ಸಾರಾಂಶ
ಯೋಗವನ್ನು ದಿನನಿತ್ಯ ಮಾಡುವುದರ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬಹುದು. ಇಂದಿನ ಒತ್ತಡದ ಜೀವನವನ್ನು ನಿಭಾಯಿಸಲು ಯೋಗ ಬಹಳ ಸಹಕಾರಿಯಾಗಿದ್ದು, ಪ್ರತಿನಿತ್ಯ ಯೋಗ ಮಾಡುವುದರಿಂದ ಖಿನ್ನತೆ, ಮಾನಸಿಕ ಒತ್ತಡಗಳಿಗೆ ಮುಕ್ತಿ ಪಡೆಯಬಹುದಾಗಿದ್ದು, ಎಲ್ಲರೂ ಯೋಗಾಭ್ಯಾಸ ಮಾಡುವುದನ್ನು ಕಲಿಯಬೇಕು.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ನಗರದ ಮಂಗಳವಾರಪೇಟೆಯ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಆವರಣದಲ್ಲಿ ಯೋಗನೃತ್ಯದ ಮೂಲಕ ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರೀಗೌಡ ಮಾತನಾಡಿ, ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ, ಏಕಾಗ್ರತೆ, ಸ್ಮರಣ ಶಕ್ತಿ ಹೆಚ್ಚಳವಾಗುತ್ತದೆ. ಯೋಗ ಮಾಡುವುದರಿಂದ ಆರೋಗ್ಯವೂ ಉತ್ತಮವಾಗುತ್ತದೆ. ಎಷ್ಟೋ ಸಣ್ಣ ಪುಟ್ಟ ಸಮಸ್ಯೆಗಳಿಗೆ ಯೋಗ ರಾಮಭಾಣವಾಗಿದೆ. ಬರೀ ಸಾಂಕೇತಿಕವಾಗಿ ಯೋಗ ದಿನದಂದು ಮಾತ್ರ ಯೋಗ ಮಾಡದೇ ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕರಾದ ಮಂಜಪ್ಪ ಎಂ. ಮಾತನಾಡಿ, ಯೋಗವನ್ನು ದಿನನಿತ್ಯ ಮಾಡುವುದರ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬಹುದು. ಇಂದಿನ ಒತ್ತಡದ ಜೀವನವನ್ನು ನಿಭಾಯಿಸಲು ಯೋಗ ಬಹಳ ಸಹಕಾರಿಯಾಗಿದ್ದು, ಪ್ರತಿನಿತ್ಯ ಯೋಗ ಮಾಡುವುದರಿಂದ ಖಿನ್ನತೆ, ಮಾನಸಿಕ ಒತ್ತಡಗಳಿಗೆ ಮುಕ್ತಿ ಪಡೆಯಬಹುದಾಗಿದ್ದು, ಎಲ್ಲರೂ ಯೋಗಾಭ್ಯಾಸ ಮಾಡುವುದನ್ನು ಕಲಿಯಬೇಕು ಎಂದರು.ಕರ್ನಾಟಕ ಸೆಕೆಂಡರಿ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ರಂಗನಾಥ ಜಿ.ಕೆ, ಶಾಲೆಯ ದೈಹಿಕ ಶಿಕ್ಷಕಿಯಾದ ಲೀಲಾವತಿ, ಅವರ ನಿರ್ದೇಶನದಂತೆ ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಪರೀವಿಕ್ಷಕಿ ಭಾರತಿ, ಭಾರತ ವಿಕಾಸ್ ಪರಿಷದ್‌ನ ಅಧ್ಯಕ್ಷ ಗುರುಮಾದಯ್ಯ, ಪದಾಧಿಕಾರಿಗಳಾದ ವಸಂತಕುಮಾರ್, ರಮೇಶ್, ಶಿವಲಿಂಗಯ್ಯ, ತಿಪ್ರೇಗೌಡರು, ಶಿಕ್ಷಕರಾದ ಭವ್ಯಶ್ರೀ ಎಚ್.ಎಸ್ ಈರಾನಾಯಕ್, ಸೌಮ್ಯನಾಯ್ಕ್, ಲಕ್ಷ್ಮೀ, ಪುಟ್ಟಪ್ಪ, ನಜ್ಮಾ, ರೇಣುಕಮ್ಮ, ರಾಜಲಕ್ಷ್ಮೀ, ಯೋಗೇಶ್ ಇತರರು ಇದ್ದರು.