ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನೂರಾರು ಗಿಡಗಳನ್ನು ನೆಡಲಾಯಿತು.ನಗರದ ಕೆ.ಸಿ. ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ವಿವಿಧ ತಳಿಯ ಬೇವು, ಹೊಂಗೆ ಮಾವು ಇನ್ನಿತರ ಗಿಡಗಳನ್ನು ನೆಡಲಾಯಿತು.
ಈ ವೇಳೆ ಹಿಂದುಳಿದ ವರ್ಗಗಳ ಮೊರ್ಚಾದ ರಾಜ್ಯಾಧ್ಯಕ್ಷ ಆರ್. ರಘು ಮಾತನಾಡಿ, ಬಿ.ವೈ. ವಿಜಯೇಂದ್ರ ಅವರ ಸಾಮಾಜಿಕ ಕಳಕಳಿ ಇರುವುದರಿಂದ ಪರಿಸರ ಉಳಿಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆ ಸಂದೇಶ ಕೊಡುವ ನಿಟ್ಟಿನಲ್ಲಿ ಯಾವುದೇ ರೀತಿಯ ಆಡಂಬರವಿಲ್ಲದೆ ಗಿಡಗಳನ್ನು ನೆಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದೇ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸುಮಾರು 60 ಸಾವಿರ ಗಿಡಗಳನ್ನು ನಡೆಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ನಗರ ಪಾಲಿಕೆ ಮಾಜಿ ಸದಸ್ಯರಾದ ಛಾಯಾದೇವಿ, ಕೆ.ಜೆ. ರಮೇಶ್, ಹಿಂದುಳಿದ ವರ್ಗಗಳ ಮೋರ್ಚಾದ ನಗರಾಧ್ಯಕ್ಷ ಮೈ.ಪು. ರಾಜೇಶ್, ಕೆ.ಆರ್. ಕ್ಷೇತ್ರದ ಅಧ್ಯಕ್ಷ ರಘು ಅರಸ್, ಮುಖಂಡರಾದ ಹರೀಶ್, ಗಿರಿಧರ್, ಜೋಗಿ ಮಂಜು, ಬಾಬಣ್ಣ ಪ್ರಸನ್ನ, ಉಪೇಂದ್ರ, ಗಿರೀಶ್, ಸತೀಶ್, ಗೋಕುಲ್ ಗೋವರ್ಧನ್, ಹರೀಶ್, ಚಂದ್ರು, ನಂದಾ ಸಿಂಗ್, ರವಿಶಂಕರ್, ಕೃಷ್ಣ, ಜಗದೀಶ್ ಮೊದಲಾದವರು ಇದ್ದರು.ಇದೇ ವೇಳೆ ಮೈಸೂರಿನ ಶಾರದಾದೇವಿನಗರದ ಬಡಾವಣೆಯ ನಿವೇದಿತಾನಗರ ಉದ್ಯಾನವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹುಟ್ಟು ಹಬ್ಬದ ಪ್ರಯುಕ್ತ ಸಸಿ ನೆಡಲಾಯಿತು. ಪಾಲಿಕೆ ಮಾಜಿ ಸದಸ್ಯ ಜೆ.ಎಸ್. ಜಗದೀಶ್, ಮುಖಂಡರಾದ ಎಸ್.ಟಿ. ರಘು, ಕೆ.ಎಸ್. ಶಿವಣ್ಣೇಗೌಡ, ಮಂಜುನಾಥ್, ವಾಸು, ನಾಗರಾಜು, ಲೋಹಿತ್ ಶರ್ಮಾ, ಅರ್ಜುನ್ ಪಾರ್ಥ, ಆಯಿರಳ್ಳಿ ವಿರೂಪಾಕ್ಷ, ಸತ್ಯಾನಂದ ವಿಟ್ಟು, ಮಧು, ವಿಜಯ್ ಕುಮಾರ್, ಶ್ರೀನಿವಾಸ್, ಪ್ರಸನ್ನ ಕುಮಾರ್, ಶ್ರೇಯಸ್, ಶಶಾಂಕ್ ಇದ್ದರು.