ಕೇಂದ್ರ ಸಚಿವರಾಗಿ ಎಚ್‌ಡಿಕೆ, ಜೆಡಿಎಸ್‌ನಿಂದ ಸಂಭ್ರಮಾಚರಣೆ

| Published : Jun 11 2024, 01:33 AM IST

ಕೇಂದ್ರ ಸಚಿವರಾಗಿ ಎಚ್‌ಡಿಕೆ, ಜೆಡಿಎಸ್‌ನಿಂದ ಸಂಭ್ರಮಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿಜಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷ ಎಚ್. ಡಿ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ನಗರದ ಮೈಲಾರ ಮಹದೇವ ವೃತ್ತದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಘಟಕದಿಂದ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

ಹಾವೇರಿ: ನರೇಂದ್ರ ಮೋದಿಜಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷ ಎಚ್. ಡಿ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ನಗರದ ಮೈಲಾರ ಮಹದೇವ ವೃತ್ತದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಘಟಕದಿಂದ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ರಾಜ್ಯ ಉಪಾಧ್ಯಕ್ಷ ಸಿದ್ದಬಸಪ್ಪ ಯಾದವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌನೇಶ ಕಮ್ಮಾರ, ಜಿಲ್ಲಾ ಉಪಾಧ್ಯಕ್ಷ ಅಮೀರಜಾನ್ ಬೇಫಾರಿ, ಪಡೆಪ್ಪನವರ, ಚಂದ್ರಗೌಡ ಬರಮಗೌಡ್ರ, ಮಲ್ಲಿಕಾರ್ಜುನ ಅರಳಿ, ಈರಣ್ಣ ನವಲಗುಂದ, ಮಾಲತೇಶ ಬೇವಿನಹಿಂಡಿ, ಸುನಿಲ್ ದಂಡೆಮ್ಮನವರ, ರಮೇಶ ಮಾಕನೂರು, ಇಬ್ರಾಹಿಂ ಯಲಗಚ್ಚ, ಸಿದ್ದಣ್ಣ ಗುಡಿಮುಂದ್ಲಾವರ, ಮಾಲತೇಶ ಬಡಿಗೇರ, ಮಲ್ಲಿಕಾರ್ಜುನ ಹಲಗೇರಿ, ಸುನಿಲ್ ಕನವಳ್ಳಿ, ಜ್ಯೋತಿ ಚಿಗಳಲ್ಲಿ, ದೀಪಾ ದಳವಾಯಿ, ಕಸ್ತೂರಿ ಅರ್ಕಾಚಾರಿ ಉಷಾ ಜಾಡಮಲಿ, ಗಂಗಾ ಇಂಚಗಿ ಇತರರು ಇದ್ದರು.