ಸಂಭ್ರಮದ ದತ್ತ ಜಯಂತಿ ಆಚರಣೆ

| Published : Dec 27 2023, 01:31 AM IST / Updated: Dec 27 2023, 01:32 AM IST

ಸಾರಾಂಶ

ಪಟ್ಟಣದ ಗೋಸ್ವಾಮಿ ಶ್ರೀ ರಾಮಭಾರತಿ ಮಠದಲ್ಲಿ ಶ್ರೀಗುರು ದತ್ತಾತ್ರೇಯ ಜಯಂತಿ ಮಹೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬಹಳಷ್ಟು ಸಡಗರ, ಸಂಭ್ರಮದಿಂದ ಜರುಗಿದವು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದ ಗೋಸ್ವಾಮಿ ಶ್ರೀ ರಾಮಭಾರತಿ ಮಠದಲ್ಲಿ ಶ್ರೀಗುರು ದತ್ತಾತ್ರೇಯ ಜಯಂತಿ ಮಹೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬಹಳಷ್ಟು ಸಡಗರ, ಸಂಭ್ರಮದಿಂದ ಜರುಗಿದವು.

ದತ್ತಾತ್ರೇಯ ಜಯಂತಿ ಮಹೋತ್ಸವದ ನಿಮಿತ್ತವಾಗಿ ಪುಣ್ಯಾವಾಚನ, ರುದ್ರಾಭಿಷೇಕ, ಮಹಾಪೂಜೆ ಕಾರ್ಯಕ್ರಮಗಳು ನಡೆದವು. ಶ್ರೀಗುರು ದತ್ತಾತ್ರೇಯರಿಗೆ ತೊಟ್ಟಿಲೋತ್ಸವ, ಸತ್ಯನಾರಾಯಣ ಪೂಜೆ ಸೇರಿದಂತೆ ಶ್ರೀದತ್ತ ದೇವರಿಗೆ ವಿಶೇಷ ಹೂವಾಲಂಕಾರ ಮಾಡಿ ಪೂಜಿಸಲಾಯಿತು.

ಕಾಶಿನಾಥ ಮಹಾಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಶಿಲ್ಪಾ ಶೀಲವಂತ, ದೀಪಾ ಶೀಲವಂತ, ಸರೋಜಾ ಭಾರತಿ, ಸವಿತಾ ಭಾರತಿ, ಶಾರದಾ ನರೇಗಲ್ಲ, ಪ್ರೇಮಾ ಭಾರತಿ, ಮೀನಾಕ್ಷಿ ಅಂಬೇಕರ ಅವರಿಂದ ದತ್ತ ದೇವರ ತೋಟ್ಟಿಲೋತ್ಸವ ನಡೆಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ರಾಜಶೇಖರ ಶೀಲವಂತ, ಶ್ರೀಮಹೇಶ ಭಾರತಿಮಠ, ಶ್ರೀರಾಮ ಭಾರತಿಮಠ, ವಿಶ್ವನಾಥ ಭಾರತಿಮಠ, ಸಂಪತ್ತಕುಮಾರ ರಾಠಿ, ಶಹಾಜಿ ಪವಾರ, ಕೃಷ್ಣಮೂರ್ತಿ ಹಂದ್ರಾಳ ಸೇರಿದಂತೆ ಇನ್ನೂ ಅನೇಕರು ಇದ್ದರು.