ಸಾರಾಂಶ
500 ಕೋಟಿ ರು.ದಾಟಿದ ಮಹಿಳೆಯರ ಪ್ರಯಾಣ
ಕನ್ನಡಪ್ರಭ ವಾರ್ತೆ ಹೊಸಕೋಟೆಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯು ಮಹಿಳೆಯರ 500 ಕೋಟಿ ರು.ಮೌಲ್ಯದ ಉಚಿತ ಪ್ರಯಾಣವನ್ನು ಪೂರೈಸಿದ ಸಂದರ್ಭದಲ್ಲಿ ಹಬ್ಬದಂತೆ ಬಸ್‌ಗಳಿಗೆ ಪೂಜೆ ಸಲ್ಲಿಸಿ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ ತಿಳಿಸಿದರು.
ನಗರದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಕ್ತಿ ಯೋಜನೆಯ 500 ಕೋಟಿ ರು.ದಾಟಿದ ಮಹಿಳೆಯರ ಉಚಿತ ಪ್ರಯಾಣದ ಸಂಭ್ರಮಾಚರಣೆ ಸಂದರ್ಭದಲ್ಲಿ ಮಾತನಾಡಿದರು.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದ್ದು, ಇದರ ನಡುವೆ ಚುನಾವಣೆ ಪೂರ್ವದಲ್ಲಿ ನೀಡಿರುವ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದೆ. ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯು ಸಹ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ದೃಷ್ಟಿಯಿಂದ ಸಾಕಷ್ಟು ಉಪಯುಕ್ತವಾಗಿದೆ. ಹೊಸಕೋಟೆ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಹಿಳೆಯರು ಪ್ರತಿದಿನ ಕೆಆರ್ ಮಾರುಕಟ್ಟೆಗೆ ಸಂಚಾರ ಮಾಡಿದ್ದು, ವ್ಯಾಪಾರ ವಹಿವಾಟಿನ ಮೂಲಕ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಲು ಯೋಜನೆಯು ಸಾಕಾರವಾಗಿದೆ ಎಂದರು.
ತಾಪಂ ಕಾರ್ಯ ನಿರ್ವಹಣಾಧಿಕಾರಿ ಡಾ.ಸಿ.ಎನ್ ನಾರಾಯಣಸ್ವಾಮಿ ಮಾತನಾಡಿ, ಶಕ್ತಿ ಯೋಜನೆಯು ಮಹಿಳೆಯರು ಸ್ವಾವಲಂಬನೆ ಬದುಕು ಅಷ್ಟೇ ಅಲ್ಲದೆ, ದೂರದ ಧಾರ್ಮಿಕ ಪುಣ್ಯ ಕ್ಷೇತ್ರಗಳಿಗೂ ಸಹ ಇನ್ನೊಬ್ಬರನ್ನು ಅವಲಂಬಿಸದೆ ತಾವೇ ಉಚಿತವಾಗಿ ಹೋಗಿ ಬರಲು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಎಂದರು.ಶಕ್ತಿ ಯೋಜನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಬಿಎಂಟಿಸಿ ೩೦ನೇ ಘಟಕ ವ್ಯವಸ್ಥಾಪಕ ರಾಜೇಶ್, ಬೆಸ್ಕಾಂ ಎಇಇ ಪುಟ್ಟಸ್ವಾಮಿ, ಸಿಡಿಪಿಒ ಶಿವಮ್ಮ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಬ್ಯಾಟೇಗೌಡ, ಸಯ್ಯದ್ ಮೆಹಬೂಬ್, ಡಿ.ಸಿ.ಲಕ್ಷ್ಮೀ, ಡಿ.ಟಿ. ವೆಂಕಟೇಶ್, ಮನೋಜ್ ಗೌಡ, ನವೀನ್, ಮಂಜುನಾಥ್, ಜ್ಞಾನಿ, ರಮಾದೇವಿ, ಅಮ್ಜದ್, ಶಿವಣ್ಣ, ನಾರಾಯಣಸ್ವಾಮಿ, ರಮೇಶ್, ಅರುಣ್ ಹಾಜರಿದ್ದರು.