ಅವರು ಗೌರವಿಸಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಕಲೆ, ಸಾಹಿತ್ಯ, ಪ್ರತಿಭೆಗಳು ಅರ್ಪಣಾ ಮನೋಭಾವದಿಂದ ಸಮಾಜದ ಹಿತ ಕಾಪಾಡುವುದರಿಂದ ಸಮಾಜಕ್ಕೆ ಕೊಡುಗೆ ಸಲ್ಲಿಸಿದಂತಾಗುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಹವ್ಯಾಸಿ ಯಕ್ಷಗಾನ ಕಲಾವಿದ ದಿವಾಕರ ಆಚಾರ್ಯ ಹೇಳಿದರು.

ಅವರು ಯಕ್ಷಗಾನ ಸ್ತ್ರೀ ವೇಷಧಾರಿ ಅಂಬಾ ಪ್ರಸಾದ್ ಪಾತಾಳ ಅವರ 60 ರ ಸಂಭ್ರಮ ಅಭಿನಂದನಾ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಅಂಬಾ ಪ್ರಸಾದ ಅವರು ತೆಂಕು ಮತ್ತು ಬಡಗು ತಿಟ್ಟು ಯಕ್ಷಗಾನಗಳಲ್ಲಿ 47 ವರ್ಷಗಳ ಸುದೀರ್ಘ ತಿರುಗಾಟ ಯಕ್ಷಗಾನದಲ್ಲಿ ಅಪೂರ್ವ ಸ್ತ್ರೀವೇಷ ಪಾತ್ರಧಾರಿಯಾಗಿ ಯಕ್ಷಪ್ರಿಯರನ್ನು ಸಂತೃಪ್ತಿಗೊಳಿಸುವ ಕಲೆ ಹೊಂದಿರುತ್ತಾರೆ ಎಂದು ಬಣ್ಣಿಸಿದರು.ಇದೇ ವೇಳೆ ಶ್ರೀಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ನಂದಾವರ ಉಮೇಶ ಶೆಣೈ ಹಾಗೂ ಗುರಿಕಾರ ಸತ್ಯನಾರಾಯಣ ಭಟ್, ನಿವೃತ್ತ ಮುಖ್ಯ ಗುರುಗಳಾದ ಸುಬ್ರಹ್ಮಣ್ಯ ರಾವ್ ಅವರನ್ನು ಅಂಬಾ ಪ್ರಸಾದ್ ಪಾತಾಳ ಅವರು ಗೌರವಿಸಿದರು.ಆರಂಭದಲ್ಲಿ ಶಾಂಭವಿ ವಿಲಾಸ ತಾಳಮದ್ದಳೆಯನ್ನು ನಿವೃತ್ತ ಉಪನ್ಯಾಸಕ ಮಹಾಲಿಂಗೇಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಹಿರಿಯ ಕಲಾವಿದ ವೆಂಕಟರಮಣ ಭಟ್ ಭಾಗವತರಾಗಿ ವಿಘ್ನೇಶ್ವರ ಭಟ್ ನೂಜಿ, ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ, ಪದ್ಮನಾಭ ಕುಲಾಲ್, ಹಿಮ್ಮೇಳದಲ್ಲಿ ಅಚ್ಚುತ ಪಾಂಗಣ್ಣಾಯ, ಚಂದ್ರಶೇಖರ ಆಚಾರ್ಯ, ಶ್ರೀಪತಿ ಭಟ್, ರಮೇಶ ಕಜೆ, ಸತೀಶ ಆಚಾರ್ಯ ಮಾಣಿ, ಜಯರಾಮ ನಾಲ್ಗುತ್ತು, ಸಂಜೀವ ಪಾರಂಕಿ ಭಾಗವಹಿಸಿದ್ದರು. ಸಂಘದ ಕಾರ‍್ಯದರ್ಶಿ ಶ್ರೀಪತಿ ಭಟ್ ಸ್ವಾಗತಿಸಿದರು. ಕೆ. ಶ್ರೀಧರ್ ಭಟ್ ವಂದಿಸಿದರು. ಗುಡ್ಕಪ್ಪ ಬಲ್ಯ ಕಾರ‍್ಯಕ್ರಮ ನಿರೂಪಿಸಿದರು.