ಸಾರಾಂಶ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರ್ಯಾವರಣ್ ಗತಿವಿಧಿಯ ರಾಜ್ಯ ಸಂಯೋಜಕ ಜಯರಾಮ್ ಬೊಳ್ಳಾಜೆ ಮಾತನಾಡಿ, ಅಷ್ಟಾವಕ್ರನು ತನ್ನ 8 ರೀತಿಯ ವೈಕಲ್ಯತೆಯನ್ನು ಮೀರಿ ಜ್ಞಾನಿಯೂ, ದಾರ್ಶನಿಕನಾಗಿಯೂ ಬೆಳೆದ ರೀತಿ ದಿವ್ಯಾಂಗರಿಗೆ ಮಾತ್ರವಲ್ಲ, ಸಮಸ್ತ ಸಮಾಜಕ್ಕೆ ಆದರ್ಶ ಎಂದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ಅಷ್ಟಾವಕ್ರ ದಿನಾಚರಣೆ, ಸೆರೆಬ್ರಲ್ ಪಾಲ್ಸಿ ಹಾಗೂ ವಿಶ್ವ ಮಾನಸಿಕ ಸ್ವಾಸ್ಥ್ಯ ದಿನಾಚರಣೆಗಳು ದೇರೆಬೈಲ್ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ಬಡಾವಣೆಯ ಸಿದ್ಧಿಯಲ್ಲಿ ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಕೆಐಒಸಿಎಲ್ ಸಂಸ್ಥೆಯ ನಿವೃತ್ತ ಹಣಕಾಸು ನಿರ್ದೇಶಕ ಸಿ.ಎ. ಗೋಪಾಲಕೃಷ್ಣ ಭಟ್ ಉದ್ಘಾಟಿಸಿದರು.
ಮುಖ್ಯ ಅತಿಥಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರ್ಯಾವರಣ್ ಗತಿವಿಧಿಯ ರಾಜ್ಯ ಸಂಯೋಜಕ ಜಯರಾಮ್ ಬೊಳ್ಳಾಜೆ ಮಾತನಾಡಿ, ಅಷ್ಟಾವಕ್ರನು ತನ್ನ 8 ರೀತಿಯ ವೈಕಲ್ಯತೆಯನ್ನು ಮೀರಿ ಜ್ಞಾನಿಯೂ, ದಾರ್ಶನಿಕನಾಗಿಯೂ ಬೆಳೆದ ರೀತಿ ದಿವ್ಯಾಂಗರಿಗೆ ಮಾತ್ರವಲ್ಲ, ಸಮಸ್ತ ಸಮಾಜಕ್ಕೆ ಆದರ್ಶ ಎಂದರು.ಇನ್ನೋರ್ವ ಮುಖ್ಯ ಅತಿಥಿ ಡಾ. ಅನಿಲ್ ಕಾಕುಂಜೆ ಮಾತಪನಾಡಿ, ಸೆರಬ್ರಲ್ ಪಾಲ್ಸಿ ಬಾಧಿತರಲ್ಲಿ ಹೆಚ್ಚಿನವರ ದೇಹದಲ್ಲಿ ಊನತೆಯಿದ್ದರೂ ಮಾನಸಿಕವಾಗಿ ಸದೃಢರಾಗಿರುತ್ತಾರೆ. ಜನರಲ್ಲಿ ಮಾನಸಿಕ ಅಸ್ವಸ್ಥತೆ ಬಗ್ಗೆ ಹಾಗೂ ಮಾನಸಿಕ ಚಿಕಿತ್ಸೆ ಪಡೆದುಕೊಳ್ಳುವ ಬಗ್ಗೆ ಕೀಳರಿಮೆಯಿದೆ. ಇದು ಮಾನಸಿಕ ಅಸ್ವಸ್ಥತೆ ಚಿಕಿತ್ಸೆಯ ವಿಚಾರದಲ್ಲಿ ದೊಡ್ಡ ತೊಡಕಾಗಿದೆ ಎಂದರು.
ಸಕ್ಷಮ ದಕ್ಷಿಣ ಕನ್ನಡ ಘಟಕ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ, ದಿವ್ಯಾಂಗತೆಯನ್ನು ಮೀರಿ ಬಹುಮುಖ ಸಾಧನೆ ಮಾಡಿರುವ ಅಜಯ್ ಪಿ. ರಾವ್ ಅವರನ್ನು ಸಕ್ಷಮ ವತಿಯಿಂದ ಗೌರವಿಸಲಾಯಿತು. ಮಂಗಳೂರಿನ ಎಂಆರ್‌ಡಬ್ಲ್ಯೂ ಜಯಪ್ರಕಾಶ್ ಇದ್ದರು.ಸಕ್ಷಮ ದ.ಕ. ಜಿಲ್ಲಾ ಉಪಾಧ್ಯಕ್ಷ ಗಣೇಶ್ ಭಟ್ ವಾರಣಾಸಿ ಸ್ವಾಗತಿಸಿ, ನಿರೂಪಿಸಿದರು. ಸಕ್ಷಮ ಸದಸ್ಯೆ ಗೀತಾ ಲಕ್ಷ್ಮೀಶ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಕ್ಷಮ ಖಜಾಂಚಿ ಸುರೇಶ್ ರಾವ್ ಸಕ್ಷಮ ಗೀತೆ ಹಾಡಿದರು. ಸಕ್ಷಮ ಕಾರ್ಯದರ್ಶಿ ಹರೀಶ್ ಪ್ರಭು ವಂದಿಸಿದರು.ಫೋಟೊ
4ಮೆಂಟಲ್