ದೇಶಾದ್ಯಂತ ಸಹಕಾರ ಸಪ್ತಾಹ ಆಚರಣೆ: ಎಸ್.ಟಿ.ರಾಜು

| Published : Nov 15 2024, 12:37 AM IST

ಸಾರಾಂಶ

ಶ್ರೀರಂಗಪಟ್ಟಣದ ಶ್ರೀಕೃಷ್ಣ ರಾಜೇಂದ್ರ ಸಹಕಾರ ಸಂಘದ ಕಟ್ಟಡದಲ್ಲಿ ಧ್ವಜಾರೋಹಣ ನೆರವೇರಿಸಿ ಸಪ್ತಾಹ ಆಚರಿಸಿ, ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ದೇಶಾದ್ಯಂತ ನ.14ರಿಂದ 7 ದಿನಗಳ ಕಾಲ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಶ್ರೀಕೃಷ್ಣರಾಜೇಂದ್ರ ಸಹಕಾರ ಸಂಘದ ಅಧ್ಯಕ್ಷ ಎಸ್.ಟಿ ರಾಜು ಹೇಳಿದರು.

ಪಟ್ಟಣದ ಶ್ರೀಕೃಷ್ಣ ರಾಜೇಂದ್ರ ಸಹಕಾರ ಸಂಘದ ಕಟ್ಟಡದಲ್ಲಿ ಧ್ವಜಾರೋಹಣ ನೆರವೇರಿಸಿ ಸಪ್ತಾಹ ಆಚರಿಸಿ ಮಾತನಾಡಿ, ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ಸಂಘದ ಕಟ್ಟಡದಲ್ಲಿ ಸಹಕಾರ ಧ್ವಜಾರೋಹಣ ನೆರವೇರಿಸಿದ್ದು, ನ.20ರ ವರೆಗೆ ಸಪ್ತಾಹ ಅಚರಣೆ ಮಾಡಲಾಗುತ್ತಿದೆ ಎಂದರು.

ಈ ವೇಳೆ ಉಪಾಧ್ಯಕ್ಷ ಎನ್. ರಾಮಚಂದ್ರ, ನಿರ್ದೇಶಕರಾದ ಎಸ್.ಕೆ ಕುಬೇರ್‌ಸಿಂಗ್, ಕೆ.ಲಿಂಗಯ್ಯ, ವಿ.ನಾರಾಯಣ್, ಜಿ.ವಿ ನಾರಾಯಣಸ್ವಾಮಿ, ಎಸ್.ರಘು, ಭಾನುಮತಿ ಚಂದ್ರಶೇಖರ್, ಸಾಯಿಲೀಲ, ಶ್ರೀಕಂಠ, ಸಂಘದ ಸಿಇಒ ವಸಂತ್‌ಕುಮಾರ್ ಹಾಗೂ ಸಿಬ್ಬಂದಿ ಹಾಜರಿದ್ದರು.

ರೌಡಿಶೀಟರ್‌ಗಳ ಪರೇಡ್‌

ಶ್ರೀರಂಗಪಟ್ಟಣ:

ತಾಲೂಕಿನ ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳ ಪರೇಡ್ ಪೊಲೀಸ್ ಠಾಣಾ ಆವರಣದಲ್ಲಿ ನಡೆಸಲಾಯಿತು.

ಸುಮಾರು 25ಕ್ಕೂ ಹೆಚ್ಚು ರಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳು ಪರೇಡ್‌ನಲ್ಲಿ ಹಾಜರಿದ್ದರು. ಪಿಎಸ್‌ಐ ರಮೇಶ ಕರ್ಕಿಕಟ್ಟೆ ರೌಡಿ ಶೀಟರ್‌ಗಳ ಪ್ರಸ್ತುತ ವೈಯಕ್ತಿಕ ಕೆಲಸಗಳ ಬಗ್ಗೆ ಪ್ರತ್ಯೇಕವಾಗಿ ಮಾತನಾಡಿಸಿ ಮಾಹಿತಿ ಪಡೆದುಕೊಂಡರು.

ನಂತರ ಯಾವುದೇ ಕಾನೂನ ಬಾಹಿರ ಚಟುವಟಿಕೆಗಳು ತೊಡಗದಂತೆ ಎಚ್ಚರಿಕೆ ನೀಡಿ, ಕೃತ್ಯಗಳಲ್ಲಿನ ಸಾಕ್ಷಿಗಳಿಗೆ ಯಾವುದೇ ಬೆದರಿಕಿ ಹಾಕಿದರೆ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು.

ತಮ್ಮ ಈ ಹಿಂದಿನ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಆಲೋಚನೆ ಮಾಡಿ, ಕಳೆದು ಹೋದ ದಿನಗಳು ಮತ್ತೆ ಬರುವುದಿಲ್ಲ. ಇನ್ನು ಮುಂದೆ ಉತ್ತಮ ಜೀವನ ನಡೆಸುವಂತೆ ತಿಳಿವಳಿಕೆ ನೀಡಿದರು.