ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್‌ ಗೆಲುವಿನ ಸಂಭ್ರಮ

| Published : Nov 24 2024, 01:48 AM IST

ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್‌ ಗೆಲುವಿನ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದ ಕೆ. ಆರ್‌. ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಸೂಕ್ತವಾಗಿ ಬಡವರು ದೀನದಲಿತರು ಶೋಷಿತ ಸಮುದಾಯಕ್ಕೆ ಪ್ರಾಮಾಣಿಕವಾಗಿ ತಲುಪಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಮೂರೂ ಕ್ಷೇತ್ರದಲ್ಲೂ ಸಹ ಜನ ಕೈ ಹಿಡಿದಿದ್ದಾರೆ ಕಾಂಗ್ರೆಸ್ ಎಂದಿಗೂ ಜನರ ಪರವಾಗಿ ಕೆಲಸ ಮಾಡುತ್ತದೆ ಹೊರತು ಅಪಪ್ರಚಾರ ಮಾಡುವುದಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದ ಕೆ. ಆರ್‌. ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ವಕೀಲರು ಹಾಗೂ ಗ್ಯಾರಂಟಿ ಯೋಜನ ಅನುಷ್ಠಾನ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್‌ಗೌಡ, ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಸೂಕ್ತವಾಗಿ ಬಡವರು ದೀನದಲಿತರು ಶೋಷಿತ ಸಮುದಾಯಕ್ಕೆ ಪ್ರಾಮಾಣಿಕವಾಗಿ ತಲುಪಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಮೂರೂ ಕ್ಷೇತ್ರದಲ್ಲೂ ಸಹ ಜನ ಕೈ ಹಿಡಿದಿದ್ದಾರೆ ಕಾಂಗ್ರೆಸ್ ಎಂದಿಗೂ ಜನರ ಪರವಾಗಿ ಕೆಲಸ ಮಾಡುತ್ತದೆ ಹೊರತು ಅಪಪ್ರಚಾರ ಮಾಡುವುದಿಲ್ಲ. ಯಾವುದೇ ಪಕ್ಷ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂಬ ಅಪಪ್ರಚಾರಕ್ಕೆ ಕಿವಿ ಕೊಡದೆ ಇನ್ನು ಮೂರುವರೆ ವರ್ಷಗಳ ಕಾಲ ಸದೃಢವಾಗಿ ಸರ್ಕಾರ ನಡೆಯುತ್ತದೆ. ಗ್ಯಾರೆಂಟಿ ಯೋಜನೆಗಳಿಗೆ ಜನ ಕೈ ಹಿಡಿದಿದ್ದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ಶ್ರಮದ ಫಲವಾಗಿ ಈ ಬಾರಿ ಮೂರೂ ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಿದೆ ಎಂದರು.ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ. ಜಿ. ಮೂರ್ತಿ ಹಾಗೂ ರೈತ ಸಂಘದ ತಾಲೂಕು ಅಧ್ಯಕ್ಷ ಸಿ. ಜಿ. ರವಿ ಮಾತನಾಡಿ, ಕಾಂಗ್ರೆಸ್ ಆಡಳಿತವನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಮತದಾರರು ಮೂರೂ ಕ್ಷೇತ್ರದಲ್ಲೂ ಸಹ ಕಾಂಗ್ರೆಸ್ ಪಕ್ಷವನ್ನ ಕೈ ಹಿಡಿದಿದ್ದಾರೆ, ಯಾವುದೇ ಸಮೀಕ್ಷೆ ಆಗಲಿ ರಾಜಕಾರಣಿಗಳು ಏನೇ ಹೇಳಿದರೂ ಕೊನೆಗೆ ಮತದಾರರೇ ನಿರ್ಣಾಯಕರಾಗಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷದ ಯೋಜನೆಗಳನ್ನ ಪ್ರಾಮಾಣಿಕವಾಗಿ ಜನರಿಗೆ ನೀಡುವುದನ್ನ ಉದ್ದೇಶದಲ್ಲಿಟ್ಟುಕೊಂಡು ಈ ಬಾರಿ ಮತದಾರರು ಮತ ನೀಡಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಉತ್ತಮ ಆಡಳಿತ ಈ ಬಾರಿ ಫಲ ನೀಡಿದ್ದು ಸಿ. ಪಿ. ಯೋಗೇಶ್ವರ್ ಅವರ ಗೆಲುವು ಹಳೆ ಮೈಸೂರು ಪ್ರಾಂತ್ಯಕ್ಕೆ ಹೆಚ್ಚು ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿಯ ಬಗ್ಗೆ ಕಾಂಗ್ರೆಸ್ ಪಕ್ಷ ಗಮನ ನೀಡಲಿದೆ ಎಂದರು.ಇದೇ ಸಂದರ್ಭದಲ್ಲಿ ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಯುವರಾಜ್, ಎಚ್. ಸಿ. ಶಂಕರ ಲಿಂಗೇಗೌಡ, ಕೆಡಿಪಿ ಸದಸ್ಯ ಕಬ್ಬಾಳು ಮಹೇಶ್, ಕಿರಣ್‌ ನುಗ್ಗೇಹಳ್ಳಿ, ರುದ್ರೇಶ್‌ ಮಟ್ಟನವಿಲೆ, ಶಂಕರ್‌ ಬರಗೂರು, ಕಾರ್ತಿಕ್‌ ಮರುವನಹಳ್ಳಿ, ಪ್ರಸನ್ನ, ಸ್ವಾಮಿ, ಇಲಿಯಾಜ್, ಆನಂದ್ ಮತ್ತಿತರಿದ್ದರು.