ಸಾರಾಂಶ
ಕನಕಪುರ: ಲಯನ್ಸ್ ಕ್ಲಬ್ ಸದಸ್ಯ ಹಾಗೂ ಪರಿಸರ ಪ್ರೇಮಿ ಮರಸಪ್ಪ ರವಿ 38ನೇ ವಿವಾಹ ವಾರ್ಷಿಕೋತ್ಸವವನ್ನು 38 ಹಣ್ಣಿನ ಗಿಡಗಳನ್ನು ನೆಟ್ಟು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಕನಕಪುರ: ಲಯನ್ಸ್ ಕ್ಲಬ್ ಸದಸ್ಯ ಹಾಗೂ ಪರಿಸರ ಪ್ರೇಮಿ ಮರಸಪ್ಪ ರವಿ 38ನೇ ವಿವಾಹ ವಾರ್ಷಿಕೋತ್ಸವವನ್ನು 38 ಹಣ್ಣಿನ ಗಿಡಗಳನ್ನು ನೆಟ್ಟು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ತಾಲೂಕಿನ ಕೆರಳಾಳುಸಂದ್ರದಲ್ಲಿ ಪತ್ನಿ ರತ್ನ ಮರಸಪ್ಪ ಹಾಗೂ ಕುಟುಂಬ ಸದಸ್ಯರೊಂದಿಗೆ ಹಣ್ಣಿನ ಗಿಡ ನೆಟ್ಟು ಮಾತನಾಡಿ, ಸಮಾಜದಲ್ಲಿ ಜನ ಪ್ರಕೃತಿ ಜೊತೆಯಲ್ಲಿಯೇ ಸಹಬಾಳ್ವೆ ನಡೆಸುತ್ತಿದ್ದೇವೆ. ಮೋಜಿನ ಜೀವನಕ್ಕೆ ಅಂಟಿಕೊಳ್ಳದೆ ಪ್ರಕೃತಿಯೊಂದಿಗೆನಮ್ಮ ಆಚರಣೆಗಳನ್ನು ಆಚರಿಸಿಕೊಂಡರೆ ತೃಪ್ತಿ ಹಾಗೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೊತೆಗೆ ನಮ್ಮ ಸಹಜೀವನಕ್ಕೂ ಸಾರ್ಥಕತೆ ದೊರೆಯುತ್ತದೆ ಎಂದರು. ಮರಸಪ್ಪ ರವಿ ಕುಟುಂಬದ ಸದಸ್ಯರು ಹಾಗೂ ಜೀವನ್, ಕೃಪಾಲಕ್ಷ್ಮಿ, ಸ್ವಾತಿ, ಗಿರೀಶ್ ಸೇರಿದಂತೆ ಗ್ರಾಮಸ್ಥರು ದಂಪತಿಗೆ ಶುಭ ಕೋರಿದರು.