ಅರ್ಬನ್ ಹಾತ್ ನಲ್ಲಿ ಕೈಮಗ್ಗ ವಸ್ತುಗಳ ಮಾರಾಟ

| Published : Jul 31 2025, 12:45 AM IST

ಸಾರಾಂಶ

ಆ. 5 ರವರೆಗೆ ರಾಜ್ಯ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ - ಹಾತ್‌ ಕರ್ಗ್‌ 2025

ಕನ್ನಡಪ್ರಭ ವಾರ್ತೆ ಮೈಸೂರುಶ್ರಾವಣ, ಭಾದ್ರಪದದ ಸಾಲು ಸಾಲು ಹಬ್ಬಗಳ ಸಂಭ್ರಮಕ್ಕೆ ನಗರದ ಜೆಎಸ್‌ಎಸ್‌ಅರ್ಬನ್‌ಹಾಥ್‌ ರಾಜ್ಯದ ಕೈಮಗ್ಗ ವಸ್ತುಗಳ ಮಾರಾಟ ಮೇಳವನ್ನು ಆಯೋಜಿಸಿದೆ.ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ರಿಂಗ್ ರಸ್ತೆಯ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್‌.‌ಈ ಬಾರಿ ಒಂದೇ ಸೂರಿನಡಿ ವಿಶೇಷ ಕೈಮಗ್ಗ ಮೇಳ ನಡೆಯುತ್ತಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲತೆ ಲಭ್ಯವಾಗಲಿದೆ.ಆ. 5 ರವರೆಗೆ ರಾಜ್ಯ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ - ಹಾತ್‌ ಕರ್ಗ್‌ 2025 ಆಯೋಜಿಸಿದೆ.ನವದೆಹಲಿಯ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಸಚಿವಾಲಯದ ಸಹಯೋಗದೊಂದಿಗೆ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿದೇರ್ಶಕರು, ಕೈಮಗ್ಗಮತ್ತು ಜವಳಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ ಮತ್ತು ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನ ಆಶ್ರಯದಲ್ಲಿ ಕೈಮಗ್ಗ ಮೇಳ ವನ್ನು ಆಯೋಜಿಸಲಾಗಿದೆ.ನೇಕಾರರು, ನೇಕಾರರ ಸಹಕಾರ ಸಂಘಗಳು ಸಿದ್ಧಗೊಳಿಸುವ ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚು ಮಾರುಕಟ್ಟೆ ಒದಗಿಸುವ ಮತ್ತು ಅವರ ಕೌಶಲವನ್ನು ಪ್ರಚುರಪಡಿಸುವ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿದೆ. ಸಾಂಪ್ರದಾಯಿಕ ಹಾಗೂ ವೈಶಿಷ್ಟ್ಯಪೂರ್ಣ ಪರಿಕರಗಳ ಲಭ್ಯತೆಯೂ ಈ ಮೇಳದ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುಗಳು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ನೇಕಾರರಿಂದ ಸಿಗುತ್ತಿವೆ.ನಮ್ಮ ರಾಜ್ಯದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಗದಗ, ಬಾಗಲಕೋಟೆ, ಕಲಬುರ್ಗಿ ಮತ್ತು ಇಳಕಲ್ ನ ಕೈಮಗ್ಗ ನೇಕಾರರು ತಮ್ಮ ಉತ್ಪನ್ನಗಳೊಂದಿಗೆ ಮೇಳಕ್ಕೆ ಮೆರುಗು ನೀಡಿದ್ದಾರೆ. ಕೈಮಗ್ಗ, ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಲಾದ ಕೈಮಗ್ಗ ಉತ್ಪನ್ನಗಳನ್ನು 75 ಕ್ಕೂ ಹೆಚ್ಚು ನೇಕಾರರು, ನೇಕಾರರ ಸಹಕಾರ ಸಂಘಗಳು ಪ್ರದರ್ಶಿಸುತ್ತಿದ್ದು, ಮಾರಾಟ ಮಾಡುತ್ತಿದ್ದಾರೆ.ನಮ್ಮ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ರೇಷ್ಮೆ ಸೀರೆ, ಸಾಲೇಶ್ವರ ಕೈಮಗ್ಗ ನೇಕಾರರ ಸಹಕಾರ ಸಂಘ ಗದಗ ಇವರ ಮಳಿಗೆಯಲ್ಲಿ ರಾಜ್ಯದ ಇಳಕಲ್ ಸೀರೆಗಳು ಜನರನ್ನು ಆಕರ್ಷಿಸುತ್ತಿದೆ. ಸಾಂಪ್ರದಾಯಿಕ ಇಳಕಲ್‌ ಸೀರೆಗಳ ನೇಯ್ಗೆಯಂತೂ ಕಣ್ಣಿಗೆ ಹಬ್ಬವನ್ನೇ ಉಂಟುಮಾಡುತ್ತವೆ.

ತಮಿಳುನಾಡಿನ ಕಾಂಚೀವರಂ, ಉತ್ತರ ಪ್ರದೇಶದ ವಾರಣಾಸಿ ಕೈಮಗ್ಗ ನೇಕಾರರ ಮಳಿಗೆಯಲ್ಲಿ ಪರಿಶುದ್ಧ ಬನಾರಸಿ ರೇಷ್ಮೆ ಸೀರೆಗಳು ಆಕರ್ಷಣೀಯವಾಗಿವೆ.ಆಂಧ್ರಪ್ರದೇಶದ ಗಡ್ವಾಲ್ ರೇಷ್ಮೆ ಸೀರೆ, ಕಾಶ್ಮೀರ ರಾಜ್ಯದ ಮಳಿಗೆಯಲ್ಲಿ ಉತ್ತಮ ಗುಣಮಟ್ಟದ ಪಶ್ಮಿನಾ ಶಾಲುಗಳು ಜನಾಕರ್ಷಣೆಗೊಂಡಿದೆ. ಪಶ್ಚಿಮ ಬಂಗಾಳ ರಾಜ್ಯದ ಮಳಿಗೆಗಳಲ್ಲಿ ಕೈಮಗ್ಗದ ರೇಷ್ಮೆ ಸೀರೆಗಳು, ಕಾಂತವರ್ಕ್ ಸೀರೆಗಳು, ಬಲಚೂರಿ ಸೀರೆಗಳು ಕಡಿಮೆ ಬೆಳೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.-- ಬಾಕ್ಸ್- -- ಹಲವು ಆಕರ್ಷಣೆ--ಬೆಂಗಳೂರಿನ ಕಾವೇರಿ ಹ್ಯಾಂಡ್ಲೂಮ್ಸ್ ಮಳಿಗೆಯಲ್ಲಿ ಕೈಮಗ್ಗ ಉತ್ಪನ್ನಗಳು ಅದರಲ್ಲಿಯೂ ಮುಖ್ಯವಾಗಿ ಬೆಡ್ ಶೀಟ್ ಗಳು ನೆಲ ಹೊದಿಕೆಗಳು ಹೆಚ್ಚು ಆಕರ್ಷಣೀಯವಾಗಿದೆ.ವಿಶೇಷ ಕೈಮಗ್ಗ ಮೇಳದಲ್ಲಿ ಜಮ್ಮು- ಕಾಶ್ಮೀರ, ದೆಹಲಿ, ರಾಜಸ್ತಾನ್, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಹರಿಯಾಣ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಕೈಮಗ್ಗ ನೇಕಾರರ ಮಳಿಗೆಗಳು ಮೇಳದ ಆಕರ್ಷಣೀಯವಾಗಿದೆ.