ಸಾರಾಂಶ
ಬೆಳವಣಿಕಿ ಗ್ರಾಮದಲ್ಲಿ ಭಾನುವಾರ ಸಂಜೆ ಸೃಜನಶೀಲ ವಿದ್ಯಾಸಂಸ್ಥೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು
ಕನ್ನಡಪ್ರಭ ವಾರ್ತೆ ರೋಣ
ನರೇಂದ್ರ ಮೋದಿ ಅವರು 3ನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷ ಹೊಳೆ ಆಲೂರು ಮಂಡಲ ಎಸ್ಸಿ ಮೋರ್ಚಾದ ವತಿಯಿಂದ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಭಾನುವಾರ ಸಂಜೆ ಸೃಜನಶೀಲ ವಿದ್ಯಾಸಂಸ್ಥೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರುಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ವೈ. ಚಲವಾದಿ ಮಾತನಾಡಿ, ನರೇಂದ್ರ ಮೋದಿ 3ನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ನರೇಂದ್ರ ಮೋದಿ ಸಂಸತ್ತು ಪ್ರವೇಸಿಸುವ ಸಂದರ್ಭದಲ್ಲಿ ಭಾರತೀಯ ಸಂವಿಧಾನಕ್ಕೆ ತಲೆಬಾಗಿ ಗೌರವಿಸಿದ್ದಾರೆ. ಇದು ಅವರಿಗೆ ಸಂವಿಧಾನದ ಮೇಲಿರುವ ಗೌರವ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದರು.
ಬಿಜೆಪಿ ಹೊಳೆ ಆಲೂರ ಮಂಡಲ ಎಸ್ಸಿ ಮೋರ್ಚಾದ ಅಧ್ಯಕ್ಷ ಶೇಖಪ್ಪ ಮಾದರ ಮಾತನಾಡಿ, ನರೇಂದ್ರ ಮೋದಿ ಸಂವಿಧಾನವೇ ಧರ್ಮಗ್ರಂಥವೆಂದು ಹೇಳಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಂಚಸ್ಥಳಗಳನ್ನು ಅಭಿವೃದ್ದಿಗೊಳಿಸಿ ಅಂಬೇಡ್ಕರ್ ಅವರಿಗೆ ಗೌರವಿಸಿದ್ದಾರೆ. ದಲಿತರ ಬಗ್ಗೆ, ಬಡವರ ಬಗ್ಗೆ ಕಾಳಜಿ ಇರುವ ಧೀಮಂತ ನಾಯಕ ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ನಮ್ಮೆಲ್ಲರಿಗೂ ಅತೀವ ಸಂತೋಷ ತಂದಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಹೊಳೆ ಆಲೂರು ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮುದಿಯಪ್ಪ ದಾನಿ, ನಿಂಗಬಸಪ್ಪ ಹದ್ಲಿ, ಶಿವು ಪೂಜಾರ, ಶರಣಪ್ಪ ಮಾದರ, ಮಂಜು ಚುಳಕಿ, ಬಸು ನಾಯ್ಕರ್, ಪುಂಡಲೀಕ ಮಾದರ, ಯೋಗಪ್ಪ ದಾನಿ, ಲಕ್ಷ್ಮಣ ಮಾದರ ಮುಂತಾದವರು ಉಪಸ್ಥಿತರಿದ್ದರು.